ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಅಂಬಿಗ್ ನ್ಯೂಸ್ ವಿಶೇಷ:
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಹಿಂದೆ ನಾಲತವಾಡ ದೇಶಮುಖ ಅವರ ಕಾಲದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಬಿಟ್ಟರೆ ಸುಮಾರು 30 ವರ್ಷದವರೆಗೂ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿರಲಿಲ್ಲ. ದೇಶಮುಖ ಅವರ ನಂತರ ಕ್ಷೇತ್ರವು ಕಾಂಗ್ರೆಸ್ ಪಕ್ಷಕ್ಕೆ ಭದ್ರಬುನಾದಿಯಾಗಿದ್ದ ಮುದ್ದೇಬಿಹಾಳ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿಯಿಂದ ಗೆಲವು ಸಾಧಿಸಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರಕ್ಕೆ ಅಂದಾಜು 2 ಸಾವಿರ ಕೋಟಿ ಅಭಿವೃದ್ಧಿ ಅನುದಾನಕ್ಕೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಈಗಾಗಲೇ 640 ಕೋಟಿ ಅನುದಾವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು ಅಭಿವೃದ್ಧಿಯತ್ತ ಮುಖಮಾಡಿದೆ.
ಮನೆ ಮನೆ ಮಾತಾಗಿರುವ ಎ.ಎಸ್.ಪಾಟೀಲ ನಡಹಳ್ಳಿ:
ಕ್ಷೇತ್ರದಲ್ಲಿ ಅಧಿಕಾರ ವಹಿಸಿದ ಕಲವೇ ವರ್ಷದಲ್ಲಿಯೇ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಆಗಬೇಕಾದ ಅಭಿವೃದ್ಧಿ ಬಗ್ಗೆ ಮಾಹಿತಿ ಮಾಡಿರುವ ಶಾಸಕ ನಡಹಳ್ಳಿ ಅವರು ಕ್ಷೇತ್ರದ ವಿದ್ಯಾವಂತ ಮಾತ್ರವಲ್ಲದೇ ಅನಕ್ಷರಸ್ತ ಯುವಕರಿಗೂ ಕ್ಷೇತ್ರದಲ್ಲಿಯೇ ಉದ್ಯೋಗ ಅವಕಾಶಗಳನ್ನು ನೀಡಬೇಕು. ಇದರಿಂದ ಉದ್ಯೋಗಕ್ಕಾಗಿ ಸಿಲಿಕಾನ್ ಸಿಟಿಗಳತ್ತ ಮುಖಮಾಡುತ್ತಿರುವ ಯುವಕರನ್ನು ಕ್ಷೇತ್ರದಲ್ಲಿಯೇ ಉಳಿಯುವಂತೆ ಮಾಡಬಹುದು ಎಂಬ ಯೋಜನೆಯನ್ನು ಹಾಕಿಕೊಂಡಿರುವ ನಡಹಳ್ಳಿ ಅವರ ನಡೆಗಾಗಿ ಕ್ಷೇತ್ರ ಪ್ರತಿಯೊಂದು ಮನೆಯಲ್ಲಿ ಮಾತಾಗಿದ್ದಾರೆ.
ಬಲಿಷ್ಠಗೊಳ್ಳುತ್ತಿರುವ ಬಿಜೆಪಿ ಪಕ್ಷ ಸಂಘಟನೆ:
ಮುದ್ದೇಬಿಹಾಳ ಕ್ಷೇತ್ರ ಕಾಂಗ್ರೆಸ್ ಭದ್ರಬುದಾನಿಯಾಗಿತ್ತು. ಅಲ್ಲದೇ ಕೆಲವೇ ಪ್ರದೇಶಕ್ಕೆ ಮೀಸಲಾಗಿದ್ದ ಬಿಜೆಪಿ ಪಕ್ಷದ ಪದಾಧಿಕಾರಿಗಳ ಪಟ್ಟಿಗೆ ತಮ್ಮ ಅಭಿಮಾನಿಗಳನ್ನೂ ಸೇರ್ಪಡೆ ಮಾಡಿಸಿಕೊಂಡ ಶಾಸಕ ನಡಹಳ್ಳಿ ಪಕ್ಷಕ್ಕೆ ಇನ್ನೂ ಹೆಚ್ಚಿನ ಭಲ ತಂದಿದ್ದಾರೆ. ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಪಟ್ಟಣ ಪಂಚಾಯತಿ, ತಾಲೂಕ ಪಂಚಾಯತಿ ಸೇರಿದಂತೆ ವಿವಿಧ ರಂಗಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನೆ ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ಇನ್ನೂ ಹೆಚ್ಚಿನ ಅಧಿಕಾರವನ್ನು ಒದಗಿಸುವ ಕೆಲಸ ಶಾಸಕ ನಡಹಳ್ಳಿ ಅವರು ಮಾಡಿದ್ದಾರೆ.
