ಕುಟುಂಬದ ಜತೆ ಕಾಲ ಕಳೆಯುವ ಬದಲಾಗಿ ಜನರ ಆರೋಗ್ಯದ ರಕ್ಷಣೆಗೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ:ಶಾಸಕ ಡಾ.ಚರಂತಿಮಠ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕೋವಿಡ್‌-19 ಮಹಾಮಾರಿಯ ವಿರುದ್ದ ಯಾವುದೇ ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸರ ಕಾರ್ಯವನ್ನು ಇಡಿ ಭಾರತವೇ ಶ್ಲಾಘಿಘಿಸುವಂತಾಗಿದೆ.ಎಲ್ಲರ ರಕ್ಷಣೆಗೆ ಇವರಾದರೆ ಅವರ ರಕ್ಷಣೆಗೆ ಕೊಠಾರಿ ಕುಟುಂಬದವರಿಂದ ಹಬೆ ತೆಗೆದುಕೊಳ್ಳುವ ಸಾಮಗ್ರಿ ಕೊಡುಗೆ.

ಬಾಗಲಕೋಟೆ : ನಗರ ಪೊಲೀಸ ಠಾಣೆ ಸಿಬ್ಬಂದಿಗಳಿಗೆ ಉಚಿತವಾಗಿ ಸುಭಾಸ ಕೊಠಾರಿ ಕುಟುಂಬ ದವರಿಂದ ನೀಡಿದ ನೂರು ಹಬೆ ತೆಗೆದುಕೊಳ್ಳುವ ಸಾಮಾಗ್ರಿ (steam inhaler ) ಯನ್ನು ಶಾಸಕರಾದ ಡಾ. ವೀರಣ್ಣ ಚರಂತಿಮಠ ರವರು ವಿತರಿಸಿದರು.

ಶಹರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸ್ಟೀಮ್ ತೆಗೆದುಕೊಳ್ಳುವ ಸಾಮಾಗ್ರಿ ವಿತರಿಸಿ ಮಾತನಾಡಿದ ಶಾಸಕರು, ಕೊರೋನಾ ಸಂಕಷ್ಟದಲ್ಲಿ ನಿತ್ಯ ತಮ್ಮ ಕುಟುಂಬದ ಜತೆ ಕಾಲ ಕಳೆಯುವ ಬದಲಾಗಿ ಜನರ ಆರೋಗ್ಯದ ರಕ್ಷಣೆಗೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದರು.

ಕೊರೋನಾ ನಿಯಂತ್ರಣಕ್ಕೆ ಬರುವವರಿಗೆ ಜನ ಅನವಶ್ಯಕವಾಗಿ ಹೊರಗಡೆ ಸಂಚರಿಸಬಾರದು. ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಕೊರೋನಾ ಸೋಂಕು ಕಟ್ಟಿಹಾಕಬೇಕಾಗಿದೆ ಎಂದರು.ಡಿವೈ ಎಸ್ ಪಿ ನಂದರೆಡ್ಡಿ, ಸುಭಾಸ ಕೋಠಾರಿ, ರಾಮ ಮುಂದಡಾ, ಸುಜೀತ ಕೊಠಾರಿ, ಸಿಪಿಐ ಮರಗುಂಡಿ ಈ ಸಂದರ್ಭದಲ್ಲಿ ಹಾಜರಿದ್ದರು.

Be the first to comment

Leave a Reply

Your email address will not be published.


*