ಜೀಲ್ಲಾ ಸುದ್ದಿಗಳು
ವಿಶ್ವವು ಕೊರೊನಾ ಸಂಕಷ್ಟದಲ್ಲಿದೆ. ಈ ನಡುವೆ ಮೇ 1 ಕಾರ್ಮಿಕರ ದಿನ ಬಂದಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರ ಸಂಕಷ್ಟಗಳು ಸುದ್ದಿಯಾಗುತ್ತಿವೆ. ಉದ್ಯೋಗವಿಲ್ಲದೆ, ಸೂಕ್ತ ಸೌಲಭ್ಯವಿಲ್ಲದೆ ತೊಂದರೆಯನ್ನು ಅನುಭವಿಸುತ್ತಿರುವ ಕಾರ್ಮಿಕರ ಗೋಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಅಪರೂಪ. ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿ ನೂರಾರು ಕಿಲೋ ಮೀಟರ್ ನಡೆದುಕೊಂಡು ಊರು ಸೇರಿದ ಕಾರ್ಮಿಕರ ಕಣ್ಣೀರಿಗೂ 2020 ರ ಮೇ 1 ಸಾಕ್ಷಿಯಾಗಿದೆ. ಕೊರೊನಾದಂತಹ ಗಂಡಾತರ ಪರಿಸ್ಥಿತಿಯಲ್ಲಿ ಈ ದಿನದಂದು ಕಾರ್ಮಿಕರ ಮುಖದಲ್ಲಿ ಸಂತಸ ಮೂಡಲು ಅಸಾಧ್ಯ ಎಂದು ಕಾರ್ಮಿಕ ಸಂಘಟನೆಯ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಗಂಗನಗೌಡ್ರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಕಾರ್ಮಿಕ ದಿನದ ನಿಮಿತ್ತ ಮಾತನಾಡಿದರು.
ಕಾರ್ಮಿಕ ದಿನದ ನಿಮಿತ್ತ ಬಸವರಾಜ ಮೇಲಸೀಮಿ,ಅಪ್ಪು ದೇಶಮುಖ,ಪಿ.ಜಿ.ಬಿರಾದಾರ ಮಾತನಾಡಿದರು.
ಈ ವೇಳೆ ವಿಜಯಮಹಾಂತೇಶ ಜಾಲಹಳ್ಳಿ, ಮಲ್ಲು ಗಂಗನಗೌಡರ ತಾಲುಕಾ ಉಪಾಅಧ್ಯಕ್ಷರು ಕಾರ್ಮಿಕರ ಸಂಘ ಮುದ್ದೇಬಿಹಾಳ ಸತೀಶ ಘನಾತೆ, ಹುಲಗಪ್ಪ ಹಳ್ಳಿ,ರಪಿಕ ಹಣಗಿ,ಮಲ್ಲು ಕಾಟಿ,ನಾಗು ಹಳ್ಳಿ,ಈರಣ್ಣ ಪಲ್ಲೇದ,ಬಸ್ಸು ಹುಗಾರ ಅಬ್ದುಲ,ವೀರೇಶ ಚಳಗೇರಿ, ದವಲಸಾ ಹಳ್ಳುರ ಇದ್ದರು.
Be the first to comment