ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಹುನಗುಂದ ತಾಲೂಕಿನ ಅಮೀನಗಡ ಪ್ರಾಥಮಿಕ ಆರೋಗ್ಯ ಕೇಂದ್ರ, ಹುನಗುಂದ ಮತ್ತು ಇಲಕಲ್ಲ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಶನಿವಾರ ದಿಡೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಮೀನಗಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರ್ಯಾಪಿಡ್ ಕಿಟ್ ಇಲ್ಲದನ್ನು ಕಂಡು ತಾಲೂಕಾ ಆಸ್ಪತ್ರೆಯಿಂದ ಅಗತ್ಯವಿರುವ ಕಿಟ್‍ಗಳನ್ನು ತರಿಸಿಕೊಳ್ಳುವಂತೆ ಸೂಚಿಸಿದರು. ಕಿಟ್‍ಗಳು ಬಂದ ನಂತರ ಪಟ್ಟಣ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಪೊಲಿಸ್ ಇಲಾಖೆಯ ಸಿಬ್ಬಂದಿ, ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದ ಸ್ಯಾಂಪಲ್ ಪರೀಕ್ಷೆ ನಡೆಸಲಾಯಿತು.
ನಂತರ ಹುನಗುಂದ ಮತ್ತು ಇಲಕಲ್ಲ ಆಸ್ಪತ್ರೆಗೆ ಭೇಟಿ ನೀಡಿ ಸ್ಯಾಂಪಲ್ ಕಲೇಕ್ಷನ್ ಮತ್ತು ಕೋವಿಡ್ ಪಾಜಿಟಿವ್ ಸಂಪರ್ಕದಲ್ಲಿರುವರನ್ನು ಪತ್ತೆ ಹಚ್ಚುವ ಕಾರ್ಯ, ಕೆಮ್ಮು, ನೆಗಡಿ, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಗೊಳಗಾದವರ ಪರೀಕ್ಷೆಯ ಬಗ್ಗೆ ಪರಿಶೀಲನೆ ನಡೆಸಿದರು. ಇಲಕಲ್ಲ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಹುನಗುಂದದ ಬಿವಿವ ಸಂಘದ ಸಿ.ವಿ.ಚರಂತಿಮಠ ಪಾಲಿಟೆಕ್ನಿನ್ ಕಾಲೇಜಿನಲ್ಲಿ ತೆರೆಯಲಾದ ಕೊವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ನೀಡಿ ಅಲ್ಲಿಯ ರೋಗಿಗಳ ಆರೋಗ್ಯ ಮತ್ತು ಚಿಕಿತ್ಸೆ, ರೋಗಿಗಳಿಗೆ ನೀಡುತ್ತಿರುವ ಆಹಾರ, ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಭೇಟಿ ಸಂದರ್ಭದಲ್ಲಿ ಹುನಗುಂದ ತಹಶೀಲ್ದಾರ ಬಸವರಾಜ ನಾಗರಾಳ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ ಸೇರಿದಂತೆ ಇತರರು ಇದ್ದರು.
Be the first to comment