ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್; ಟ್ರಂಪ್ ಗೆ ಮುಖಭಂಗ

ಜಗತ್ತು ಕಾತರದಿಂದ ವೀಕ್ಷಿಸುವಂತೆ ಮಾಡಿ ಕುತೂಹಲ ಘಟ್ಟ ತಲುಪಿದ್ದ ಅಮೇರಿಕದ ಅಧ್ಯಕ್ಷೀಯ ಫಲಿತಾಂಶ ಹೊರಬಿದ್ದಿದೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆಯಾಗಿದ್ದು ಎರಡನೇ ಬಾರಿ ಆಯ್ಕೆ ಬಯಸಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರೀ ಮುಖಭಂಗವಾಗಿದೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾಗಿದ್ದು ಬಿಡೆ‌ನ್ ಗೆ 284 ಮತ, ಟ್ರಂಪ್ ಗೆ 214 ಮತ ಪಡೆದಿದ್ದಾರೆ. ಮ್ಯಾಜಿಕ್ ನಂಬರ್ ಗಿಂತ 14 ವೋಟ್ ಹೆಚ್ಚು ಪಡೆದಿದ್ದಾರೆ ಬಿಡೆನ್.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ರೋಚಕ ಘಟ್ಟ ತಲುಪಿ ಇಡೀ ವಿಶ್ವವೇ ಸ್ಪಷ್ಟ ಚಿತ್ರಣಕ್ಕಾಗಿ ಕುತೂಹಲದಿಂದ ತುದಿಗಾಲ ಮೇಲೆ  ನಿಂತು ಅಮೆರಿಕದತ್ತ ನೋಡುತ್ತಿತ್ತು. ಇದೇ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯೊಬ್ಬರು ಅತಿ ಹೆಚ್ಚು ಮತ ಪಡೆದ ದಾಖಲೆ ಒಂದೆಡೆಯಾದರೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್ ಕ್ಯಾತೆ ತೆಗೆದಿದ್ದರು.

ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಾಜಿ ಉಪಾಧ್ಯಕ್ಷ ಜೋ ಬೈಡೆನ್‌ ನಡುವಿನ ರಾಜಕೀಯ ಸಮರ ಜಾಗತಿಕ ಮಾಧ್ಯಮದಲ್ಲಿ ಭಾರೀ ಸುದ್ದಿ ಮಾಡಿತ್ತು.

Be the first to comment

Leave a Reply

Your email address will not be published.


*