ಸಾಗರ: ತಮಿಳುನಾಡು ಮೂಲದ ಓರ್ವ ಮಹಿಳೆ ಈ ದಿನ ಬೆಳಿಗ್ಗೆ ತಾಳಗುಪ್ಪ ಪೇಟೆಯಲ್ಲಿ ಬಟ್ಟೆಯನ್ನೇ ಧರಿಸಿದೇ ಓಡಾಡುತ್ತಿರುವಾಗ ಬಕ್ರೀದ್ ಹಬ್ಬದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ತಾಳಗುಪ್ಪ ಉಪ ಠಾಣೆಗೆ ಹಾಜರಾದ ಸಂದರ್ಭದಲ್ಲಿ ಈ ವಿವಸ್ತ್ರದ ಮಹಿಳೆಯನ್ನು ಗಮನಿಸಿದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ASI ಮೀರಾ ಮೇಡಂ ರವರ ಜೊತೆ ತಾಳಗುಪ್ಪ ಉಪ ಪೊಲೀಸ್ ಠಾಣೆಯ ಮಾನ್ಯ ಶ್ರೀ ದಫೇದಾರ್ ರಘು, ಮಾನ್ಯ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಮಂಜುನಾಥ್ ಹಾಗೂ ಶ್ರೀ ವಿನಾಯಕ ಸಿಬ್ಬಂದಿಗಳ ಸಹಾಯದಿಂದ ವಿವಸ್ತ್ರಳಾದ ಮಹಿಳೆಗೆ ಬಟ್ಟೆ ಧರಿಸಿ, ದೈಹಿಕವಾಗಿ ಹಸಿವೆಯಿಂದ ಬಳಲಿದವಳಿಗೆ ತಿಂಡಿ ತಿನಸು ನೀರು ನೀಡಿ, ಮಾನಸಿಕವಾಗಿ ಧೈರ್ಯ ತುಂಬಿ, ಬಸ್ ಗಾಗಿ ಸುಮಾರು ಹೊತ್ತು ಕಾದು ಬಸ್ ಬಾರದೇ ಇದ್ದಾಗ ASI ಮೀರಾ ಮೇಡಂ ತಮ್ಮ ಕಾರ್ ಕೂರಿಸಿಕೊಂಡು ಸಾಗರದಿಂದ ಬೆಂಗಳೂರು ಬಸ್ ಹತ್ತಿಸಿ ಆ ಮಹಿಳೆಗೆ ಊರಿಗೆ ತಲುಪಿಸುವ ಜವಾಬ್ದಾರಿ ಓರ್ವ ಮಹಿಳೆಗೆ ತಾವೊಬ್ಬ ಮಹಿಳೆಯಾಗಿ ASI ಶ್ರೀಮತಿ ಮೀರಾ ಮೇಡಂ, ಹಾಗೂ ಸಹ ಸಿಬ್ಬಂದಿಗಳಾದ ದಫೇದಾರ್ ಶ್ರೀ ರಘು ಶೆಟ್ರು, ಶ್ರೀ ಮಂಜುನಾಥ್, ಶ್ರೀ ವಿನಾಯಕ ಮೆಚ್ಚುಗೆ ವ್ಯಕ್ತಪಡಿಸಿದ ತಾಳಗುಪ್ಪ ಗ್ರಾಮಸ್ಥರು.ನಿಮ್ಮ ಒಳ್ಳೆ ಕೆಲಸ ಬಗ್ಗೆ ASI ಮೀರಾ ಮೇಡಂ ಪ್ರತಿಕ್ರಿಯೆ ಕೇಳಿದಾಗ ಅವರ ಮನದಾಳದ ಮಾತು.ಕೊನೆಯಲ್ಲಿ ASI ಮೀರಾ ಮೇಡಂ ಹೇಳಿದ ಮಾತು… ” ಎಲ್ಲಾ ಶ್ರೀ ಗುರು ಮಂತ್ರಾಲಯ ಪ್ರಭು ಶ್ರೀ ರಾಘವೇಂದ್ರ ಸ್ವಾಮಿಗಳ ಲೀಲೆ”.
Be the first to comment