ಕೋಟ್ಟು ಕಸಿದುಕೊಂಡ ಸರ್ಕಾರ ದೊಡ್ಡ ಹುದ್ದೆ ನೀಡುವ ಸಲುವಾಗಿದೆ ಎಂದ ಶಾಸಕ ಡದೆಸೂಗುರ

ವರದಿ:-ಅಮರೇಶ

ಬೆಳಿಗ್ಗೆ ಕೊಟ್ರು..ಸಾಯಂಕಾಲ ಕಸೆದುಕೊಂಡರು..ನೋ ಅಸಮಾಧಾನ.ಶಾಸಕ ಬಸವರಾಜ ದಡೆಸೂಗೂರು.

ಕೊಪ್ಪಳ.ಬೆಳಿಗ್ಗೆ ಕೊಟ್ಟು ಸಾಯಂಕಾಲ ಅಧ್ಯಕ್ಷ ಸ್ಥಾನ ಕಸೆದುಕೊಂಡ ಸರ್ಕಾರ, ನನಗೆ ಯಾವುದೇ ಅಸಮಾಧಾನ ಇಲ್ಲ‌ ಎಂದ ಶಾಸಕ ಬಸವರಾಜ ದಡೆಸೂಗೂರು. ಹೌದು. ರಾಜ್ಯ ಬಿಜೆಪಿ ಸರ್ಕಾರ,ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ರು, ರಾಜ್ಯ ಸರ್ಕಾರದ 24 ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಸ್ಥಾನವನ್ನು ನೇಮಿಸಲಾಗಿತ್ತು.

ಕೊಪ್ಪಳ ಜಿಲ್ಲೆಯ ಇಬ್ಬರು ಶಾಸಕರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡು ಆದೇಶ ಹೊರಡಿಸಲಾಗಿತ್ತು,ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ನಡೆಸುವರು ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಪರಣ್ಣ ಮನವಳ್ಳಿ ರವರನ್ನು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ರು.

ಶಾಸಕ ಬಸವರಾಜ ದಡೆಸೂಗೂರು ರನ್ನು ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪರಣ್ಣ ಮುನವಳ್ಳಿ ರನ್ನ ರಾಜ್ಯ ಹಣಕಾಸು ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಲಾಗಿತ್ತು. ಆದ್ರೆ ಸಾಯಂಕಾಲ ಹೊತ್ತಿಗೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಸವರಾಜ ದಡೆಸೂಗೂರನ್ನ ನೇಮಿಸಿದ ನಿಗಮ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿದ್ರು.ಅದರಂತೆ ಪರಣ್ಣ ಮುನವಳ್ಳಿ ರವರಿಗೂ ನಿಡಿದ ಸ್ಥಾನವನ್ನು ಕಸೆದುಕೊಂಡಿದೆ ರಾಜ್ಯ ಸರ್ಕಾರ.

ಇದಕ್ಕೆ ಸ್ವತಃ ಬಸವರಾಜ್ ದಡೇಸೂಗೂರ್ ಪ್ರತಿಕ್ರಿಯಿಸಿ ನನಗೆ ಯಾವುದೇ ಅಸಮಾಧಾನವಿಲ್ಲ ಮುಂದೆ ಮಂತ್ರಿ ಸ್ಥಾನ ಕೊಡಬಹುದು ಎಂದು ಹೇಳಿದ್ರು.ಅಧ್ಯಕ್ಷ ಸ್ಥಾನ ಕಸೆದುಕೊಂಡಿದರ ಹಿಂದೇ ಮುಖ್ಯಮಂತ್ರಿಗಳಿಗೆ ಹಲವಾರು ಒತ್ತಡಗಳು ಬಂದಿರಬಹುದು ಆದಕಾರಣ ಅಧ್ಯಕ್ಷ ಸ್ಥಾನವನ್ನು ವಾಪಸ್ ಪಡೆದಿರಬಹುದು ಇದಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಬಸವರಾಜ ದಡೇಸುಗೂರು ಪ್ರತಿಕ್ರಿಯೆ ನೀಡಿದ್ದಾರೆ.

Be the first to comment

Leave a Reply

Your email address will not be published.


*