ಅಕ್ರಮ ಮದ್ಯ ಸಾಗಾಟದ್ದಾರರ ಮೇಲೆ ದಾಳಿ :: ಹಣ ಪಡೆದು ಕೇಸ ದಾಖಲಿಸದೆ ಬಿಡುಗಡೆ…?

ನಾರಾಯಣಪುರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಮಟಕಾ,ಜೂಜು,ಅಕ್ರಮ ಮದ್ಯ ಮಾರಾಟ,ಅಕ್ರಮ ಮರಳು ಸಾಗಾಣಿಕೆ ಗಳೆ ಸಕ್ರಮದ ರೀತಿಯಲ್ಲಿ ಸಾಗುತ್ತಿವೆ ಇದಕ್ಕೆ ಕಾರಣವೆ ಪೋಲಿಸರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದವರ ಜೋತೆ ಸ್ನೇಹ  ಅಕ್ರಮ ವಿರೋಧಿಸುವವರನ್ನು ದ್ರೋಹಿಗಳ ರೀತಿಯಲ್ಲಿ ನಾರಾಯಣಪುರ ಪೋಲಿಸ ಠಾಣೆಯ ಕೆಲ ಸಿಬ್ಬಂದಿ ನೋಡುತ್ತಾರೆ

ಅಮರೇಶ ಕಾಮನಕೇರಿ                                               ರಾಜ್ಯ ಕಾರ್ಯಾಧ್ಯಕ್ಷರು                                              ಅಹಿಂದ ಚಿಂತಕರ ವೇದಿಕೆ

ವಿಜಯಪುರ ಜಿಲ್ಲೆಯಿಂದ ರಾಯಚೂರ ಜಿಲ್ಲೆಯ ಲಿಂಗಸ್ಗೂರ ತಾಲ್ಲೂಕಿನ ಹಳ್ಳಿಗಳಿಗೆ ಮತ್ತು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಳ್ಳಿಗಳಿಗೆ ಮದ್ಯ ಸಾಗಾಟ ಮಾಡುತ್ತಿರುವವರ ಮೇಲೆ ನಾರಾಯಣಪುರ ಪೋಲಿಸ ಠಾಣೆಯ ಪಿ ಎಸ ಆಯ್ ಮತ್ತು ಸಿಬ್ಬಂದಿಗಳು ದಾಳಿ ಮಾಡಿ ಅಕ್ರಮ ಮದ್ಯ ಸಾಗಾಟಗಾರರನ್ನು ನಾರಾಯಣಪುರ ಡ್ಯಾಂ ಮುಂಭಾಗದಲ್ಲಿ 8 ಕ್ಕೂ ಅಧಿಕ ಬೈಕಗಳಲ್ಲಿ ಹಾಗೂ ಕಾರಗಳಲ್ಲಿ ಮದ್ಯ ಸಾಗಟ ಮಾಡುತ್ತಿರುವವರನ್ನು ಹಿಡಿದು ಆನಂತರ ಬಿಟ್ಟು ಕಳಿಸಿರುವ ಘಟನೆ ನೇಡದಿದೆ. ಅಕ್ರಮ ಮದ್ಯ ಸಾಗಾಟಗಾರರ ಮೇಲೆ ಕೇಸ ದಾಖಲಿಸದೆ ಬಿಟ್ಟು ಕಳಿಸಿರುವುದು ಹಲವು ಅನುಮಾನಗಳಿ ಕಾರಣವಾಗಿದೆ. ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ನಾರಾಯಣಪುರ ಪೋಲಿಸ ಠಾಣಾ ಸಿಬ್ಬಂದಿ ಅಕ್ರಮ ಮದ್ಯ ಸಾಗಟಾಗರರಿಂದ ಹಣ ಪಡೆದು ಬೈಕ ಹಾಗೂ ಕಾರಣಗಳನ್ನು ಬಿಟ್ಟು ಕಳಿಸಿದ್ದಾರೆ ಎಂದು ತಿಳಿದು ಬಂದಿದೆ..! 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮದ್ಯ ಸಾಗಾಟ ನೇಡೆದಿದೆ ಎಂದು ಮೂಲಕಗಳಿಂದ ತಿಳಿದು ಬಂದಿದ್ದು ಅಕ್ರಮ ಮದ್ಯ ಸಾಗಾಟಗಾರರ ಮೇಲೆ ಕೇಸ ದಾಖಲಿಸದೆ ಕಳಿಸಿರು ಈ ಪ್ರಕರಣವನ್ನು ಯಾದಗಿರಿ ಎಸ ಪಿ ವೇದ ಮೂರ್ತಿ ಸರ್ ರವರು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಪೋಲಿಸರ ಮೇಲೆ ಅಕ್ರಮ ಕೈಗೋಳಬೇಕು.

ಸಾಂದರ್ಭಿಕ ಚಿತ್ರ

ಅಕ್ರಮ ಮರಳು ಸಾಗಾಟದ ಮಂತ್ಲಿ ಹಣ ಅಂಚಿಕೋಳ್ಳಲು ಪೋಲಿಸರಲ್ಲೆ ಜಗಳ…? ಕೆಲವೆ ದಿನಗಳಲ್ಲಿ ಸಂಪೂರ್ಣ ಸ್ಟೋರಿ ನಿಮ್ಮ ಮುಂದೆ

ಲಾಕ್ ಡೌನ ಹಾಗೂ ಅಂತರ ಜಿಲ್ಲಾ ಸಂಚಾರ ನಿಷೇಧ ಇರುವ ಈ ಸಂದರ್ಭದಲ್ಲಿ ಹಣದ ಆಸೆಗೆ ಅಕ್ರಮ ಚಟುವಟಿಕೆಗಳಿಗೆ ಪೋಲಿಸರೆ ಸಹಕರಿಸಿತ್ತಿರುವುದು ವಿಪರ್ಯಾಸವೆ ಸರಿ ಪೋಲಿಸ ಇಲಾಖೆಯ ಮಾನ ಹರಾಜು ಮಾಡುತ್ತಿರುವ ನಾರಾಯಣಪುರ ಪೋಲಿಸ ಠಾಣೆಯ ಕೆಲ ಸಿಬ್ಬಂದಿಯ ಮೇಲೆ ಕಠಿಣ ಕ್ರಮ ಕೈಗೊಂಡು ಪೋಲಿಸ್ ಇಲಾಖೆ ಮಾನ ಕಾಪಾಡಬೇಕಾಗಿದೆ. ಅಕ್ರಮ ಮದ್ಯ, ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ಸಾಗುತ್ತಿದೆ. ಅಕ್ರಮಗಳಿಗೆ ಕಡಿವಾಣ ಹಾಕದೆ ಪೋಲಿಸ ಇಲಾಖೆಗೆ ಕಪ್ಪು ಚುಕ್ಕೆ ತರುತ್ತಿರು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ವಾಹಿನಿಯು ಆಗ್ರಹಿಸುತ್ತದೆ

Be the first to comment

Leave a Reply

Your email address will not be published.


*