ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಪ್ರಧಾನಿ ಮೋಧಿಯವರು ಚುನಾವಣೆಯಗಳಲ್ಲಿ ಭಾಷಣ ಮಾಡುವಾಗ ಅಲ್ಲಿನ ಸರಕಾರ ಕೇವಲ ೧೦ ಪರ್ಸೆಂಟ್ ಸರಕಾರ ಎಂದು ಟೀಕಿಸಿ ಓಟ್ ಗಿಟ್ಟಿಸಿಕೊಂಡು ಆಡಳೀತ ನಡೆಸಿರುವ ಬಿಜೆಪಿ ಸರಕಾರ ೩೦ ಪರ್ಸೆಂಟ್ ಸರಕಾರವಾಗಿದೆ
-ಮಾಜಿ ಸಚಿವ ಸಿ.ಎಸ್.ನಾಡಗೌಡ (ಅಪ್ಪಾಜಿ)
ಚುನಾವಣೆಯಲ್ಲಿ ಹಣದ ಸುರಿಮಳೆ ನೆಡೆಸಲು ಹಾಗೂ ಆಪರೇಷನ್ ಕಮಲ್ಲಕ್ಕಾಗಿ ಹಣ ನೀಡುವ ಉದ್ಯಮಿದಾರ ರಕ್ಷಣೆಯೊಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಬಿಜೆಪಿ ಪಕ್ಷದ ನೇರ ವಾಗ್ದಾಲಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಕಪ್ಪು ಹಣದ ಮಾಡಿದ್ದಾರೆ.ಅದನ್ನು ಮರಳಿ ದೇಶಕ್ಕೆ ತಂದು ಜನರ ಖ್ಯಾತೆಗೆ ಜಮಾ ಮಾಡುತ್ತೇನೆ ಎಂದು ಹೇಳಿದ ಮೋದಿಯವರಿಗೆ ತಾವು ನೀಡಿದ ಭರವಸೆಯನ್ನೆ ಮರೆತ್ತಿದ್ದರಾ ಎನ್ನುವುದು ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.
ದೇಶದ ಜನರಿಗೆ ಆರ್ಥಿಕವಾಗಿ ಏಳಿಗೆ ಮಾಡುತ್ತೇನೆ ಎಂದು ದಿನವಸ್ತಗಳ ಬೆಲೆಯನ್ನೇ ಏರಿಕೆ ಮಾಡಿದ ಕೇಂದ್ರ ಸರಕಾರ ದೇಶದ ಆರ್ಥಿಕತೆಯ ಬಗ್ಗೆ ಯೋಚನೆ ಮಾಡದ ದುಸ್ಥಿತಿಗೆ ತಂದು ನಿಲ್ಲಿಸಿದೆ. ದೇಶದ ಯುವಕರಿಗೆ ಉದ್ಯೋಗಾವಕಾಶ ಸೇರಿದಂತೆ ಇನ್ನಿತರ ಬಣ್ಣದ ಕನಸುಗಳನ್ನು ಹುಟ್ಟಿಸಿದ ಪ್ರಧಾನಿ ಎಷ್ಟರಮಟ್ಟಿಗೆ ಸಾಧನೆ ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಟಿಕೀಸಿದರು.
ರಾಮ ಭಕ್ತರಿಂದ ಹಣ ಲೂಟಿ ಮಾಡಿದ ಕೇಂದ್ರ ಸರಕಾರ:
ಸುಪ್ರಿಂ ಕೋರ್ಟನಲ್ಲಿ ಇತ್ಯರ್ಥಗೊಂಡ ಶ್ರೀರಾಮ ಮಂದಿರದ ದಾವೆಯನ್ನು ನಾವೆ ಮಾಡಿದ್ದೇವೆ ಎಂದು ಹೇಳಿದ ಬಿಜೆಪಿ ಸರಕಾರಗಳು ರಾಮ ಮಂದಿರ ಕಟ್ಟಲು ಜನಸಾಮಾನ್ಯರಿಂದ ಹಣ ಲೂಟಿ ಹೊಡೆದಿದೆ. ಕೇವಲ ಒಂದು ದಿನಗಳಲ್ಲಿ ೧೬ ಸಾವಿರ ಕೋಟಿ ಹಣವನ್ನು ಜನರಿಂದ ಕಬಳಿಸಿರುವ ಬಿಜೆಪಿ ಸರಕಾರ ಯಾವ ಲೆಕ್ಕಗಳನ್ನು ಬಹಿರಂಗೊಡಿಸದೇ ಪಕ್ಷದ ಆರ್ಥಿಕತೆಯನ್ನು ರಾಮ ಭಕ್ತರಿಂದ ಲೂಟಿ ಹೊಡೆದಿದೆ ಎಂದು ಮಾಜಿ ಸಚಿವರು ಆರೋಪಿಸಿದರು.
