ಭಟ್ಕಳದ ಹಲವು ಮನೆಗೆ ಭೇಟಿ ಕೊಟ್ಟ ಪುಣೆಯ ಎ.ಟಿ.ಎಸ್ ತಂಡ; ಕಾರಣ ಯಾಕೇ? ಇಲ್ಲಿದೆ ನೋಡಿ..

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ 

CHETAN KENDULI

ಭಟ್ಕಳ: ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಪೋಟ ಪ್ರಕಣಕ್ಕೆ ಸಂಬಂಧಿಸಿದಂತೆ ಪುಣೆಯ ಎ.ಟಿ.ಎಸ್ ತಂಡ (ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್) ಬುಧವಾರ ಭಟ್ಕಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ರಿಯಾಜ್ ಭಟ್ಕಳ ಆಗಿದ್ದು, ಆತನ ಸಂಬಂಧಿಕರು ಭಟ್ಕಳದಲ್ಲಿ ಬೇಕರಿ ನಡೆಸುತ್ತಿದ್ದಾರೆಂಬ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ರಿಯಾಜ್ ಭಟ್ಕಳ ಸಂಬಂಧಿಕರ ಬೇಕರಿ ಹಾಗೂ ಯಾಸಿನ್ ಭಟ್ಕಳ್ ಮತ್ತು ಇಕ್ಬಾಲ್ ಸಹೋದರರ ಮನೆಗಳಿಗೂ ಕೂಡ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಿಯಾಜ್ ಭಟ್ಕಳ್ ಇಕ್ವಾಲ್ ಭಟ್ಕಳ ಸೋದರರು ಮುಂಬಯಿಯಲ್ಲೇ ಹುಟ್ಟಿ ಬೆಳೆದರೂ ಅವರ ಕುಟುಂಬದ ಮೂಲ ಭಟ್ಕಳ ವಾಗಿರುವುದರಿಂದ ಇವರ ಸಂಬಂಧಿಕರು ಕೆಲವರು ಇಲ್ಲೇ ನೆಲೆಸಿದ್ದಾರೆ. ಈ ಸಂಬಂಧ ರಿಯಾಜ್ ಹಾಗೂ ಇಕ್ಬಾಲ್ ಸೋದರರು ಕೆಲಕಾಲ ಭಟ್ಕಳದಲ್ಲಿ ಬಂದು ನೆಲೆಸಿದ್ದರು. ಮುಂಬಯಿಯಲ್ಲೇ ಹುಟ್ಟಿ ಬೆಳೆದರೂ ಇವರಿಬ್ಬರ ಪಾಸ್ ಪೋರ್ಟ್ ಬೆಂಗಳೂರಿನಲ್ಲಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ .ರಾಜ್ಯದಲ್ಲಿ ಹುಟ್ಟಿ ಇನ್ನೊಂದು ರಾಜ್ಯದ ಪಾಸ್ ಪೆÇೀರ್ಟ್ ಪಡೆದಿದ್ದರೆ ಅದು ಹೇಗೆ ಸಾಧ್ಯ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಎಟಿಎಸ್ ಅಧಿಕಾರಿಗಳ ತನಿಖೆ ತೀವ್ರಗೊಂಡಿದೆ.

Be the first to comment

Leave a Reply

Your email address will not be published.


*