ಪುರಸಭೆ ಸ್ಥಾಯಿ ಸಮೀತಿ ಸದಸ್ಯರ ವೈಮನಸ್ಸು ಬಗೆಹರಿಸಿದ ಮುದ್ದೇಬಿಹಾಳ ಕಾಂಗ್ರೆಸ್ ಮುಖಂಡರು…! ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ಶಿವು ಶಿವಪುರ ಅವಿರೋಧ ಆಯ್ಕೆ…!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಕಾಂಗ್ರೆಸ್ ಪಕ್ಷದಲ್ಲಿಯೇ ಪರ ವಿರೋಧದಲ್ಲಿ ವಿವಾದದಲ್ಲಿ ಸಿಲುಕಿದ್ದ ಪಟ್ಟಣದ ಪುರಸಭೆ ಸ್ಥಾಯಿ ಸಮೀತಿಯ ಅಧ್ಯಕ್ಷ ಸ್ಥಾನದ ಗದ್ದುಗೆಯು ಶುಕ್ರವಾರ ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ), ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಗುರು ತಾರನಾಳ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ ಸೇರಿದಂತೆ ಕಾಮಗ್ರೆಸ್ ಮುಖಂಡರ ಸೂಚನೆ ಮೆರೆಗೆ ಪುರಸಭೆ ಸದಸ್ಯ ಶಿವು ಶಿವಪೂರ ಅವರನ್ನು ಸ್ಥಾಯಿ ಸಮೀತಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಸ್ಥಾಯಿ ಸಮೀತಿಯ ಒಟ್ಟು 11 ಜನ ಸದಸ್ಯರಲ್ಲಿ ಕೆಲ ಸದಸ್ಯರಿಂದ ಗೊಂದಲ ಮೂಡಿತ್ತು. ಇದನ್ನು ಬಗೆಹರಿಸುವಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ. ಸದಸ್ಯರೊಂದಿಗೆ ಸಭೆ ಮಾಡಿದ ಕಾಂಗ್ರೆಸ್ ಮುಖಂಡರು ಅವರ ಸಮಸ್ಯೆಗಳನ್ನು ಆಳಿಸಿ ಬಗೆಹರಿಸಿದ ಹಿನ್ನೆಲೆಯಲ್ಲಿ ಶಿವು ಶಿವಪೂರ ಅವರು ಅವಿರೋಧವಾಗಿ ಆಯ್ಕೆಯಾಗಲು ಕಾರಣವಾಯಿತು. ಚುನಾವಣಾಧಿಕಾರಿಗಳಾಗಿ ಪುರಸಭೆ ಮುಖ್ಯಾಧಿಕಾರಿ ಸುನೀಲ ಪಾಟೀಲ ಕಾರ್ಯನಿರ್ವಹಿಸಿದರು. ಸ್ಥಾಯಿ ಸಮೀತಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಶಿವು ಶಿವಪೂರ ಅವರನ್ನು ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮೀತಿ ಸದಸ್ಯರಾದ ಮೆಹಬೂಬ ಗೊಳಸಂಗಿ, ವಿರೇಶ ಹಡಲಗೇರಿ, ರಫೀಕ ದ್ರಾಕ್ಷಿ, ಶರೀಫಾ ಮೂಲಿಮನಿ, ಚಾಂದಬಿ ಮಕಾನದಾರ, ಪ್ರೀತಿ ದೇಗಿನಾಳ ಇದ್ದರು.



ಪರಿಶಿಷ್ಠ ಜಾತಿಗೆ ಸೂಕ್ತ ಸ್ಥಾನಮಾನ ನೀಡಿದ ಮುದ್ದೇಬಿಹಾಳ ಕಾಂಗ್ರೆಸ್ ಮುಖಂಡರು:
ಮುದ್ದೇಬಿಹಾಳ ಪುರಸಭೆಯಲ್ಲಿ ಹಿಂದಿನಿಂದಲೂ ಪರಿಶಿಷ್ಠ ಜಾತಿಗೆ ಸೇರಿದ ಸದಸ್ಯರಿಗೆ ಸ್ಥಾಯಿ ಸಮೀತಿ ಅಧ್ಯಕ್ಷ ಸ್ಥಾನ ಒಳಿದು ಬಂದಿರಲಿಲ್ಲಾ. ಆದರೆ ಪ್ರಥಮ ಬಾರಿಗೆ ಪರಿಶಿಷ್ಠ ಜಾತಿಗೆ ಸೇರಿದ ಪುರಸಭೆ ಸದಸ್ಯ ಶಿವು ಶಿವಪುರ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿ ಹಿಂದುಳಿದ ವರ್ಗದ ಜನರಿಗೂ ಸೂಕ್ತಸ್ಥಾನ ಮಾನ ನೀಡುವಲ್ಲಿ ಮುದ್ದೇಬಿಹಾಳ ತಾಲೂಕಾ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ.



