ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ ನಡೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ.

ವರದಿ: ಪ್ರಕಾಶ ಮಂದಾರ.

ಹರಿಹರ:-ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ತಾಲೂಕು ಸಮಿತಿ ಹರಿಹರ ವತಿಯಿಂದ ದಾವಣಗೆರೆ ಉಪ ವಿಭಾಗಾಧಿಕಾರಿಗಳಿಗೆ, ಹರಿಹರ ತಾಲೂಕ್ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯನ್ನು ನಡೆಸಲು ನಿನ್ನೆ ಮನವಿ ಸಲ್ಲಿಸಿದರು .ಸುಮಾರು ಒಂದು ವರ್ಷದ ಹಿಂದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ನಡೆಸಿದ್ದು ,ಆದರೆ ಇತ್ತೀಚಿನ ದಿನಗಳಲ್ಲಿ ಸಭೆ ನಡೆಸಿದ್ದು ಕಂಡು ಬಂದಿರುವುದಿಲ್ಲ ಇದರಿಂದ ಸಮುದಾಯದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ವಿಳಂಬವಾಗುತ್ತಿರುವ ಕಾರಣ ತಾವುಗಳು ಕೂಡಲೇ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯನ್ನು ನಡೆಸಿ ಸಮುದಾಯದ ಜನರ ಕುಂದುಕೊರತೆಯನ್ನು ಆಲಿಸಿ ಸರ್ಕಾರಕ್ಕೆ ಸಮುದಾಯಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕೊಡಿಸುವಂತೆ ಮಾನ್ಯ ಉಪವಿಭಾಗಾಧಿಕಾರಿಗಳಲ್ಲಿ ಸಮುದಾಯದ ಬಂಧುಗಳು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಸಂಚಾಲಕರಾದ ದುಗ್ಗಪ್ಪ ,ಜಿಲ್ಲಾ ಸಂಘಟನೆ ಸಂಚಾಲಕರಾದ ಸುರೇಶ್ ತೆರದಾಳ,ಬಸವರಾಜ್ ಜಿಲ್ಲಾ ಸಂಘಟನೆ ಸಂಚಾಲಕರು ,ಆರ್ ಶ್ರೀನಿವಾಸ್ ಹರಿಹರ ತಾಲೂಕ ಸಂಚಾಲಕರು, ಹಾಗೂ ಬಿಎಚ್ ಮಂಜಣ್ಣ ,ಅಣ್ಣಪ್ಪ ಅಜ್ಜೇರ ,ಹನುಮಂತಪ್ಪ ,ಸಂಘಟನಾ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*