ಹದಿನೈದು ಇಪ್ಪತ್ತು ದಿನಗಳಾದರೂ ಕಸ ವಿಲೇವಾರಿ ಮಾಡಲು ಕ್ಯಾರೆ ಎನ್ನದ ಗುಡೂರ (ಎಸ್.ಸಿ) ಗ್ರಾಮಾಡಳಿತ

ವರದಿ:ಶಾಂತಯ್ಯ ಯಾವಗಲ್ಲಮಠ

ಗ್ರಾಮವನ್ನು ಕಸಮುಕ್ತ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯವರು ನಾನಾ ಕಸರತ್ತು ಮಾಡುತ್ತಿದ್ದಾರೆ.ಆದರೆ ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿ ಎಡವುತ್ತಿದ್ದು, ಇಂದು ಕಸದ ರಾಶಿಯಿಂದ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ:(ಗುಡೂರ ಎಸ್.ಸಿ)
ಇಲಕಲ್ಲ ತಾಲೂಕಿನ ಗುಡೂರ ಗ್ರಾಮ ಸ್ವಚ್ಛತೆಗೆ ನಂಬರ್ ಒನ್ ಎನಿಸಿದರು ಗ್ರಾಮದಲ್ಲಿ ರಸ್ತೆ ಮೇಲೆ ಕಸ ತುಂಬಿ ತಿಪ್ಪೆ ಗುಂಡಿಯಂತೆ ಕಾಣುತ್ತಿದ್ದು ಸಾಂಕ್ರಾಮಿಕ ರೋಗ ಹರಡಲು ದಾರಿಮಾಡಿಕೊಟ್ಟಂತಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ವಚ್ಛತೆಯ ದೃಷ್ಟಿಕೋನದಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಗ್ರಾಮ ಸಭೆ, ಜಾಥಾ, ಬೀದಿ ನಾಟಕ, ಚಿತ್ರಗಳ ಮೂಲಕ ತಿಳುವಳಿಕೆ ನೀಡಿ ಗ್ರಾಮ ಸ್ವಚ್ಛವಾಗಿಸಿಕೊಳ್ಳುವಂತೆ ಪ್ರಯತ್ನಪಡುತ್ತಿವೆ.

ಈ ಮೂಲಕ ಸ್ವಚ್ಛ ಗ್ರಾಮ ಎಂದು ಪುರಸ್ಕಾರ ಪಡೆಯಲು ಗ್ರಾಮಗಳು ಪೈಪೋಟಿ ನಡೆಸುತ್ತಿದ್ದು ಇಂಥಹ ಸಂದರ್ಭದಲ್ಲಿ ಗುಡೂರು ಗ್ರಾಮ ಪಂಚಾಯಿತಿ ಆಸ್ವಚ್ಛತೆಗೆ ವಿರುದ್ಧವಾಗಿದ್ದು
ಗ್ರಾಮದ ಬಹುತೇಕ ಪ್ರಮುಖ ರಸ್ತೆಗಳ ಮೇಲೆ ಗಾಜಿನ ಚೂರು, ಪ್ಲಾಸ್ಟಿಕ್ ಹಾಗೂ ನಿರುಪಯುಕ್ತ ವಸ್ತುಗಳು, ಸಾರಾಯಿ ಬಾಟ್ಲಿ ಹಾಗೂ ಇತರೆ ಹಲವಾರು ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಒಂದೇ ದಿನದಲ್ಲಿ ಸಂಗ್ರಹವಾಗುವ ಕಸವನ್ನು ಹದಿನೈದು ಇಪ್ಪತ್ತು ದಿನ ಆದರೂ ಕಸದ ರಾಶಿ ಬಿದ್ದರು ಯಾರೊಬ್ಬ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ.ನಾಗರಿಕರು ಕಸಗಳನ್ನು ಮನಬಂದಂತೆ ರಸ್ತೆಬದಿಗೆ ಚೆಲ್ಲುತ್ತಾರೆ.

ಈ ಕುರಿತು ಜಾಗೃತಿ ನೀಡಿ ಸಾರ್ವಜನಿಕರನ್ನು ಎಚ್ಚರಿಸುವ ಕಾರ್ಯವನ್ನು ಮಾಡುವುದರ ಮೂಲಕ ಸ್ವಚ್ವ ಗ್ರಾಮ ಪ್ರಶಸ್ತಿಗೆ ಭಾಜನವಾಗುವಂತೆ ಪ್ರಯತ್ನಿಸಲಿ ಎಂದು ಈ ಕುರಿತು ವಿರೇಶ್ ಕೆಲೂರ ಮತ್ತು ಸ್ಥಳಿಯರು ಹಲವು ಬಾರಿ ಪಿಡಿಓ ರವರಿಗೆ ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*