ಲಿಂಗಸಗೂರು:ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ತಾಲೂಕಿನಲ್ಲಿರುವ 7 ಆಯ್ದ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಗಣಿತಗಳನ್ನು ವಿತರಣೆ ಮಾಡಲಾಯಿತು.
ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಈ ಪ್ರತಿಷ್ಠಾನವು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಚಿಂತೆಯನ್ನು ನೀಗಿಸುವ ನಿಟ್ಟಿನಲ್ಲಿ ತಿಂಗಳಿಗೆ ಎರಡು ಮೂರು ಬಾರಿ ಶಾಲೆಗಳಿಗೆ ತೆರಳಿ ಪ್ರಯೋಗಗಳ ಮೂಲಕ ವಿಜ್ಞಾನದ ಪಾಠ ಮಾಡುತ್ತಾ ಬಂದಿದೆ.
ಕೋವಿಡ್ 19 ಸೋಂಕು ಹರಡುವ ಸಂಕಷ್ಟದ ದಿನಗಳಲ್ಲಿಮಕ್ಕಳಿಗೆ ಮನೆಯಿಂದಲೇ ಕಲಿಯಲು ಅನುಕೂಲ ಮಾಡಿಕೊಟ್ಟಿದೆ ಜೊತೆಗೆ 7 ತಾಲೂಕಿನ ಶಾಲೆಗಳಿಗೆ ಪ್ರಯೋಗದ ಕೀಟಗಳನ್ನು ವಿತರಣೆ ಮಾಡಿದೆ.
ಮಕ್ಕಳಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡುವ ಕಾರ್ಯದಲ್ಲಿ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ತೊಡಗಿಸಿಕೊಂಡಿದೆ ಎಂದು ಅಗಸ್ತ್ಯ ಫೌಂಡೇಶನ್ ಮುಖ್ಯಸ್ಥ ಚಂದ್ರೇಗೌಡ ತಿಳಿಸಿದರು.
ಎಜುಕೇಶನ್ ಕಿಟ್ಟನಲ್ಲಿ ವಿಜ್ಞಾನ ಗಣಿತದ ಮತ್ತು ಒರಿಗಾಮಿ ಗೆ ಸಂಬಂಧಿಸಿದಂತೆ ಸುಮಾರು 40 ಚಟುವಟಿಕೆಗಳ ಪರಿಕರಣಗಳನ್ನು ಒಳಗೊಂಡಿವೆ.
ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಗೆ ಸುಲಭವಾಗಿ ಪ್ರಯೋಗ ವಿಧಾನಗಳ ಮೂಲಕ ತೋರಿಸಬಹುದಾಗಿದೆ ಅಲ್ಲದೆ ಪ್ರತಿಷ್ಠಾನದಲ್ಲಿ ತರಬೇತಿ ಪಡೆದ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಅಥವಾ ಸಮೀಪದ ಶಾಲೆಗಳ ವಿದ್ಯಾರ್ಥಿಗಳಿಗೆ ಗೂಗಲ್ ಮೀಟ್ ಮೂಲಕ ತರಗತಿಗಳನ್ನು ಆಯೋಜಿಸಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಕುತೂಹಲ ಕ್ರಿಯಾಶೀಲತೆ ಸೃಜನಶೀಲತೆ ಮತ್ತು ಪ್ರಶ್ನೆ ಮನೋಭಾವನೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದ್ದು ಶಾಲೆಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಚಂದ್ರೇಗೌಡ ಕರೆ ನೀಡಿದರು.
ಈ ಸಂದರ್ಭದಲ್ಲಿBRP ಮಹಾಂತೇಶ್ ಮಾತನಾಡಿ ಎಲ್ಲಾ ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಅಗಸ್ತ್ಯ ಫೌಂಡೇಶನ್ ನೀಡಿರುವ ಕೀಟಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡುವಲ್ಲಿ ಶ್ರಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬಿ ಆರ್ ಪಿ ಗಳಾದ ಎಂಕಪ್ಪ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯ ಸಿಬ್ಬಂದಿಗಳು ಕಿಟ್ಗಳನ್ನು ಆಯ್ದ ಶಾಲೆಗಳಾದ ಚಿತ್ತಾಪುರ ಬೆಂಡೋಣಿ ಹಿರೇ ಜಾವೂರ್ ಹಲಕಾವಟಗಿ ಜನತಾಪುರ ಚಿಕ್ಕ ಲೆಕ್ಕಿಹಾಳ ಗ್ರಾಮಗಳ ಸರಕಾರಿ ಶಾಲೆಗಳ ಮುಖ್ಯಗುರುಗಳಿಗೆ ವಿತರಿಸಿದರು.
Be the first to comment