ರಾಜ್ಯ ಸುದ್ದಿ
ಕುಮಟಾ: ಕೊರೊನಾ ನಡುವೆಯೂ ತಾಲೂಕಿನಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಗುಣಮಟ್ಟದ ಫೇಸ್ಶೀಲ್ಡ್ ವಿತರಿಸಿ, ಮಾನವೀಯತೆ ಮೆರೆದಿದ್ದಾರೆ.ನಂತರ ಮಾತನಾಡಿದ ಅವರು, ಕೊರೊನಾ ಸೇರಿದಂತೆ ಇನ್ನಿತರ ಭೀಕರತೆಯ ನಡುವೆಯೂ ಜೀವದ ಹಂಗು ತೊರೆದು ನಿರಂತರ ಸುದ್ದಿ ಸಂಗ್ರಹಿಸಿ, ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ತಲುಪಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯುವ ಮತ್ತು ಅನಾನುಕೂಲತೆಯಿಂದ ಬಳಲುವ ಸಾರ್ವಜನಿಕರ ನೋವು-ನಲಿವುಗಳಿಗೆ ಸ್ಪಂದಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಸಂಪತ್ಕುಮಾರ ನಾಯರಿ, ಕರ್ನಾಟಕ ಜರ್ನಲಿಷ್ಟ್ ಯೂನಿಯನ್ ತಾಲೂಕಾಧ್ಯಕ್ಷ ಅನ್ಸಾರ ಶೇಖ್ ಸೇರಿದಂತೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿದ್ದರು.
Be the first to comment