ತಳವಾರ- ಪರಿವಾರ ಜನಾಂಗದ ಜನರಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಸಿಂದಗಿ ತಾಲೂಕು ಬ್ಲಾಕ್ ಕಾಂಗ್ರೆಸ್ , ಯುತ್ ಹಾಗೂ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳಾದ ವಿಠಲ ಕೊಳ್ಳೂರ , ಮಲ್ಲು ಸಾವಳಸಂಗ ಸೇರಿದಂತೆ ಮತ್ತಿತರರು ತಹಸೀಲ್ದಾರ್ ಸಂಜೀವಕುಮಾರ ದಾಸರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು .
ಸಿಂದಗಿ:-ತಳವಾರ ಹಾಗೂ ಪರಿವಾರ ಜನಾಂಗಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ತಾಲೂಕು ಬ್ಲಾಕ್ ಕಾಂಗ್ರೆಸ್ , ಯುತ ಹಾಗೂ ಅಲ್ಪಸಂಖ್ಯಾತ ಘಟಕದ ಅಧಿಕಾರಿಗಳು ತಹಸೀಲ್ದಾರ್ ಸಂಜೀವಕುಮಾರ ದಾಸರ ಮೂಲಕ ಸೋಮವಾರ , ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು . ತಾಲೂಕು ಬ್ಲಾಕ್ ಅಧ್ಯಕ್ಷ ವಿಠಲ ಕೊಟ್ಟೂರ , ಮಲ್ಲು ಸಾವಳಸಂಗ ಮಾತನಾಡಿ , ಕೇಂದ್ರ ಸರ್ಕಾರದ ಆದೇಶದ ಪ್ರಕಾರ ತಳವಾರ ಮತ್ತು ಪರಿವಾರ ಜನಾಂಗ ರಾಜ್ಯದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿದೆ . ಈ ಜನಾಂಗದ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರವು 2020 ಮಾ .31 ರಂದು ಆದೇಶ ಮಾಡಿದ್ದರೂ , ರಾಜ್ಯ ಸರ್ಕಾರ ಕೇಂದ್ರದ ಆದೇಶಕ್ಕೆ ಕಿಮ್ಮತ್ತು ಕೊಡದೇ ಈ ಜನಾಂಗಕ್ಕೆ ಅನ್ಯಾಯ ಎಸಗಿದೆ ಹಿಂದುಳಿ ವರ್ಗದ ಪಟ್ಟಿಯಿಂದ ಎಸ ಟಿ ಸೇರಿ ಮತ್ತೆ ಯತ್ತಾಸ್ಥಿತಿ ಮುಂದುವರಿಸಿ ಎಂದು ಸಮಾಜ ಕಲ್ಯಾಣ ಪ್ರಿನ್ಸಿಪಲ್ ಸೆಕ್ರೆಟರಿ ಕುಮಾರ ನಾಯಕ ಮೂಲಕ ಕೆಟಗೆರಿ 1 ರಲ್ಲಿ ಮುಂದುವರೆಸಲು ಆದೇಶ ಮಾಡುತ್ತದೆ ಸರ್ಕಾರ ಅಂದರೆ ಇವರ ದಲಿತ ವಿರೋಧಿ ನೀತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸರ್ಕಾರದ ಕುಮ್ಮಕ್ಕಿನಿಂದ ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲುತ್ತಿರುವ ಸಮಾಜ ಕಲ್ಯಾಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ತಳವಾರ ಪಂಗಡಕ್ಕೆ ಸಂವಿಧಾನದ ದತ್ತ ಹಕ್ಕು ದೊರಕಬೇಕು. ಬಿಜೆಪಿ ಸರ್ಕಾರ ತೊಟ್ಟುಲು ತೂಗಿ ಚುವುಟುವತ್ತಿದೆ ಎಂದು ಆರೋಪಿಸಿದರು .ಈ ಸಂದರ್ಭದಲ್ಲಿ ಶಿವನಗೌಡ ಬಿರಾದಾರ , ಎಸ್.ಬಿ. ಪಂಪಣ್ಣ , ರಾಮಚಂದ್ರ ರಾಠೋಡ , ಯೋಗಪ್ಪಗೌಡ ಪಾಟೀಲ , ಪೈಗಂಬರ್ ಹಚ್ಯಾಳ , ಯಲ್ಲು ಕೆರಕಿ , ರಮೇಶ ಗುಬ್ಬೇವಾಡ, ವಿಠಲ ರೇವೂರ , ವಿಜಯಕುಮಾರ ಯಾಳವಾರ , ಮಹ್ಮದ್‌ಪಟೇಲ್ ಬಿರಾದಾರ , ಸಿದ್ದಲಿಂಗ ಗುಂಡಾಪುರ , ಬಿಳಿಯಾನ ಸಿದ್ದ ಮಳಗೇದ , ಕುಮಾರ ಗೊಂದಳಿ , ಮಹಿಬೂಬ ದೊಡಮನಿ , ಹಾಸಿಂ ಆಳಂದ , ಸಲಿಂ ನಾಟೀಕಾರ , ಮಾಂತೇಶ ನಾಯ್ಕಡಿ ಇತರರಿದ್ದರು.
Be the first to comment