ಸಾಮಾಜಿಕ ಚಿಂತನೆ ಇಲ್ಲದ ಬಿಜೆಪಿ ಸರಕಾರ:
ಕೊರೊನಾ ಎರಡನೇ ಅಲೆಯಲ್ಲಿ ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದರೆ ರಾಜ್ಯ ಸರಕಾರ ಮಾತ್ರ ಜಾತ್ರೆ, ಸಭೆ ಹಾಗೂ ಚುನಾವಣೆಗಳಿಗೆ ಮಹತ್ವವನ್ನು ನೀಡಿ ಜನರನ್ನು ಇನಷ್ಟು ಸಂಕಷ್ಟಕ್ಕೆ ಸಿಲುಕಿದಂತೆ ಮಾಡಿದೆ. ಇನ್ನೂ ರೋಗಿಗಳಿಗೆ ಒದಗಿಸಬೇಕಾದ ಔಷಧಿಗಳಲ್ಲಿಯೂ ಹಣ ಲೂಟಿ ಹೊಡೆಯುವ ನೀಚ ಕಾರ್ಯಕ್ಕೆ ಸರಕರಾ ಮುಂದಾಗಿದೆ. ಖಾರ್ಕಾನೆಗಳಿಗೆ ಆಮ್ಲಜನಕವನ್ನು ನೀಡುವಲ್ಲಿ ಯಾವುದೇ ಸಮಸ್ಯೆ ಮಾಡದ ರಾಜ್ಯ ಸರಕಾರ ಆಸ್ಪತ್ರೆ ರೋಗಿಗಳಿಗೆ ಆಮ್ಲಜನಕದ ಕೊರೆತೆ ನೀಗಿಸುವಲ್ಲಿ ವಿಫಲಗೊಂಡಿತು. ಇನ್ನೂ ರೋಗಿಗಳಿಗೆ ಐಷಾರಾಮಿ ಆಸ್ಪತ್ರೆಗಳಲ್ಲಿ ಬೇಡ್ ಬುಕಿಂಗ್‌ನಲ್ಲಿಯೂ ರಾಜಕೀಯ ತೋಡಿಸಿ ಜನರ ಕಣ್ಣಿಗೆ ಕಾಣದ ದುರಾಡಳಿಲತವನ್ನು ತೋಡಿಸಿದೆ ಎಂದು ಮಾಜಿ ಸಚಿವ ನಾಡಗೌಡ ಆರೋಪಿಸಿದರು.
ಕಾಂಗ್ರೆಸ್‌ನಿಂದ ಹೊರಾಟ:
ಈಗಾಗಲೇ ಕೊರೊನಾ ಅಲೆ ತತ್ತರಿಸಿರುವ ಜನಸಾಮಾನ್ಯರಿಗೆ ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆಎಳೆದಂತೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ ಹಾಗೂ ಸಿದ್ರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದ ಮಾಜಿ ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಗುರಣ್ಣ ತಾರನಾಳ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ನಾಡಗೌಡ, ಪ್ರಶಾಂತ ತಾರನಾಳ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ರಫೀಕ ಶಿರೋಳ, ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಯೂಸೂಫ ನಾಯ್ಕೋಡಿ, ಲಕ್ಷ್ಮಣ ಚವ್ಹಾಣ, ಮುತ್ತು ಬಿಳೇಭಾವಿ ಇದ್ದರು.
Be the first to comment