ನದಾಫ-ಪಿಂಜಾರ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯ…!!! ಶೈಕ್ಷಣಿ, ಆರ್ಥಿಕ, ಉದ್ಯೋಗಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ನದಾಫ್-ಪಿಂಜಾರ ಸಮುದಾಯ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ ಡಿ.1:

ಕರ್ನಾಟಕ ರಾಜ್ಯದಲ್ಲಿ ಅತೀ ಶೈಕ್ಷಣಿಕ, ಆರ್ಥಿಕ, ಔದ್ಯುಓಕಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ನದಾಫ-ಪಿಂಜಾರ ಸಮುದಾಯಕ್ಕೆ ನಿಗಮ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ತಾಲೂಕಾ ಪದಾಧಿಕಾರಿಗಳು ತಹಸೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.



ಈ ಸಂದರ್ಭದಲ್ಲಿ ಸಂಘ ತಾಲೂಕಾಧ್ಯಕ್ಷ ಮಲಿಕಸಾಬ ನದಾಫ ಮಾತನಾಡಿ, ತಲಾತಲಾಂತರದಿAದಲೂ ನದಾಫ/ಪಿಂಜಾರ ಜನಾಂಗದವರು ಗಾದಿ ತಯ್ಯಾರಿಸುವ, ಗುಡಾರ ನೇಯ್ಗೆ, ಹಗ್ಗ-ಕಣ್ಣಿಗಳ ತಯ್ಯಾರಿಕೆ ಕೆಲಸಗಳ ಮೇಲೆಯೇ ಅವಲಂಭಿತರಾಗಿದ್ದಾರೆ. ಅಲ್ಲದೇ ಸಮಾಜವು ಅಲೆಮಾರಿ ಜೀವನ ಸಾಗಿಸುತ್ತಿದ್ದು ಈ ಜನಾಂಗದಿAದ ಸರಕಾರದ ಉನ್ನತ ಹುದ್ದೆಗಳಲ್ಲಿ ಆಯ್ಕೆಯಾಗದಿರುವುದು ಶೈಕ್ಷಣಿಕವಾಗಿ ಸಮಾಜವು ಹಿಂದುಳಿದಿದ್ದನ್ನು ತೋರಿಸುತ್ತದೆ. ಆದ್ದರಿಂದ ಸಮಾಜಕ್ಕೆ ನಿಗಮ ಮಂಡಳಿ ಅತೀ ಅವಶ್ಯಕವಿದ್ದು ಕೂಡಲೇ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಬಿಸಾಬ ಕಂಬಾರ(ಕಾರ್ಗಿಲ್), ಬಾಬು ದಿಡ್ಡಿಮನಿ, ಮುಕ್ತುಮಸಾಬ ನದಾಫ, ಚಾಂದಸಾಬ ನದಾಫ, ಅಬ್ದುಲ್‌ಸಾಬ ನದಾಫ, ದಾವಲಸಾಬ ವಾಲಿಕಾರ, ನಬಿ ಮಾದಿನಾಳ, ಲಾಲಸಾಬ ಪಿಂಜಾರ, ಬಾಬು ನದಾಫ್, ಎಚ್.ಢವಳಗಿ, ಅಬ್ದುಲರಜಾಕ ಗಂಗೂರ, ಲಾಳೇಮಶಾಕ ನದಾಫ್, ನೂರನಬಿ ನದಾಫ ಸೇರಿದಂತೆ ಇತರರಿದ್ದರು.



Be the first to comment

Leave a Reply

Your email address will not be published.


*