ಸ್ವಾತಂತ್ರ್ಯೋತ್ಸವದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದ ಸಾರಿಗೆ ವ್ಯವಸ್ಥಾಪಕ ರಾಹುಲ್ ಹುಣಸೂರೆ…!!!

ವರದಿ: ಬಸನಗೌಡ ಗೌಡರ

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ದೇಶ ಸ್ವತಂತ್ರಕ್ಕಾಗಿ ಸಾವಿರಾರು ನಾಯಕರು ಜೀವನ್ನೆ ಅರ್ಪಿಸಿದ್ದಾರೆ. ಇಂತಹ ತ್ಯಾಗಗಳಿಂದ ಸಿಕ್ಕಿಸುವ ಸ್ವತಂತ್ರವನ್ನು ಸಂಭ್ರಮದಿಂದ ಆಚರಣೆ ಮಾಡಲು ಕೊರೊನಾ ಅಡ್ಡಿ ಪಡಿಸಿದೆ. ಆದಷ್ಟು ಬೇಗ ನಮ್ಮ ದೇಶವು ಕೊರೊನಾದಿಂದ ಸ್ವತಂತ್ರ ಹೊಂದಲು ಜನರು ಕಡ್ಡಾಯವಾಗಿ ಸರಕಾರದ ಕೊವಿಡ್ ನಿಯಾಮಾವಳಿಗಳನ್ನು ಪಾಲಿಸಬೇಕು ಎಂದು ಸಾರಿಗೆ ವ್ಯವಸ್ಥಾಪಕ ರಾಹುಲ ಹುಣಸೂರೆ ಹೇಳಿದರು.



ಪಟ್ಟಣದ ಸಾರಿಗೆ ಇಲಾಖೆಯಲ್ಲಿ 75ನೇ ಸ್ವತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧ್ವಜಾರೋಹನ ಹಾಗೂ ಸಾಧಕರಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಥೆ ಒಂದೇ ಆಗಿದ್ದರೂ ಸಂಸ್ಥೆಯಿಂದ ಸಾವಿರಾರು ಕುಟುಂಬಗಳ ಜೀವನ ನಡೆಯುತ್ತದೆ. ಇಂತಹ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸವಾಗಿದೆ. ಸರಕಾರಕ್ಕೆ ಸಾರಿಗೆ ಇಲಾಖೆಯೂ ಒಂದು ಸ್ಥಂಬವಾಗಿದೆ. ಇಂತಹ ಇಲಾಖೆಯಲ್ಲಿ ಸೇವೆಸಲ್ಲಿಸುವುದು ದೊಡ್ಡಹಿರಿಮೆ ಎಂದು ಅವರು ಹೇಳಿದರು.



ಪ್ರಶಂಸನಾ ಪತ್ರ ವಿತರಣೆ:
ರಾಜ್ಯ ಸಾರಿಗೆ ಇಲಾಖೆಯ ಸಿಬ್ಬಂದಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ನಡೆಸಿದ್ದ ಸಾರಿಗೆ ಬಸ್ ಮುಷ್ಕರದ ಸಮಯದಲ್ಲಿ ಸರಕಾರದ ಮನವಿಗೆ ಸ್ಪಂಧಿಸಿ ಬಸ್ ಸಂಚಾರವನ್ನು ನಡೆಸಿದ ಚಾಲಕರಿಗೆ ಹಾಗೂ ಮುದ್ದೇಬಿಹಾಳ ಸಾರಿಗೆ ಘಟಕದಲ್ಲಿ ರಾತ್ರಿ ಎನ್ನದೇ ಇಲಾಖೆಯ ಶ್ರೇಯಸ್ಸಿಗಾಗಿ ಬಸ್ ಸಂಚಾರ ನಡೆಸಿ ಸಾರ್ವಜನಿಕರಿಗೆ ಹಾಗೂ ಘಟಕಕ್ಕೆ ಹೆಚ್ಚಿನ ಆದಾಯ ಮಾಡಿದ ಸಿಬ್ಬಂದಿಗಳಿಗೆ ಮತ್ತು ಘಟಕದಲ್ಲಿ ಸುಂದರತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಘಟಕವನ್ನು ಸ್ವಚ್ಚಗೋಳಿಸಿದ 80ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಡಿಯಲ್ಲಿ ಪ್ರಶಂಸನಾ ಪತ್ರವನ್ನು ಸಾರಿಗೆ ವ್ಯವಸ್ಥಾಪಕ ರಾಹುಲ ಹುಣಸೂರೆ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ವಾಯ್.ಬಿ.ಚಲವಾದಿ, ಸಿ.ಐ.ಬಡಿಗೇರ, ಗಿರೀಶ ಬಡಿಗೇರ, ಪ್ರದಿಪ ಕುಲಕರ್ಣಿ, ವಿಠ್ಠಲ ಲಮಾಣಿ ಸೇರಿದಂತೆ ಇತರರಿದ್ದರು.

Be the first to comment

Leave a Reply

Your email address will not be published.


*