ಸಂಕಷ್ಟದಲ್ಲಿರುವ ಸಾಧಿಖ್ ನ ಚಿಕಿತ್ಸೆಗೆ ಅಗತ್ಯ ನೆರವು ನೀಡಿ-ಮನವಿ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ದಡವ ಸೇರಿಸು ಅಂಬಿಗ

ಬೆಂಗಳೂರಿನ ಸಾಧಿಖ್ ಭಾಷಾ ಎಂಬ ಯುವಕ ದಿ:೧೦/೧೧/೧೬ರಂದು,ಬೈಕ್ ನಲ್ಲಿ ಬೆಂಗಳೂರಿನಲ್ಲಿ ಸಂಚರಿಸುತ್ತಿದ್ದಾಗ,ಆಕಸ್ಮಿಕವಾಗಿ ರೋಡ್ ರಿಪೇರಿ ಸ್ಥಳದ್ದ ಕಲ್ಲೊಂದಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದು.ಕೈ ಕಾಲುಗಳು ತೀವ್ರ ನಜ್ಜು ಗುಜ್ಜಾಗಿದ್ದವು,ಚಿಕಿತ್ಸೆಗಾಗಿ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿ ಕಾಲಿಗೆ ರಾಡು ಹಾಕಿರುತ್ತಾರೆ.

ಮನೆಗೆ ಬಂದನಂತರ ಕೆಲದಿನಗಳಾದನಂತರ ಚಿಕಿತ್ಸೆಗೆ ಹಣವಿಲ್ಲದ ಕಾರಣ, ಸೂಕ್ತ ನಿವ೯ಣೆ ಕಾಣದೇ ಗಾಯದಲ್ಲಿ ಸೆಪ್ಟಿಕ್ ಉಂಟಾಗಿ ಹುಳುಗಳು ಹುಟ್ಟಿಕೊಂಡಿವೆ.ಶಸ್ತ್ರ ಚಿಕಿತ್ಸೆ ಮೂಲಕ ಕಾಲನ್ನು ಅತೀ ಶೀಘ್ರದಲ್ಲಿಯೇ ದೇಹದಿಂದ ಬೇರ್ಪಡಿಸಬೇಕು,ನಿಲ೯ಕ್ಷ್ಯ ತೋರಿದರೆ ದೇಹದ ಉಳಿದ ಭಾಗವನ್ನು ಸೆಪ್ಟಿಕ್ ಆವರಿಸುವ ಸಾಧ್ಯತೆ ಇದೆ ಎಂದು ವೈಧ್ಯರು ಎಚ್ಚರಿಸಿದ್ದಾರೆ.ದುಡಿಮೆ ಇಲ್ಲದ ಮನೆಯಲ್ಲಿ ದಿನವೊಂದು ಯುಗವಾಗಿ ಪರಿವ೯ತ೯ನೆಯಾಗಿದೆ.ಇಂತಹದ್ದರಲ್ಲಿ ಕೊರೋನಾದಂತಹ ಮಹಾಮಾರಿ ತನ್ನ ಹಟ್ಟಹಾಸ ಮೆರೆಯುತ್ತಿದ್ದು,ತನ್ನೊಟ್ಟಿಗಿರುವ ತನ್ನಕ್ಕನಿಗೂ ಕೂಲಿ ಕೆಲಸವೂ ಇಲ್ಲವಾಗಿದೆ.ಈ ಸಂದಿಘ್ದ ಪರಿಸ್ಥಿತಿಯಲ್ಲಿ ಕಟ್ಟಿ ಕೊಂಡವಳು ಕಡೆತನಕ ಎಂಬ ಮಾತು ಸಾದಿಖ್ ನಸೀಬಿನಲ್ಲಿ ತದ್ವಿರುದ್ಧವಾಗಿದೆ.ಕೈ ಹಿಡಿದವಳು ಕೈಕೊಟ್ಟಿದ್ದಾಳೆ,ಸಾಧಿಖ್ ನಿಗೆ ತನ್ನಕ್ಕನೇ ಮಹಾಮಾತೆಯಾಗಿದ್ದಾಳೆ.

