ಭೂ ಸುಧಾರಣೆ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಪ್ರತಿಭಟನೆ

ವರದಿ: ಪೀರು ನಂದೇಶ್ವರ್ ಅಥಣಿ

ಅಥಣಿ:-ಭಾರತೀಯ ಕಿಸಾನ್ ಸಂಘದ ವತಿಯಿಂದ ಪ್ರತಿಭಟನೆ1961ರ ಭೂಸುಧಾರಣೆ ಕಾಯಿದೆ ತಿದ್ದುಪಡಿ ವಿರೋಧಿಸಿ ಭಾರತೀಯ ಕಿಸಾನ್ ಸಂಘ ಅಥಣಿ ಘಟಕದ ವತಿಯಿಂದ ಅಥಣಿ ತಹಸೀಲ್ದಾರ್ ಕಚೇರಿ ಮುಂದೆ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು

1961ರ ಭೂ ಸುಧಾರಣೆ ಕಾಯ್ದೆ ತಿಡ್ಡುಪಡೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ಕಿಸಾನ್ ಸಂಘ ತೀವ್ರ ಆಕ್ರೋಶ ಹೊರ ಹಾಕಿದರೂ.

ತಹಸೀಲ್ದಾರ್ ಕಚೇರಿ ಮುಂದೆ ಭೂ ಸುಧಾರಣೆ ಕಾಯ್ದೆ ತಿದ್ದಿಪಡಿ ಮಾಡಿ ಸರ್ಕಾರ ಹೊಸದಾಗಿ ಆದೇಶ ಹೊರಡಿಸಿರುವ ರಾಜ್ಯ ಪತ್ರಕ್ಕೆ ಬೆಂಕಿ ಹಚ್ಚಿ ಇದು ರೈತ ವಿರೋಧಿ ಸರ್ಕಾರ ವೆಂದು ದಿಕ್ಕಾರ ಕೂಗಿದರು.

ನಂತರ ಅಥಣಿ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರ ಮುಕಾಂತರ ಪ್ರದಾನ ಮಂತ್ರಿ ನರೇಂದ್ರ ಮೋದಿ ಯವರಿಗೆ ಹಾಗು ರಾಷ್ಟ್ರಪತಿ ಗಳಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ರೈತ ಮುಖಂಡರು ರಾಜ್ಯ ಸರ್ಕಾರ ಹೊರಡಿಸಿರುವ ಈ ಕಾಯ್ದೆ ಯಿಂದ ರೈತಾಪಿ ಜನರಿಗೆ ತುಂಬಾ ತೊಂದರೆ ಯಾಗಲಿದೆ ಆದರಿದ್ದ ಆದಷ್ಟು ಆದಷ್ಟು ಬೇಗನೆ ಈ ತಿದ್ದುಪಡಿ ಮಾಡಿರುವ ಕಾಯ್ದೆ ಯನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷರು ಆದ ಶ್ರೀಶೈಲ್ ಜನಗೌಡರ, ಕಾರ್ಯದರ್ಶಿ ಭರಮು ನಾಯಿಕ, ರೈತ ಮುಖಂಡರಾದ ದಶರಥ ನಾಯಿಕ, ಪ್ರಕಾಶ್ ಪೂಜಾರಿ, ಈರಣ್ಣ ತಂಗಡಿ, ದುಂಡಪ್ಪ ಅವಟಿ, ಸಿದ್ದಾರೂಢ ಮಠಪತಿ, ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*