ಪಕ್ಷದಲ್ಲಿ ಯಾವುದೇ ಒಡಕಿಲ್ಲ:
ಹಿಂದೆ ಬೇರೆ ಪಕ್ಷದಲ್ಲಿದ್ದ ಎ.ಎಸ್.ಪಾಟೀಲ ನಡಹಳ್ಳಿ ಅವರು ರೈತರ ಪರವಾಗಿ ಧ್ವನಿ ಎತ್ತಿ ತಮ್ಮ ಪಕ್ಷದ ವಿರುದ್ಧವೇ ವಿವಿಧ ಹೋರಾಟಕ್ಕೆ ಮುಂದಾಗಿದ್ದರು. ತಮ್ಮ ಪಕ್ಷದ ವಿರುದ್ಧವೇ ಹೋರಾಟಕ್ಕೆ ಇಳಿದ ನಡಹಳ್ಳಿಗೆ ಕೇವಲ ದೇವರ ಹಿಪ್ಪರಗಿ ಅಲ್ಲದೇ ಮುದ್ದೇಬಿಹಾಳ ಮತಕ್ಷೇತ್ರದ ಜನರೂ ಸಾಕಷ್ಟು ಬೆಂಬಲ ನೀಡಿದರು. ಇವರ ಕಾರ್ಯವನ್ನು ಗಮನಿಸಿದ ಬಿಜೆಪಿ ವರಿಷ್ಠರು ನಡಹಳ್ಳಿ ಅವರಿಗೆ ಕ್ಷೇತ್ರ ವಿಧಾನಸಭಾ ಚುನಾವಣೆಗೆ ಟಿಕೇಟ್ ನೀಡಿದರು. ಪರ ಪಕ್ಷದಿಂದ ಬಂದ ವ್ಯಕ್ತಿಗೆ ಟಿಕೇಟ್ ನೀಡಿದ ಹಿನ್ನೆಲೆ ಬಿಜೆಪಿ ಪಕ್ಷದ ಕೆಲ ಹಿರಿಯ ಮುಖಂಡರಲ್ಲಿ ವೈಮನಸು ಕಾನಿಸಿಕೊಂಡಿತು. ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರನ್ನೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡ ಶಾಸಕ ನಡಹಳ್ಳಿ ಅವರು ಪಕ್ಷದಲ್ಲಿ ಯಾವದೇ ರೀತಿಯ ಒಡಕಿಲ್ಲವೆಂಬುವುದನ್ನು ಸಾಭಿತು ಮಾಡಿದ್ದಾರೆ.
“ಮುದ್ದೇಬಿಹಾಳ ಮತಕ್ಷೇತ್ರವು ಕಳೆದ 35 ವರ್ಷದ ಹಿಂದೆಯೇ ಸಾಕಷ್ಟು ಅಭಿವೃದ್ಧಿಯಾಗಬೇಕಾಗಿತ್ತು. ಆದರೆ ಕ್ಷೇತ್ರದಿಂದ ಆಯ್ಕೆಗೊಂಡ ಶಾಸಕರು ಇದರ ಬಗ್ಗೆ ಗಮನ ಹರಿಸದ ಕಾರಣ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿತ್ತು. ಆದರೆ ಪ್ರಸ್ತುತದಲ್ಲಿ ಶಾಸಕರಾಗಿರುವ ನಡಹಳ್ಳಿ ಅವರು ಕ್ಷೇತ್ರವನ್ನು ಸಿಲಿಕಾನ್ ಸಿಟಿಯನ್ನಾಗಿಸುವ ಗುರಿ ಹೊಂದಿದ್ದು ಈಗಾಗಲೇ ಕ್ಷೇತ್ರ ಎಂದೂ ಬಾರದಂಹ ಅನುದಾನವನ್ನು ತಂದಿದ್ದಾರೆ. ಶಾಸಕರು ಎಂತಹ ಕೆಲಸ ಮಾಡುತ್ತಾರೆ ಎಂಬುವುದನ್ನು ಕ್ಷೇತ್ರದ ಪ್ರತಿಯೊಬ್ಬರಿಗೂ ತಿಳಿಯುವಂತೆ ನಡಹಳ್ಳಿ ಅವರು ಮಾಡಿದ್ದಾರೆ.”
-ಸೋಮನಗೌಡ ಬಿರಾದಾರ (ಕವಡಿಮಟ್ಟಿ)
ಡಿಸಿಸಿ ಬ್ಯಾಂಕ್ ನಿರ್ದೇಶಕರು, ವಿಜಯಪುರ.
“ಹಿಂದೆ ನಾಡಗೌಡ ಅವರು ಶಾಸಕರಾಗಿದ್ದ ಸಮಯದಲ್ಲಿ ಹೆಚ್ಚಿನ ಅಭಿವೃದ್ಧಿಯಾಗರಲಿಲ್ಲಾ. ಅಲ್ಲದೇ ನಡಹಳ್ಳಿ ಅವರು ಮಾಡುತ್ತಿದ್ದ ಕೆಲ ಅಭಿವೃದ್ಧಿ ಕಾರ್ಯಗಳಿಗೆ ನಾಡಗೌಡ ಅವರು ಸಂಬಂಧಿಕರಿಂದಲೇ ವಿರೋಧ ಮಾಡಿದ ಘಟನೆಗಳು ನಡೆದಿದ್ದಾವೆ. ಮುದ್ದೇಬಿಹಾಳ ಕ್ಷೇತ್ರ ಕಾಂಗ್ರೆಸ್ ಕೈಗೊಂಬೆಯಾಗಿದ್ದನ್ನು ನಡಹಳ್ಳಿ ಅವರು ತಪ್ಪಿಸಿದ್ದಾರೆ. ಆದರೂ ಇನ್ನೂ ಕೆಲ ಗ್ರಾಮಗಳಲ್ಲಿ ಜನರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಶೀಘ್ರದಲ್ಲಿಯೇ ಅವುಗಳನ್ನೂ ಬಗೆಹರಿಸಲಾಗುವುದು. ಆದರೆ ಇದಕ್ಕೆ ನಡಹಳ್ಳಿ ಅವರು ಬೆಂಬಲಿಸುವುದು ಅವಶ್ಯಕವಿದೆ.”
-ಎಂ.ಎಸ್.ಪಾಟೀಲ ನಾಲತವಾಡ,
ಬಿಜೆಪಿ ಹಿರಿಯ ಮುಖಂಡ.
Be the first to comment