ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕನ್ನಡ ಜಾನಪದ ಪರಿಷತ್ತಿನ ರಾಜ್ಯ, ವಿಜಯಪುರ ಜಿಲ್ಲಾ ಹಾಗೂ ಮುದ್ದೇಬಿಹಾಳ ತಾಲೂಕಾ ಘಟಕ ಮತ್ತು ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನ ಕಮೀಟಿ ಸಹಯೋಗದಲ್ಲಿ ಜ.5 ಮಂಗಳವಾರ ಜಾನಪದ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ ತಾಲೂಕಾಧ್ಯಕ್ಷ ಎ.ಆರ್.ಮುಲ್ಲಾ ತಿಳಿಸಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು ವಹಿಸುವರು, ಕನ್ನಡ ಜಾನಪದ ಪರಿಷತ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಉದ್ಘಾಟಿಸುವರು, ಪರಿಷತ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಕರಾದ ಎಂ.ಬಿ.ಪಾಟೀಲ ಕಾರ್ಯಕ್ರಮದಲ್ಲಿ ಜಾನಪದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದು ಗ್ರಾಮ ಪಂಚಾಯತ ಸದಸ್ಯರಾದ ಎಸ್.ಆಯ್.ಸಜ್ಜನ, ಮಂಜುಳಾ ಹುಲಗಣ್ಣಿ, ಮಹಿಬೂಬ ನಿಡಗುಂದಿ, ಶೋಭಾ ಬಿರಾದಾರ, ಭೀಮವ್ವ ಬಜಂತ್ರಿ, ಶೇಖಪ್ಪ ರೊಣರೊಟ್ಟಿ, ಸುಮಂಗಳಾ ಬಿರಾದಾರ, ನಂದಾ ಬಾಗೇವಾಡಿ, ಗುರುಬಾಯಿ ಹುಲಗಣ್ಣಿ, ಯುವ ಮುಖಂಡ ಸಿದ್ದು ಹೆಬ್ಬಾಳ, ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಂಡಲಿಕ ಮುರಾಲ, ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಎಂ.ಬಿ.ಬಿರಾದಾರ, ತಾಲೂಕಾ ಸಿಡಿಪಿಓ ಎಸ್.ಎಸ್.ಗುಗ್ಗರಿ, ಪಿಡಿಓ ಪಿ.ಎಸ್.ನಾಯ್ಕೋಡಿ ಸೇರಿಂದತೆ ಇತರರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Be the first to comment