ನೆರವಾಗುವ ಮೂಲಕ ಸ್ವಾತಂತ್ರ‍್ಯ ದಿನ ಆಚರಿಸಿಕೊಂಡ ಕರವೇ ಸ್ವಾಭಿಮಾನಿ ಬಣ

ವರದಿ: ಕುಮಾರ್ ನಾಯ್ಕ

ಜಿಲ್ಲಾ ಸುದ್ದಿಗಳು 

ಕುಮಟಾ:

CHETAN KENDULI

ಕರವೇ ಸ್ವಾಭಿಮಾನಿ ಬಣ ಸಂಘಟನೆ, ಸರಿಯಾದ ಸೂರಿಲ್ಲದೆ ಅತಂತ್ರರಾಗಿದ್ದ ಅಸಾಹಯಕ ಕುಟುಂಬಕ್ಕೆ ಸೂರನ್ನು ಕಲ್ಪಸಿಕೊಟ್ಟು ಸ್ವಾತಂತ್ರ‍್ಯ ದಿನವನ್ನು ಆಚರಿಸಿಕೊಂಡಿದೆ.

ತಾಲೂಕಿನ ಅಳಕೋಡ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅನಾರೋಗ್ಯದಿಂದಿರುವ ಕಡು ಬಡ ಕುಟುಂಬಕ್ಕೆ ಸೂರು ಹಾಗೂ ಅಗತ್ಯ ಆಹಾರ ಸಾಮಗ್ರಿಗಳನ್ನು ಸಾವಿತ್ರಿ ರಾಘವ ನಾಯರ್ ಎನ್ನುವ ಬಡ ಮಹಿಳೆ ಕುಟುಂಬಕ್ಕೆ ನೀಡಿದರು.

ಸಾವಿತ್ರಿ ನಾಯರ್ ಅವರ ಮನೆ ಹಾಳಾಗಿದ್ದು, ಮಳೆ ಬಂದರೆ ಮನೆಯ ಮೇಲ್ಛಾವಣಿಯಿಂದ ನೀರು ಸೋರುತ್ತಿತ್ತು.ಇದರಿಂದಾಗಿ ಮನೆಯಲ್ಲಿ ಉಳಿದುಕೊಳ್ಳು, ಅಡುಗೆ ಮಾಡಲೂ ಸಹ ಕಷ್ಟವಾಗುತ್ತಿತ್ತು.ಜೊತೆಗೆ ಸಾವಿತ್ರಿಯವರಿಗೆ ಓರ್ವ ಮಗ ಹಾಗೂ ಮಗಳಿದ್ದು, ಇಬ್ಬರೂ ಮಾನಸಿಕ ಅಸ್ವಸ್ಥರು ಹಾಗೂ ಅಂಗವಿಕಲರೂ ಕೂಡ. ಮನೆಯ ನಿರ್ವಹಣೆ,ಮಕ್ಕಳ ಆರೋಗ್ಯ, ತನ್ನ ಆರೋಗ್ಯನ್ನೂ ನೋಡಿಕೊಳ್ಳಲು ಸರಿಯಾದ ದುಡಿಮೆ ಕೂಡ ಇಲ್ಲದೆ ಸಾವಿತ್ರಿ ಕಂಗಾಲಾಗಿದ್ದರು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣ ಕತಗಾಲ ಘಟಕಾಧ್ಯಕ್ಷರಾದ ಮಾರುತಿ ಆನೇಗುಂಡಿ ಸಮಸ್ಯೆಯನ್ನು ಮನಗಂಡು ಜಿಲ್ಲಾಧ್ಯಕ್ಷರಾದ ರಾಜು ಮಾಸ್ತಿಹಳ್ಳ ಅವರ ಬಳಿ ತಿಳಿಸಿದ್ದಾರೆ.ತಕ್ಷಣ ಸಂಘಟನೆಯ ಸದಸ್ಯರೆಲ್ಲ ಜತೆಗೂಡಿ ಸಮರ್ಪಕ ಮನೆ ನಿರ್ಮಾಣದ ಜವಾಬ್ದಾರಿ ಹೊತ್ತು, ಅಗಸ್ಟ್ ೧೫ ರಂದು ಸಾಂಕೇತಿಕವಾಗಿ ಮನೆಯ ಮೇಲ್ಛಾವಣಿಯನ್ನು ಸಂಪೂರ್ಣವಾಗಿ ತೆಗೆದು, ಮುರಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಿಗೆಗಳನ್ನು ತೆಗೆದು ರಾಡ್ ಗಳನ್ನು ಬಳಸಿ, ಮೇಲ್ಛಾವಣಿ ಸರಿಪಡಿಸಿಕೊಟ್ಟಿದ್ದಾರೆ.

ಜೊತೆಗೆ ಪ್ರತಿನಿತ್ಯ ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ನೀಡಿ , ಮುಂದಿನ ದಿನಗಳಲ್ಲಿ ಮನೆಯನ್ನು ಸಂಪೂರ್ಣವಾಗಿ ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ.

ಈ ವೇಳೆ ಸಂಘಟನೆಯ ಸದಸ್ಯರೆಲ್ಲ ಶ್ರಮದಾನ ಮಾಡಿ, ಮನೆ ದುರಸ್ಥಿಗೆ ಸಹಕರಿಸಿದರು.

ಕರವೇ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ,ಕತಗಾಲ ಘಟಕಾಧ್ಯಕ್ಷ ಮಾರುತಿ ಅನೇಗುಂಡಿ, ಜಿಲ್ಲಾ ಕಾರ್ಯದರ್ಶಿ ಕೆ.ಎನ್ ಮಂಜು, ಕುಮಟಾ ತಾಲೂಕಾ ಉಪಾಧ್ಯಕ್ಷ ರಾಜೀವ್ ಗೌಡ, ಕಾರ್ಯದರ್ಶಿ ಹರೀಶ ಭಾರದ್ವಾಜ್,ಪ್ರಾನ್ಸಿಸ್ ಫರ್ನಾಂಡೀಸ್, ಈಶ್ವರ್ ಉಪ್ಪಾರ್, ಪ್ರದೀಪ ನಾಯ್ಕ ಕತಗಾಲ, ಮಾಸ್ತಿ ಗೌಡ ಕೊಡಂಬಳೆ, ಭಾಸ್ಕರ ಗೌಡ ಮಾವಳ್ಳಿ, ಅಣ್ಣಪ್ಪ ಮುಕ್ರಿ, ಸತೀಶ, ಮಂಜುನಾಥ ಶೆಟ್ಟಿ, ಮಹೇಂದ್ರ ನಾಯ್ಕ ಬೆಳ್ಳಂಗಿ, ವಿನಾಯಕ ನಾಯ್ಕ ಮಿರ್ಜಾನ್, ಸಚಿನ್ ಶೆಟ್ಟಿ, ಮಾರುತಿ ನಾಯ್ಕ ಹರೀಟಾ, ಅಜೀತ್ ಮುಕ್ರಿ, ಗಣೇಶ್ ಉಪ್ಪಾರ,ಸುಹಾನ ಭಂಡಾರಿ,ಚೇತು ಉಪ್ಪಾರ ,ಅಕ್ಷಯ ಉಪ್ಪಾರ, ಯುವರಜ್ ಉಪ್ಪಾರ ,ಅಭಿಲಾಸ್ ಉಪ್ಪಾರ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*