ಮುದ್ದೇಬಿಹಾಳ:
ಒಬ್ಬ ರಾಜಕೀಯ ವ್ಯಕ್ತಿಯನ್ನು ಹಿಡಿದು ಸರಕಾರದಿಂದ ಒಂದು ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿಕೊಳ್ಳುವುದು ದೊಡ್ಡ ವಇಷಯವಲ್ಲ. ತಮ್ಮ ಸಮುದಾಯದಿಂದ ಸಾಮಜಕ್ಕಾಗಿ ಒಂದು ಶುದ್ಧ ನೀರಿನ ಘಟಕ ನೀಡುವುದು ನೀಜವಾದ ದೊಡ್ಡತನ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಇಲ್ಲಿನ ಬಸ್ ನಿಲ್ದಾದಲ್ಲಿ ದಿ.ಸೋಗಮಲ್‌ಜೀ ಪೀರಾಜಿ ಓಸ್ವಾಲ ಹಾಗೂ ಪರಿವಾರದ ದೇಣಿಗೆಯಿಂದ ಮತ್ತ ವಾಸು ಪೂಜ್ಯ ಜೈನ ಶ್ವೇತಾಂಬರ ಟ್ರಸ್ಟ್ ಸಹಯೋಗದೊಂದಿಗೆ ಸ್ಥಾಪನೆಗೊಂಡ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಒಂದು ಶುದ್ಧ ಕುಡಿಯವ ನೀರಿನ ಘಟಕ ಸ್ಥಾಪಿಸಬೇಕು ಎಂದು ಓಸ್ವಾಲ್ ಕುಟುಂಬದವರು ಹಾಗೂ ಟ್ರಸ್ಟ್‌ನವರು ಮನವಿ ಮಾಡಿಕೊಂಡಿದ್ದರು. ಅದರಂತೆ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳಾವಕಾಶ ಮಾಡಿಕೊಡಲಾಗಿತ್ತು. ಹೇಳಿದಂತೆ ಓಸ್ವಾಲ್ ಕುಟುಂಬದವರು ಅದನ್ನು ಕಾರ್ಯರೂಪಕ್ಕೆ ತಂದಿದ್ದು ಎಲ್ಲರೂ ಮೆಚ್ಚುವ ಕಾರ್ಯವಾಗಿದೆ ಎಂದು ಅವರು ಹೇಳಿದರು.
ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಮಾತನಾಡಿ, ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಶುದ್ಧ ನೀರಿನ ಘಟಕ ಬಹಳ ಅವಶ್ಯವಿತ್ತು. ಜೈನ ಸಮುದಾಯದವರು ಈ ಕಾರ್ಯವನ್ನು ಸ್ಥಾಪಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದು ಶ್ಲಾಘನೀಯವಾದದ್ದು. ಇಂತಹ ಕಾರ್ಯ ಎಲ್ಲ ಸಮಾಜದವರಿಂದಲೂ ಆಗಬೇಕು. ಅಲ್ಲದೇ ಘಟಕದ ನೀರಿನ ಬಳಕೆಯಲ್ಲಿ ಸಾರ್ವಜನಿಕರು ನಿಗಾ ಇಡಬೇಕು. ಇದಕ್ಕೆ ಸಾರಿಗೆ ವ್ಯವಸ್ಥಾಪಕರು ಸಿಬ್ಬಂದಿಯನ್ನು ನೇಮಿಸಿ ಘಟಕದ ಶುದ್ಧತೆಯನ್ನು ಕಾಪಾಡಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತ ತಾಲೂಕಾಧ್ಯಕ್ಷ ಎಂ.ಬಿ.ನಾವದಗಿ, ಕರ್ನಾಟಕ ಕೋ-ಆಪರೇಟಿವ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿದರು.
ಇದೇ ವೇಳೆಯಲ್ಲಿ ದಿ.ಸೋಗಮಲ್‌ಜೀ ಪೀರಾಜಿ ಓಸ್ವಾಲ ಪರಿವಾರದವರಾದ ಗುಲಾಬಚಂದ ಓಸ್ವಾಲ, ರಮೇಶ ಓಸ್ವಾಲ, ಬೈರವ ಓಸ್ವಾಲ್ ಅವರಿಗೆ ಸಮಾಜದವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೈನ ಶ್ವೇತಾಂಬರ ಟ್ರಸ್ಟ್ ಅಧ್ಯಕ್ಷ ಭೊರಮಾಲ್ ಓಸ್ವಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಸೋಮನಗೌಡ ಪಾಟೀಲ, ಸಾರಿಗೆ ಘಟಕದ ವ್ಯವಸ್ಥಾಪಕ ರಾಹುಲ್ ಹೊನಸೂರೆ, ಬಿಜೆಪಿ ಹಿರಿಯ ಧುರಿಣ ಬಾಬುಲಾ ಓಸ್ವಾಲ, ಶ್ರೀಪಾದ ಪೋರವಾಲ್ ವೇಧಿಕೆಯಲ್ಲಿದ್ದರು.
ವಿಕ್ರಮ ಓಸ್ವಾಲ ಸ್ವಾಗತಿಸಿದರು. ಟಿ.ಡಿ.ಲಮಾಣಿ ನಿರೂಪಿಸಿದರು. ಸಿದ್ದನಗೌಡ ಬಿಜ್ಜೂರ ವಂದಿಸಿದರು.
Be the first to comment