ಜಿಲ್ಲಾ ಸುದ್ದಿ
ಶಿರಸಿ: ಕಳೆದ 36 ವರ್ಷಗಳಿಂದ ಪೆÇಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಇದೀಗ ಬನವಾಸಿ ಠಾಣೆಯಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಕೃಷ್ಣ ಪಾಲೇಕರ ಜೂನ್.30ರಂದು ಸೇವಾ ನಿವೃತ್ತಿಗೊಂಡರು.
ಮೂಲತಃ ಶಿರಸಿಯವರಾದ ಪಾಲೇಕರ ಕಾರವಾರದ ಚಿತ್ತಾಕುಲದಲ್ಲಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದರು. ನಂತರ ದಾಂಡೇಲಿ ನಗರ, ಭಟ್ಕಳ, ರಾಜ್ಯ ಗುಪ್ತವಾರ್ತೆ, ಮುಂಡಗೋಡ, ಶಿರಸಿ ನಗರ, ಮಾರುಕಟ್ಟೆ, ಗ್ರಾಮೀಣ ಸೇರಿದಂತೆ ಹಲವೆಡೆ ಕಾರ್ಯನಿರ್ವಹಿಸಿದ್ದಾರೆ. ಇದೀಗ ಬನವಾಸಿ ಠಾಣೆಯಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಆಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಜೂನ್ 30ರಂದು ನಿವೃತ್ತಿಯಾಗಿದ್ದಾರೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ಬದರಿನಾಥ ಸನ್ಮಾನಿಸಿ ಬಿಳ್ಕೋಟ್ಟಿದ್ದಾರೆ. ನಿವೃತ್ತಿ ಜೀವನಕ್ಕೆ ಡಿ.ಎಸ್.ಪಿ. ರವಿ ಡಿ.ನಾಯ್ಕ, ಸಿ.ಪಿ.ಐ. ರಾಮಚಂದ್ರ ನಾಯಕ ಹಾಗೂ ಬನವಾಸಿ ಪಿ.ಎಸ್.ಐ. ಹನುಮಂತ ಬಿರಾದಾರ ಅಭಿನಂದಿಸಿದ್ದಾರೆ.
Be the first to comment