ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಡಿ.2:
ಸರಕಾರಿಯ ಪ್ರತಿಯೊಂದು ಇಲಾಖೆಗಿಂತ ಕಂದಾಯ ಇಲಾಖೆ ಮಹತ್ತ ಜವಾಬ್ದಾರಿತ ಇಲಾಖೆಯಾಗಿದೆ. ಇಂತಹ ಇಲಾಖೆಯಲ್ಲಿ ಕಾರ್ಯನಿರ್ವಹಿಸದ ಅನುಭವ ಇನ್ನಿತರ ಇಲಾಖೆಯಲ್ಲಿ ಕಾರ್ಯಸೇವೆ ಮಾಡಲು ಹೆಚ್ಚಿನ ಸಹಾಯವಾಗಲಿದೆ ಎಂದು ಬಿದರ ಜಿಲ್ಲೆಗೆ ಮುಂಬಡ್ತಿಹೊAದಿದ ತಹಸೀಲ್ದಾರ ಜಿ.ಎಸ್.ಮಳಗಿ ಹೇಳಿದರು.
ಪಟ್ಟಣದ ತಹಸೀಲ್ದಾರ ಸಭಾ ಭವನದಲ್ಲಿ ಬುಧವಾರ ಸಂಜೆ ಇಲಾಖೆ ಸಿಬ್ಬಂದಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಮುದ್ದೇಬಿಹಾಳ ತಾಲೂಕಾ ದಂಡಾಧಿಕಾರಿಯಾಗಿ ಆಗಮಿಸಿದ್ದ ಸಮಯದಲ್ಲಿ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಯೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲಾಗಿದೆ. ಸದ್ಯಕ್ಕೆ ಗ್ರಾಮ ಪಂಚಾಯತಿ ಚುನಾವಣೆ ಎದುರಾಗಿದ್ದು ನನಗೆ ನೀಡಿದ ಸಹಕಾರವನ್ನೆ ಸ್ಥಳೀಯವಾಗಿ ಅಧಿಕಾರ ವಹಿಸುವ ಅಧಿಕಾರಿಗಳಿಗೂ ನೀಡಿಬೇಕು ಎಂದು ಅವರು ಮನವಿ ಮಾಡಿದರು.
ತಳಿಕೋಟಿ ತಾಲೂಕಾ ತಹಸೀಲ್ದಾರ ಅನೀಲಕುಮಾರ ಢವಳಗಿ ಮಾತನಾಡಿ, ಮುದ್ದೇಬಿಹಾಳ ತಾಲೂಕಾ ದಂಡಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಮುಂಬಡ್ತಿ ಪಡೆದಿರುವ ಮಳಗಿ ಅವರ ಕಾರ್ಯಶ್ಲಾಘನೀಯವಾದದ್ದು. ತಹಸೀಲ್ದಾರ ಅವರಿಗೆ ಇರಬೇಕಾದ ಮೌನಸ್ವಭಾವವೂ ಅವರಲ್ಲಿದ್ದು ಇವರು ಯಾವುದೇ ಇಲಾಖೆಗೆ ಕಾರ್ಯನಿರ್ವಹಿಸುವ ಸಮರ್ಥ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಸ್ತೆದಾರರಾದ ಇ.ಸಿ.ತೊನಿಶ್ಯಾಲ, ಎ.ಎಚ್.ಎ.ಎಚ್.ಬಳೂರಗಿ, ಕಂದಾಯ ನಿರೀಕ್ಷಕರಾದ ಡಿ.ಎಸ್.ತಳವಾರ, ನಿಂಗಪ್ಪ ಮಾವಿನಮಠ, ಎಂ.ಎಚ್.ಮಾಗಿ, ಎಫ್‌ಡಿಸಿ ವಿ.ವಿ.ಅಂಬಿಗೇರ ಸೇರಿದಂತೆ ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಇದ್ದರು.
Be the first to comment