ಜಿಲ್ಲಾ ಸುದ್ದಿಗಳು
ಮಸ್ಕಿ
ತಾಲೂಕಿನ ಬುದ್ದಿನ್ನಿ ಎಸ್ ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಜರುಗುವ ಅಂಬಾದೇವಿ ಮೆರವಣಿಗೆ ನಡೆಸಸಲಾಯಿತು. ಅಂಬಾದೇವಿ ಪುರಾಣವು ನವರಾತ್ರಿ ಪಾಡ್ಯದಿಂದ ಪ್ರಾರಂಭಗೊಂಡು ರಾತ್ರಿ ಭಜನೆ, ಮಂಗಳವಾರ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಶರಣಯ್ಯಸ್ವಾಮಿ ಸಾರಂಗಮಠದವರ ನಿವಾಸದಿಂದ ಬುಧವಾರ ಬೆಳಗ್ಗೆ ಭಜನೆ, ಭಜಂತ್ರಿ, ಡೊಳ್ಳುಗಳ ವಾದ್ಯಗಳಿಂದ,ಮತ್ತು ಅಂಬಾದೇವಿ ಮುಂದೆ ವೀರಗಾಸೆ ಮಾಡುತ್ತಾ ಭಕ್ತಿ ಗೀತೆಗಳನ್ನು ಹಾಡುತ್ತಾ ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಾಯಿಜ ಕರ್ಪೂರ, ನೈವೇದ್ಯವನ್ನು ಸಮರ್ಪಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶರಣಯ್ಯಸ್ವಾಮಿ ಸಾರಂಗಮಠ, ಮಲ್ಲೇಶಯ್ಯಸ್ವಾಮಿ ಸಾರಂಗಮಠ, ಪಂಪಯ್ಯಸ್ವಾಮಿ ಸಾರಂಗಮಠ, ಪಡದಯ್ಯಸ್ವಾಮಿ ಸಾರಂಗಮಠ, ಬಸಯ್ಯಸ್ವಾಮಿ ಸಾರಂಗಮಠ, ಶೇಖರಯ್ಯಸ್ವಾಮಿ ಸಾರಂಗಮಠ, ಲಿಂಗಯ್ಯಸ್ವಾಮಿ ಸಾರಂಗಮಠ, ಶಿವಕುಮಾರ್ ಸಜ್ಜನ್, ಮಹಾದೇವಪ್ಪ ಕನಸಾವಿ, ಅಮರಯ್ಯಸ್ವಾಮಿ ಗುರುಗುಂಟಾ, ರಡ್ಡೆಪ್ಪ ಆಮದಿಹಾಳ ಮತ್ತು ಹೂವಿನಭಾವಿ, ಬೆಂಚಮರಡಿ, ಸಾನಬಾಳ, ಮುದಬಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗಿಯಾಗಿದ್ದರು.
Be the first to comment