ಯರಝರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಗೆ ಆಗ್ರಹಿಸಿ ಗ್ರಾಮಸ್ಥರಿಂದ ಜಿಪಂ ಅಧ್ಯಕ್ಷೆ ಕಳ್ಳಿಮನಿ ಅವರಿಗೆ ಮನವಿ ಸಲ್ಲಿಸಿಕೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

ತಾಲೂಕಿನ ಯರಝರಿ ಗ್ರಾಮ ಪಂಚಾಯತಿಯಲ್ಲಿ ಅಭಿವೃಧ್ಧಿ ಅಧಿಕಾರಿಗಳು ಸರಿಯಾಗಿ ಜನರ ಪರ ಕಾರ್ಯಗಳನ್ನು ಮಾಡದೇ ಸರಕಾರದಿಂದ ಬರುವ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ಮುಟ್ಟಿಸುತ್ತಿಲ್ಲ. ಅಲ್ಲದೇ ಅಕ್ರಮ ಕೆಲಸಗಳಲ್ಲಿ ಶಾಮಿಲಾಗಿ ಹಣ ಲೂಟಿಯಲ್ಲಿ ತೊಡಗಿದ್ದು ಕೂಡಲೇ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಸೋಮವಾರ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರಿಗೆ ಮನವಿ ಸಲ್ಲಿಸಿದ್ದಾರೆ.



ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಸದಸ್ಯ ರೇವಣಪ್ಪ ಗುರಿಕಾರ ಅವರು, ಗ್ರಾಮಸ್ಥರಿಗೆ ಸರಕಾರದಿಂದ ಬಂದಂತಹ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪುವುದಿಲ್ಲ. ಗ್ರಾಮದ ಅಂಗಡವಾಗಿ ಅಭಿವೃದ್ಧಿ ಸೇರಿದಂತೆ ಇನ್ನಿತರ ಸಾಕಷ್ಟು ಕಾಮಗಾರಿಯಲ್ಲಿ ಗೋಲಮಾಲ ಮಾಡಿದ್ದಾರೆ. ಇದನ್ನು ಸದಸ್ಯನಾಗಿ ನಾನು ಪ್ರಶ್ನಿಸಿದರೆ ನಮ್ಮ ಮಾತಿಗೂ ಕಿಮ್ಮತ್ತು ಕೊಡದೇ ಏಕರೂಪ ಆಡಳಿತ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಅವರನ್ನು ಕೆಲಸದಿಂದ ವಜಾಗೊಳಿಸಿ ಗ್ರಾಮ ಪಂಚಾಯತಿಗೆ ಸೂಕ್ತ ಅಧಿಕಾರಿಗಳನ್ನು ಒದಗಿಸಬೇಕು ಎಂದು ಆರೋಪಿಸಿದ್ದಾರೆ.
ಪಟ್ಟಣದ ತಾಪಂಯಲ್ಲಿ ಸಓಮವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಜಿಪಂ ಅಧ್ಯಕ್ಷರಿಗೆ ಬೇಟಿ ಮಾಡಿದ ಗ್ರಾಮಸ್ಥರು, ಗ್ರಾಪಂ ಅಭಿವೃಧ್ಧಿ ಅಧಿಕಾರಿಗಳು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಲ್ಲಿ ಶಾಮಿಲಾಗಿದ್ದಾರೆ. ಅಲ್ಲದೇ ಪಂಚಾಯತಿಯಿಂದ ಗ್ರಾಮಸ್ಥರಿಗೆ ಸಿಗಬೇಕಾದ ಸರಕಾರಿ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳಿಗೆ ಒದಗಿಸಿಲ್ಲ. ಗ್ರಾಮಸ್ಥರು ಇದನ್ನು ಪ್ರಶ್ನಿಸಿದರೆ ಯಾವುದೇ ಬೇಜವಾಬ್ದಾರಿತ ಉತ್ತರ ನೀಡುತ್ತಾರೆ. ಗ್ರಾಮಸ್ಥರಿಗೆ ಪ್ರಧಾನ ಮಂತ್ರಿಗಳ ಮಹತ್ತರ ಯೋಜನೆಯಾದ ವ್ಯಯಕ್ತಿಕ ಶೌಚಾಲಯದ ಯೋಜನೆಯಲ್ಲೂ ಅಭಿವೃದ್ಧಿ ಅಧಿಕಾರಿಗಳು ಹಣ ಲೂಟಿ ಮಾಡಿದ್ದಾರೆ. ಆದ್ದರಿಂದ ಕೂಡಲೇ ಅವರನ್ನು ಪಂಚಾಯತಿಯಿಂದ ಬೇರೆಡೆಗೆ ವರ್ಗಾವಣೆ ಮಾಡಿ ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗ್ರಾಮ ಪಂಚಾಯತ ಸದಸ್ಯ ರೇವಣಸಿದ್ದ ಗುರಿಕಾರ, ಹಿರಿಯರಾದ ಬಾಪು ದೇಶಮುಖ, ತಿಪ್ಪಣ್ಣ ನರಸುಣಗಿ, ಎ.ಎಸ್.ಕಂಠಿ, ಬಸಪ್ಪ ಬಾದರದಿನ್ನಿ, ಎಸ್.ಎಸ್.ಪಟ್ಟಣದ, ಎಸ್.ಜಿ.ವಡ್ಡರ, ಪಿ.ಬಿ.ಮಾದರ, ಬಲವಂತಪ್ಪ ಚಲಮಿ, ತಮ್ಮನಗೌಡ ಗೌಡರ, ಬಂದೆನವಾಜ ನಾಯ್ಕೋಡಿ, ಸಿದ್ದಣ್ಣ ಹುಲ್ಲೂರ ಇತರರಿದ್ದರು.

Be the first to comment

Leave a Reply

Your email address will not be published.


*