ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಡಿ.1:
ಹೆಚ್.ಐ.ವಿ. ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿಯ ಹಂಚಿಕೆ” ಎಂಬ ಘೋಷವಾಕ್ಯದೊಂದಿಗೆ ಮಂಗಳವಾರ ಎಸ್ ಜಿ ವ್ಹಿ ಸಿ ವಿದ್ಯಾ ಪ್ರಸಾರಕ ಟ್ರೇಸ್ಟ್ ನ ಎಂ ಜಿ ವ್ಹಿ ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಏರ್ಪಡಿಸಲಾಯಿತು.
ಪ್ರಾಸ್ತಾವಿಕವಾಗಿ ಪ್ರೊ. ಬಿ ಏನ್ ಬೋಳಿಶೆಟ್ಟಿ ಉಪನ್ಯಾಸಕರು ಮಾತನಾಡಿ ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಏಡ್ಸ್ ಎಂಬ ಮಹಾಮಾರಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 1988ರಿಂದ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುವುದು. ಏಡ್ಸ್ ಎಂದರೇನು ಅದು ಹರಡುವುದು ಹೇಗೆ ಎಂಬ ಅರಿವು ಈಗ ಜನರಲ್ಲಿದೆ. ಮೊದಲೆಲ್ಲಾ ಏಡ್ಸ್ ರೋಗಿಗಳನ್ನು ಮುಟ್ಟಲು ಜನರು ಭಯ ಪಡುತ್ತಿದ್ದರು, ಅವರನ್ನು ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ವಿಶ್ವ ಆರೋಗ್ಯ ಸಂಶ್ಥೆಯು ಏಡ್ಸ್ ಕುರಿತು ಜಾಗೃತಿ ಪ್ರಾರಂಭಿಸಿದ ಮೇಲೆ ಏಡ್ಸ್ ರೋಗಿಗಳಿಗೆ ಜನ ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಾಗಿದೆ ಎಂದರು
ವಿಶ್ವ ಏಡ್ಸ್ ದಿನ ಕುರಿತು ಅನಿಸಿಕೆಗಳನ್ನು ಕಾಲೇಜಿನ ವಿದ್ಯರ್ಥಿಗಳಾದ ವೇದಾವತಿ ಕುಲಕರ್ಣಿ ಹಾಗೂ ಪ್ರಬಯ್ಯ ಹಿರೇಮಠ್ ಹಂಚಿಕೊಂಡರು
ನಂತರ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿದ ಎಂ ಎಸ್ ಗೌಡರ ಆರೋಗ್ಯ ಸಹಾಯಕರು ಹಾಗೂ ನಗರ ಕೋವಿಡ್19 ಮೇಲ್ವಿಚಾರಕರು ಮಾತನಾಡಿ ಜಾಗತಿಕ ಒಗ್ಗಟ್ಟು ಮತ್ತು ಜವಾಬ್ದಾರಿ ಹಂಚಿಕೆ ಎಂಬ ಘೋಷಾ ವಾಕ್ಯದೊಂದಿಗೆ ಈ ವರ್ಷದ ವಿಶ್ವ ಏಡ್ಸ್ ದಿನಾಚಾರಣೆಯನ್ನು ಆಚರಿಸಲಾಗುತಿದ್ದು ಈ ಎಚ್.ಐ.ವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೇಂದಿಲ್ಲ. ಆದರೆ ಏಡ್ಸ್ ಇರುವವರೆಲ್ಲಾ ಎಚ್.ಐ.ವಿ ವೈರಾಣುವಿನಿಂದ ಸೋಂಕಿತರಾಗಿರುತ್ತಾರೆ. ಏಡ್ಸ್ ಎನ್ನುವುದು ಮಾನವನ ದೇಹದ ರೋಗ ನೀರೋಧಕ ಶಕ್ತಿಗೆ ಸಂಬಂಧಪಟ್ಟ ಕಾಯಿಲೆಯಾಗಿರುತ್ತದೆ ಎಚ್.ಐ.ವಿ ವೈರಾಣು ದೇಹಕ್ಕೆ ಸೇರಿದ ಬಳಿಕ ನಮ್ಮ ದೇಹದ ರಕ್ಷಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ. ಹೀಗಾದಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ, ರೋಗಿಯು ಬ್ಯಾಕ್ಟೀರಿಯಾ, ಫಂಗಸ್, ವೈರಾಣು ಅಥವಾ ಇನ್ನಾವುದೇ ರೋಗಗಳ ಸೋಂಕಿಗೆ ಬೇಗನೆ ತುತ್ತಾಗುತ್ತಾನೆ ರೋಗ ನಿಯಂತ್ರಣಕಾಗಿ ವಿಶ್ವ ಏಡ್ಸ್ ದಿನಾಚರಣೆಯನ್ನು ದೇಶಾದ್ಯಂತ ಆಚರಣೆ ಮಾಡುವ ಮೂಲಕ ಈ ಸೋಂಕಿನ ವಿರುದ್ಧ ಜಾಗೃತಿಯನ್ನು ಮೂಡಿಸುವ ಕೆಲಸ ಒಂದಡೆ ನಡೆಯತ್ತಿದ್ದರೇ ಸೋಂಕು ಬಾಧಿತರನ್ನು ಮಾನವೀಯತೆಯ ನೆಲಗಟ್ಟಿನಲ್ಲಿ ಕಾಣಬೇಕಾದ ಅಗತ್ಯವಿದ್ದು, ಬಾಧಿತರು ತಮ್ಮ ಜೀವನ ಶೈಲಿಯನ್ನು ಎಲ್ಲರಂತೆ ನಡೆಸಬೇಕಾದರೆ ರೋಗಿವು ಸರಿಯಾಗಿ ತಪ್ಪದೆ ಚಿಕಿತ್ಸೆ ಪಡೆಯಬೇಕು ಎಲ್ಲರಂತೆ ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕಿದೆ ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೋ. ಬಿ ಎಸ್ ಓದಸೋಮಠ ಹಿರಿಯ ಉಪನ್ಯಾಸಕರು ಮಾತನಾಡಿ ವಿಶ್ವ ಏಡ್ಸ್ ದಿನ ನಮಗೆ ಒಗ್ಗಟ್ಟಿನಿಂದ ಹೋರಾಡುವ ಅವಕಾಶ ನೀಡಿದೆ. ಈ ರೋಗ ತಡೆಯುವ ಏಕೈಕ ಮಾರ್ಗವೆಂದರೆ ಜಾಗೃತಿ ಮಾತ್ರ. ಇದರ ಕುರಿತು ಎಲ್ಲೆಲ್ಲೂ ಜಾಗೃತಿ ಮೂಡುವ ಅಗತ್ಯವಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಎಚ್ ಡಿ ನದಾಫ್ ಎಸ್ ಎ ಜೇಕ್ಕೇರಾಳ ಎಸ್ ಬಿ ಸುತಾರ್ ಆರ್ ಎಸ್ ಹಿರೇಮಠ್ ಹಾಜರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯರ್ಥಿನಿ ಸಾವಿತ್ರಿ ಹಡಪದ ವಂದನಾರ್ಪಣೆಯನ್ನು ವಿದ್ಯರ್ಥಿನಿ ಗೀತಾ ದಿಂಡಾವಾರ ವಹಿಸಿದರು
Be the first to comment