ರಾಜ್ಯ ಸುದ್ದಿಗಳು
ಮುದ್ದೇಬಿಹಾಳ(ಆಲಮಟ್ಟಿ):
ಕೃಷ್ಣಾ ಮೇಲ್ದಂಡೆ ಯೋಜನೆಯ ೨೦೨೧-೨೨ನೇ ಸಾಲಿನ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯನ್ನು ಜು.೧೭ ರಂದು ಆಲಮಟ್ಟಿಯ ಕೃಭಾಜನಿನಿ ಕಛೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಡ್ಯಾಂ ಡಿವಿಜನ್ ಇಇ ಸಂಗಮೇಶ ಮಗ ತಿಳಿಸಿದ್ದಾರೆ.
ರೈತರ ಜಮೀನುಗಳಿಗೆ ಹರಿಯಲಿದಯೇ ಜಲಧಾರೆ:
ಉತ್ತರ ಕರ್ನಾಟಕದ ಜಿಲ್ಲೆಗಳ ರೈತರಿಗೆ ಸಾಕಷ್ಟು ನೀರು ಇದ್ದರೂ ಜಮೀನುಗಳಿಗೆ ಮಾತ್ರ ನೀರಿನ ಕೊರತರ ನೀಗಿಲ್ಲ. ಜು.17 ರಂದು ನಡೆಯಲಿರುವ 2021-22ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈಗಾಗಲೇ ಕೊರೊನಾದಿಂದ ಕತ್ತಿರಸಿರುವ ರೈತರ ಜಮೀನಿಗೆ ನೀರು ಬಂದು ಈಗಲಾದರೂ ರೈತರ ಜೀವನ ಉಳಿಯುವುದೇ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಸಭೆಯಲ್ಲಿ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳು ಭಾಗವಹಿಸಲಿದ್ದು ತಮ್ಮ ಕ್ಷೇತ್ರದ ರೈತರಿಗಾಗಿ ಯಾವ ಯಾವ ರೀತಿಯಯಾಗಿ ವಿಷಯ ಮಂಡನೆ ಮಾಡಲಿದ್ದಾರೆ ಎನ್ನುವುದು ಕಾದುನೋಡಬೇಕಿದೆ.
ಸಭೆಯಲ್ಲಿ ಅಧಿಕಾರೇತ ಸದಸ್ಯರಾದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬಾಗಲಕೋಟೆ ಶಾಸಕ ವಿ.ಚರಂತಿಮಠ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಯಾದಗಿರಿ ವೆಂಕಟರೆಡ್ಡಿ ಮುದ್ನಾಳ, ರಾಯಚೂರ ನಗರ ಶಾಸಕ ಡಾ.ಶಿವರಾಜ ಪಾಟೀಲ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ, ರೋಣ ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಲೋಕಸಭಾ ಸದಸ್ಯರು, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರು ಮತ್ತು ಬಾಗಲಕೋಟ, ರಾಯಚೂರ, ಯಾದಗಿರಿ, ಕಲಬುರಗಿ, ವಿಜಯಪುರ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Be the first to comment