ಅಗತ್ಯ ನೆರವಿಗಾಗಿ ಮನವಿ- ಸಾಧಿಖ್ ನ ಬಳಿ ವೈಧ್ಯರು ಸೂಚಿಸಿರುವ ಮಾತ್ರೆಗಳನ್ನು ಖರೀಧಿ ಮಾಡಲು ಹಣವಿಲ್ಲ, ತುತಾ೯ಗಿ ಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಸಬೇಕಿದೆ.ಆದರೆ ಅಗತ್ಯವಾಗಿರುವ ಹಣ ಇಲ್ಲವಾಗಿದ್ದು,ಸಾಧಿಖ್ ನನ್ನು ಗ್ಯಾಂಗ್ರಿನ್ ದಿನಾಲು ಹೆದರಿಸುತ್ತಿದೆ.ಕಾರಣ ಸಾಧಿಖ್ ನಿಗೆ ಅಗತ್ಯವಿರುವ ನೆರವನ್ನು ಸಜ್ಜನ ಸಹೃದಯಿಗಳು,ದಾನಿಗಳು,ಪರೋಪಕಾರಿ ಧನವಂತರು,ವೈಧ್ಯಕೀಯ ಕ್ಷೇತ್ರದಲ್ಲಿರುವ ಅಧಿಕಾರಿಗಳು,ಪ್ರಭಾವಿ ವ್ಯಕ್ತಿಗಳು.ಸಹಾಯದ ಹಸ್ತ ಅಗತ್ಯ ನೆರವು ನೀಡಬಯಸುವವರು, ಸಂಕಷ್ಟದಲ್ಲಿರುವ ತನಗೆ ಸಹಕಾರ ನೀಡಬೇಕೆಂದು ಸಾಧಿಖ್ ಹಾಗೂ ಆತನ ಸಹೋದರಿ ಕೋರಿದ್ದಾರೆ. *ವಿಳಾಸ-* ಸಾಧಿಖ್ ಭಾಷಾ,ಹೌಸ್ ನಂ೪೪,೧೦ನೇಕ್ರಾಸ್ ಸುಭಾಷ್ ನಗರ,ಸಿಂಗ್ ಸಂದ್ರ ವಾಡ್೯ ಸಿ ಬ್ಲಾಕ್,ಎಲೆಕ್ಟ್ರಾನಿಕ್ ಸಿಟಿ ಪಕ್ಕ ಬೆಂಗಳೂರು-೫೬೦೦೬೮. ದೂರವಾಣಿ ಸಂಖ್ಯೆ-೯೭೪೨೨೪೬೬೪.ಸಂಪಕಿ೯ಸಬಹುದಾಗಿದೆ.ಇವರ ಸಂಕಷ್ಟಕ್ಕೆ ಮರುಗಿರುವ ದಲಿತ ಸಂಘಷ೯ ಸಮಿತಿ ರಾಜ್ಯ ಮಹಿಳಾ ಅಧ್ಯಕ್ಷೆ,ಸಂಡೂರಿನ ಭೀಮಪುತ್ರಿ ನಾಗಮ್ಮರವರು ಹಾಗೂ ಕೂಡ್ಲಿಗಿ ತಾಲೂಕು ದಸಂಸ ಸಂಘಟನಾ ಸಂಚಾಲಕ ಸಿದ್ದಾಪುರ ಈಶಪ್ಪರವರು,ಇವರ ಪರ ಸಾವ೯ಜನಿಕರಲ್ಲಿ ಅಗತ್ಯ ನೆರವು ಕೋರಿ ಮನವಿ ಮಾಡೋ ಮೂಲಕ ಇವರಲ್ಲಿ ಆತ್ಮ ಸ್ಥೈಯ೯ ತುಂಬಿದ್ದಾರೆ.

Be the first to comment

Leave a Reply

Your email address will not be published.


*