371(ಜೆ)ಕಲಂ ತಿದ್ದುಪಡಿಗೆ ಆಗ್ರಹಿಸಿ ಶವಯಾತ್ರ ಎಚ್ಚರಿಕೆ

ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಜೆ ಕಲಂನಲ್ಲಿ ಮುಂಬಡ್ತಿ ನಿಯಮಗಳು ಅವೈಜ್ಞಾನಿಕವಾಗಿದ್ದು , ಸರ್ಕಾರ ಕೂಡಲೇ ಎಚ್ಚೆತ್ತು ತಿದ್ದುಪಡಿ ಮಾಡಬೇಕೆಂದು ಅಹಿಂದ ಚಿಂತಕರ ವೇದಿಕೆಯ ರಾಜ್ಯಾಧ್ಯಕ್ಷರಾದ ಸೈಬಣ್ಣಾ ಜಮಾದಾರ ಹೇಳಿದರು . ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು , ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಷ್ಟೇ ಅಲ್ಲದೇ , ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಶೇ .೮ ರಷ್ಟು ನೇಮಕಾತಿ ಮತ್ತು ಮುಂಬಡ್ತಿಯನ್ನು ನೀಡುದಾಗ ಮಾತ್ರ 371 j ಕಲಂಕ್ಕೆ ನಿಜವಾದ ಅರ್ಥ ಬರುತ್ತದೆ . ಈ ಕುರಿತು ಪುನರ್‌ ತಿದ್ದುಪಡಿಗೆ ಅವಕಾಶ ಮಾಡಿ ಈ ಭಾಗದ ಬೇಡಿಕೆಗಳನ್ನು ಪೂರೈಸಬೇಕು ಅಂದಾಗ ಮಾತ್ರ ‘ ಕಲ್ಯಾಣ ಕರ್ನಾಟಕ ‘ ಎಂಬ ಹೆಸರು ಅಚ್ಚಳಿಯದೇ ಉಳಿಯಲು ಸಾಧ್ಯ ಎಂದು ತಿಳಿಸಿದರು .

 371 ಜೆ ಕಲಂನ ಮುಂಬಡ್ತಿ ನಿಯಮಗಳು ಅವೈಜ್ಞಾ ನಿಕವಾಗಿದ್ದು ಇದನ್ನು ಕೂಡಲೇ ಕಾನೂನು ತಿದ್ದುಪಡಿ ಮಾಡಬೇಕು ಮತ್ತು ಕಲ್ಯಾಣ ಕರ್ನಾಟಕ ಹೊರತುಪಡಿಸಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಶೇ .8 ರಷ್ಟು ನೇಮಕಾತಿ ಮತ್ತು ಮುಂಬಡ್ತಿ 2014 ಮೀಸಲಾತಿ ನೀಡಬೇಕು ಎಂದು ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು . ಸರಕಾರ 371 ( ಜೆ ) ಸಮರ್ಪಕ ವಾಗಿ ಜಾರಿಗೊಳಿಸದೆ ಈ ಭಾಗದ ಜನ ತೆಗೆ ಸರ್ಕಾರಗಳು ಅನ್ಯಾಯ  ಮಾಡುತ್ತಿವೆೆ. ಈ ವಿಷಯದ ಕುರಿತು ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಸರಕಾರದ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ ಎಂದು

ಅಹಿಂದ ವೇದಿಕೆ ಸದಸ್ಯರು ಆರೋಪಿಸಿದರು.ಅದಕ್ಕಾಗಿ ಘನ ರಾಜ್ಯ ಸರಕಾರವು ಹಾಗೂ 371 ( ಜೆ ) ಉಪ ಸಮಿತಿಯು ಈ ಕೂಡಲೆ ಮುಂಬಡ್ತಿ ನಿಯಮ ಕಾನೂನು ತಿದ್ದುಪಡಿ ಮಾಡಬೇಕು . ಅದು ಕರ್ನಾಟಕ ರಾಜ್ಯದ ಕೆ.ಸಿ. ಎಸ್.ಆರ್ ನಿಯಮದಂತೆ ತಿದ್ದುಪಡಿ ಮಾಡಬೇಕೆಂದು ಅವರು ಒತ್ತಾಯಿಸಿದರು . ಎಷ್ಟೆಲ್ಲ ಅನ್ಯಾಯವಾದರೂ ಈ ಭಾಗದ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ . ಕೂಡಲೇ ಬೇಡಿಕೆಗಳನ್ನು ಇಡೇರಿಸಬೇಕು . ಇಲ್ಲವಾದಲ್ಲಿ ಈ ಭಾಗದ ಜನಪ್ರತಿನಿಧಿಗಳ ಶವ ಯಾತ್ರೆ ಮಾಡಬೇಕಾಗುತ್ತದೆ ಮತ್ತು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಉಗ್ರ ಹೊರಾಟವನ್ನು ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು ಸುದ್ದಿಗೋಷ್ಠಿಯಲ್ಲಿ ಅಂಹಿದ ಚಿಂತಕ ವೇದಿಕೆಯ ಕಾರ್ಯಾಧ್ಯಕ್ಷರಾದ ಅಮರೇಶ ಕಾಮನಕೇರಿ, ಹಣಮಂತ ರಾಮ್ ಪೂಜಾರಿ , ಘಾಳೆಪ್ಪಾ ಅಂತಿ , ಧನರಾಜ್ ಬೇಮಳಖೇಡ್ ಮಲ್ಲಿಕಾರ್ಜುನ್ ಕೊಡ್ಲಿ , ಬಕ್ಕಪ್ಪಾ ಬೇಮಳಖೇಡ್ , ಇಸ್ಮಾಯಿಲ್ ಮಾಲಗತ್ತಿ , ಸ್ವಾಮಿದಾಸ್ ಕಂಪೆನೋರ್ , ಸಂಗಮೇಶ ಎಕೂರ , ಚಂದ್ರ ಕಾಂತ್ ಭೂಮಕ್ , ಅನಿಲ್ ಹಳ್ಳಿ ಮುಂತಾದವರು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*