ಜಿಲ್ಲಾ ಸುದ್ದಿಗಳು
ಬಾಗಲಕೋಟೆ: (ಕೆಲೂರ) ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಗ್ರಾಮಾಡಳಿತದವತಿಯಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸೂಚಿಸುವುದರೊಂದಿಗೆ ಸರಳವಾಗಿ ಆಚರಿಸಲಾಯಿತು.
2020-21ನೇ ಸಾಲಿನ SSLC ಯಲ್ಲಿ ಸಾಧನೆಗೈದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮಾಡಳಿತದಿಂದ ಸನ್ಮಾನ ಸಲ್ಲಿಸುವುದರೊಂದಿಗೆ ನೋಟಪುಸ್ತಕ ವಿತರಿಸಲಾಯಿತು.
75 ವರ್ಷಗಳ ಸ್ವಾತಂತ್ರ್ಯ ಸಂಭ್ರಮದ ವೇಳೆ ಈ ದಿನಾಚರಣೆ ಸ್ವಾತಂತ್ರ್ಯ ಹೋರಾಟದ ಉತ್ಸಾಹ ಮತ್ತು ತ್ಯಾಗದ ಭಾವನೆಯ ಪ್ರತಿಬಿಂಬವಾಗಿದ್ದು, ಹುತಾತ್ಮರಿಗೆ ಗೌರವ ಸಲ್ಲಿಸಬೇಕು. ದೇಶ ಮತ್ತು ಅವರ ಕನಸುಗಳ ಭಾರತವನ್ನ ನಿರ್ಮಿಸುವ ಸಂಕಲ್ಪ ತೆಗೆದುಕೊಳ್ಳಬೇಕಾಗಿದ್ದು, ಇದು ಸನಾತನ ಭಾರತದ ಹೆಮ್ಮೆಯ ನೋಟ ಮತ್ತು ಆಧುನಿಕ ಭಾರತದ ಹೊಳಪು ಹೊಂದಿದೆ ಎಂದಿದ್ದಾರೆ.ದೇಶಾದ್ಯಂತ ಕೋವಿಡ್ ಮಾಯವಾಗಿ ಮುಂದಿನ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತಾಗಬೇಕೆಂದು ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಬಸಲಿಂಗಪ್ಪ ಮಂಡಿ,ಗ್ರಾಮ ಪಂಚಾಯತಿಯ ಸರ್ವಸದಸ್ಯರು, ಹಿರಿಯರಾದಾ ಅಪ್ಪಾಸಾಹೇಬ ನಾಡಗೌಡರ,ಪಂಚಾಯತ್ ಅಭಿವೃದ್ಧಿ ಅದಿಕಾರಿ ಪಿ.ಬಿ.ಮುಳ್ಳೂರ,ವಿಶ್ವನಾಥ ಹಿರೇಮಠ, ಶಂಕ್ರಪ್ಪ ಮಾದನಶೆಟ್ಟಿ, ಎಸ್.ಎಮ್.ಬೆಲ್ಲದ, ಮೈಲಾರಪ್ಪ ಕೊಪ್ಪದ,ಪಿಕೆಪಿಎಸ್ ನಿರ್ದೇಶಕರು,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
Be the first to comment