ವಿಜಯೋತ್ಸವ:
ಮುದ್ದೇಬಿಹಾಳ ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ಶಿವು ಶಿವಪೂರ ಆಯ್ಕೆಯಾಗುತ್ತಿದ್ದಂತೆ ಪುರಸಭೆ ಮುಂಬಾಗದಲ್ಲಿ ಅವರ ಸಮಾಜ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು. ಅಲ್ಲದೇ ಪಟ್ಟಣದ ಬಸವೇಶ್ವರ ವೃತ್ತದಿಂದ ರಾಣಿ ಚನ್ನಮ್ಮ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಾಮರಾಜ ಬಿರಾದಾರ, ರುದ್ರಗೌಡ ಅಂಗಡಗೇರಿ, ವಾಯ್.ಎಚ್.ವಿಜಯಕರ, ರಾಜು ಕರಡ್ಡಿ, ಸಂಗನಗೌಡ ಬಿರಾದಾರ, ಅಪ್ಪು ದೇಗಿನಾಳ, ಅನೀಲ ನಾಯಕ, ದಾವಳ ಗೊಳಸಂಗಿ ಇದ್ದರು.

ಸ್ಥಾಯಿ ಸಮೀತಿ ಚುನಾವಣೆ ವೇಳೆ ಪ್ರತ್ಯಕ್ಷರಾದ ಬಿಜೆಪಿ ಸದಸ್ಯರು:
ಶುಕ್ರವಾರ ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿ ಮಾಡಲಾಗಿತ್ತು. ಚುನಾವಣಾ ಕೊಠಡಿಗೆ ಸ್ಥಾಯಿ ಸಮೀತಿಯಲ್ಲಿ ಇರದಿದ್ದರೂ ಬಿಜೆಪಿ ಪಕ್ಷದ ಪುರಸಭೆ ಸದಸ್ಯರಾದ ಅಶೋಕ ವನಹಳ್ಳಿ ಹಾಗೂ ಸಹನಾ ಬಡಿಗೇರಿ ಪ್ರವೇಶಿಸಿ ಎಲ್ಲರಿಗೂ ದಂಗಾಗುವಂತೆ ಮಾಡಿದರು. ನಂತರ ಪುರಸಭೆ ಸಿಬ್ಬಂದಿಗಳ ಮಾಹಿತಿ ಮೆರೆಗೆ ಚುನಾವಣಾ ಕೊಠಡಿಯಿಂದ ಹೊರನಡೆದ ಘಟನೆ ನಡೆಯಿತು.



ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಒಂದು ಕುಟುಂಬದಂತಿದೆ. ಒಂದು ಕುಟುಂಬದಲ್ಲಿ ವೈಮನಸು ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ನಮ್ಮ ಪಕ್ಷದ ಹಿರಿಯರು ಬಗೆಹರಿಸಿದ್ದು ಸರ್ವ ಸದಸ್ಯರೂ ಸ್ಥಾಯಿ ಸಮೀತಿ ಅಧ್ಯಕ್ಷ ಸ್ಥಾನ ಚುನಾವಣೆಗೆ ಒಪ್ಪಿಗೆ ನೀಡಿದ್ದಾರೆ. ಇನ್ನೂ ನೂತನವಾಗಿ ಅಧ್ಯಕ್ಷರಾಗಿರುವ ಶಿವು ಶಿವಪೂರ ಅವರು ಯಾವುದೇ ಬೇದ ಮಾಡದೇ ಆಡಳಿತ ನಡೆಸುವಂತಾಗಬೇಕು.
-ಗುರು ತಾರನಾಳ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು, ಮುದ್ದೇಬಿಹಾಳ.

ನಮ್ಮಲ್ಲಿರುವ ವೈಮನಸ್ಸನ್ನು ಸರಿಪಡಿಸಿ ಮುಂದಿನದಿನಗಳಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಠಿಯಾಗದಂತೆ ಮಾಡಲಾಗುವುದು ಎಂದು ನಮ್ಮ ಪಕ್ಷದ ಮುಖಂಡರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿ ಮಾತ್ರ ನಮ್ಮ ಗುರಿಯಾಗಿರುತ್ತದೆ. ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವು ಅವರ ಮಾರ್ಗದರ್ಶನದಲ್ಲಿಯೇ ನಾವು ನಡೆಯುತ್ತೇವೆ. ನಾವು ಪಕ್ಷ ನಿಷ್ಠರಾಗಿದ್ದೇವೆ.
-ರಿಯಾಜ್ ಢವಳಗಿ, ಪುರಸಭೆ ಸದಸ್ಯ, ಮುದ್ದೇಬಿಹಾಳ.

Be the first to comment

Leave a Reply

Your email address will not be published.


*