ಕೊರೊನಾ ಚೆಕ್​ಪೋಸ್ಟ್​ಗೆ ಗುದ್ದಿದ ಕಂಟೇನರ್, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಸಿಬ್ಬಂದಿ:

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಕಂಟೇನರ್​ವೊಂದು ಕೊರೊನಾ ಚೆಕ್​ಪೋಸ್ಟ್​ಗೆ ಗುದ್ದಿದ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಗುಗ್ಗಲಮರಿ ಚೆಕ್​ಪೋಸ್ಟ್ ಬಳಿ ನಡೆದಿದೆ.

ಬಾಗಲಕೋಟೆಯ ಗುಗ್ಗಲಮರಿ ಗ್ರಾಮದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50ಕ್ಕೆ ಹೊಂದಿಕೊಂಡಂತೆ ಕೊರೊನಾ ಚೆಕ್​ಪೋಸ್ಟ್ ಹಾಕಲಾಗಿದೆ. ರಾತ್ರಿ ಗೂಡ್ಸ್ ತುಂಬಿದ ಕಂಟೇನರ್ ವೇಗದಿಂದ ಬಂದು ಮೊದಲಿಗೆ ಅಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್​​ಗಳಿಗೆ ಗುದ್ದಿ, ನಂತರ ಚೆಕ್​ಪೋಸ್ಟ್ ಒಳಗೆ ನುಗ್ಗಿದೆ. ಕಂಟೇನರ್ ಬ್ಯಾರಿಕೇಡ್​ಗೆ ಗುದ್ದಿದ ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ಹೊರ ಓಡಿ ಬಂದಿದ್ದಾರೆ. ಇದರಿಂದ ಸ್ವಲ್ಪದರಲ್ಲಿಯೇ ಅಲ್ಲಿದ್ದ ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆಯ 7 ಜನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಚೆಕ್​ಪೋಸ್ಟ್ ಸಿಬ್ಬಂದಿಯ 3 ಬೈಕ್​​ಗಳು ಜಖಂಗೊಂಡಿವೆ.

Be the first to comment

Leave a Reply

Your email address will not be published.


*