- ರಾಜ್ಯ ಸುದ್ದಿ:
ಮುದ್ದೇಬಿಹಾಳ:
ತಂದೆಯೊಂದಿಗೆ ಹೊಲಕ್ಕೆ ತೆರಲಿದ್ದ ಬಾಲಕನೊಬ್ಬ ಕಾಲುಜಾರಿ ಚಿಮ್ಮಲಗಿ ಏತ್ ನೀರಾವರಿ ಕಾಲುವೆ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ವ್ಯಾಪ್ತಿಯ ಬಳವಾಟ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತಪಟ್ಟ ಬಾಲಕು ಆಕಾಶ ಜಗದೀಶ ಹೂಗಾರ(9) ಎಂದು ಗುರುತಿಸಲಾಗಿದ್ದು ಬುಧವಾರ ತನ್ನ ತಂದೆಯೊಂದಿಗೆ ಹೊಲಕ್ಕೆ ಹೋಗಿದ್ದನು. ಆದರೆ ಸಂಜೆಯಾದರೂ ಮನೆಗೆ ಮರಳಿ ಬಾರದ ಕಾರಣ ಸಂಶಯಗೊಂಡ ಪಾಲಕರು ಹೊಲದ ಪಕ್ಕದಲ್ಲಿಯೇ ಇರುವ ಪಶ್ಚಿಮ ಕಾಲುವೆಯಲ್ಲಿ ಮುದ್ದೇಬಿಹಾಳ ಪಟ್ಟಣದ ಅಗ್ನಿಶಾಮಮಕದಳ ಸಿಬ್ಬಂದಿಗಳ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ. ನಂತರ ಗುರುವಾರ ಸಂಜೆ ಬಾಲಕ ಶವ ಮೀನಿಗಾಗಿ ಹಾಕಲಾಗಿದ್ದ ಬಲೆಗೆ ಸಿಕ್ಕು ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ತಾಳಿಕೋಟಿ ಪೊಲೀಸ ಠಾಣೆಯಲ್ಲಿ ಪಿಎಸ್ಐ ಗೋವಿಂದಗೌಡ ಪಾಟೀಲ ಪ್ರಕರಣವನ್ನು ದಾಖಲಿಸಿದ್ದಾರೆ.
Be the first to comment