ಬೈಕ್ ನಿಯಂತ್ರಣ ತಪ್ಪಿದ ಸವಾರ ಸೇತುವೆ ಕೆಳಗೆ ಬಿದ್ದು ಸಾವು

ವರದಿ: ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು

ಯಲ್ಲಾಪುರ

CHETAN KENDULI

ರಾಷ್ಟ್ರೀಯ C A ಹೆದ್ದಾರಿ 63 ಪಟ್ಟಣದ ಹಿಂದೂ ರುದ್ರಭೂಮಿ ಬಳಿಯಲ್ಲಿ ಸೇತುವೆಯ ಕೆಳಗೆ ರಾತ್ರಿ ವ್ಯಕ್ತಿಯೋರ್ವನು ಬೈಕ್ ನಿಯಂತ್ರಣ ತಪ್ಪಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ .ಮೃತಪಟ್ಟ ವ್ಯಕ್ತಿಯನ್ನು ಮುಂಬೈನ ಮಲಾಡಿನಎಸ್.ಆರ್ .ಸಿ. ಸಿ ಮಕ್ಕಳ ಆಸ್ಪತ್ರೆಯ ಬ್ರಾಂಡಿಂಗ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಎಂದು ತಿಳಿದುಬಂದಿದೆ ಬೈಕ್ ಸವಾರ ಕಲ್ಕತ್ತಾ ಮೂಲದ ಸೈಯಾನ್ ಸ್ವಪನ್ ಬ್ಯಾನರ್ಜಿ (36) ಎಂದು ಗುರುತಿಸಲಾಗಿದೆ.

ಇವರ ತಮ್ಮ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಹುಬ್ಬಳ್ಳಿ ಕಡೆಯಿಂದ ಅತಿವೇಗ ಹಾಗೂ ನಿರ್ಲಕ್ಷದಿಂದ ಬೈಕ್ ಚಲಾಯಿಸಿಕೊಂಡು ಬಂದು ಪಟ್ಟಣ ವ್ಯಾಪ್ತಿಯ ರಾ.ಹೆ 63ರ ಹಿಂದೂ ರುದ್ರಭೂಮಿಯ ಬಳಿ ಇರುವ ತಣ್ಣೀರು ಹಳ್ಳದ ಸೇತುವೆ ಕೆಳಗೆ 20 ಅಡಿ ಆಳದಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸುರೇಶ ಯಳ್ಳುರು , ಪಿ.ಎಸ್.ಐ ಮಂಜುನಾಥ್ ಗೌಡರು ಭೇಟಿ ನೀಡಿ ,ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Be the first to comment

Leave a Reply

Your email address will not be published.


*