ರಾಯಚೂರು: ಜಿಲ್ಲೆಯ ಲಿಂಗಸೂರು ತಾಲೂಕಿನ ಗುರುಗುಂಟ ಅಮರೇಶ್ವರ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿಅಕ್ಕಿ ಹೂತಿಟ್ಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಮುಖ್ಯಮಂತ್ರಿಗಳಿಗೆ ತಹಸಿಲ್ದಾರ ಚಾಮರಾಜ ಪಾಟೀಲ್ ಮೂಲಕ ಒತ್ತಾಯಿಸಿದರು.ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಸಲ್ಲಿಸುವ ಬಂಗಾರ ಬೆಳ್ಳಿ ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳಿಗೆ ಕಡಿವಾಣ ಹಾಕುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕೆಲವು ಬಾರಿ ಕಳ್ಳತನದ ಹೆಸರಿನಲ್ಲಿ ನಾಪತ್ತೆ ಮಾಡಿರುವ ಸಂಘತಿ ಇಲಾಖೆ ಮುಂದಿದೆ. ಈಚೆಗೆ ಭಕ್ತರು ನೀಡಿರುವ ಅಕ್ಕಿ-ಬೇಳೆ ಇತರೆ ಆಹಾರಪದಾರ್ಥ ಸದ್ಬಳಕೆ ಮಾಡದೆ ಕಾಟಾಚಾರಕ್ಕೆಒಂದು ವರದಿ ಸಿದ್ಧಪಡಿಸಿ ಮಣ್ಣಲ್ಲಿ ಮುಚ್ಚಿಟ್ಟಿದ್ದು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ತಾಲೂಕಿನಲ್ಲಿ ಬರಗಾಲ ಪ್ರವಾಹ ಕರುನಾಡ ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಪಡಿತರ ಹಂಚದೆ ನಿರ್ಲಕ್ಷ ತೋರಿ ನಿಯಮಾನುಸಾರ ಗುಣಮಟ್ಟ ಪರಿಶೀಲಿಸದೆ ಅಪರಾಧ ಎಸಗಿದ್ದಾರೆ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿ ಭಕ್ತರ ಭಾವನೆಗಳಿಗೆ ಆಗಿರುವ ಆಘಾತಕ್ಕೆ ಒದಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ನಾಗರಾಜ ಹಾಲಬಾವಿ. ಪರಶುರಾಮ ಇತರರಿದ್ದರು.
Be the first to comment