ಹುಬ್ಬಳ್ಳಿ ನಗರದಲ್ಲಿ, ವಾಯವ್ಯ ಸಾರಿಗೆ ಗಂಗಾಮತಸ್ಥ ನೌಕರರ ಹಾಗೂ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಹಾಗೂ ಪ್ರತಿಭ ಪುರಸ್ಕಾರ‌.

31-01-2019 ರಂದು ಹುಬ್ಬಳ್ಳಿ ನಗರದಲ್ಲಿ,
ವಾಯವ್ಯ ಸಾರಿಗೆ ಗಂಗಾಮತಸ್ಥ
ನೌಕರರ ಹಾಗೂ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಬೃಹತ್ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಹಾಗೂ ಪ್ರತಿಭ ಪುರಸ್ಕಾರ‌.

ರಾಜ್ಯದಾದ್ಯಂತ ಕೋಲಿ ಗಂಗಾಮತಸ್ಥರ ಸಂಘಟನೆಯು ಬೃಹದಾಕಾರವಾಗಿ ಬೆಳವಣಿಗೆ ಆಗುತ್ತಲಿದ್ದು.
ಸಮಾಜ ಬಂಧುಗಳು ವಿವಿಧ ಕಾರ್ಯಕ್ರಮದ ಮೂಲಕ
ಜಾಗೃತಿ ಮೂಡಿಸುತ್ತಿದ್ದರೆ. ಹಾವೇರಿ ತಾಲ್ಲೂಕು, ನರಸೀಪುರದಲ್ಲಿರುವ
ನಿಜಶರಣ ಅಂಬಿಗರ ಚೌಡಯ್ಯನವರ
ಗುರುಪೀಠದ ಶ್ರೀಶಾಂತಾ ಭೀಷ್ಮ ಚೌಡಯ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಚೌಡಯ್ಯನವರ ಜಯಂತಿಯನ್ನು ವೈಭವೋಪೇತವಾಗಿ ಆಚರಿಸಲಾಯಿತು,

 

ಅಂಬಿಗ ನ್ಯೂಸ್ ನಲ್ಲಿ ನೇರಪ್ರಸಾರವಾದ ದೃಶ್ಯ ಗಳುhttps://youtu.be/UbR2ouhPNrg

ಜೊತೆಗೆ ಹುಬ್ಬಳ್ಳಿಯಲ್ಲಿರುವ ಪ್ರಖ್ಯಾತ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ
ಬೃಹತ್ ಶೋಭಯಾತ್ರೆ ಮೂಲಕ,
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆಗೆ ಸಮಾಜ ಬಂಧುಗಳು, ಕಾರ್ಯಕ್ರಮದ ಸ್ಥಳಕ್ಕೆ ನಡಿಗೆ ಮೂಲಕ ಅಗಮಿಸಿದರು.
ಕರ್ನಾಟಕ ರಾಜ್ಯ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ಧಿ ಸಂಘದ
ಅಧ್ಯಕ್ಷರಾದ ಬಾಬುರಾವ ಜಾಮದಾರ,
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಉಪಾಧ್ಯಕ್ಷರಾದ
ಮಹದೇವಪ್ಪ ಕರ್ಜಗಿ,
ವಾಯುವ್ಯ ಸಾರಿಗೆ ಗಂಗಾಮತಸ್ಥ ನೌಕರರ ಸಂಘದ ಅಧ್ಯಕ್ಷರಾದ.
ಹನುಮಂತಪ್ಪ ಇಟಗಿ,
ಹುಬ್ಬಳ್ಳಿ ಗಂಗಾಮತಸ್ಥ ಹಿತರಕ್ಷಕ ಸಂಘದ ಅಧ್ಯಕ್ಷರಾದ ಅಶೋಕ ಕುಮಾರ ಬೆಸ್ತ.
ಮನೋಜ ಕರ್ಜಗಿ,
ಹಾನಗಲ್ ತಾಲ್ಲೂಕಿನ ಗಂಗಾಮತಸ್ಥ ಸಮಾಜದ ಪ್ರಭಲ ಮುಖಂಡರಾದ ಚಂದ್ರಪ್ಪ ಜಲಗಾರ,
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಏಕೈಕ ಕಾರ್ಪೋರೇಟರ್
ಸತೀಶ್ ಸುರೇಂದ್ರ ಹಾನಗಲ್,


ಹಾಗೂ ಇನ್ನೂ ಅಸಂಖ್ಯಾತ ಸಮಾಜದ
ಮುಖಂಡರು, ನಾಯಕರು, ಸಾಧಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.
ಇದೆ ಕಾರ್ಯಕ್ರಮದಲ್ಲಿ ಹತ್ತಾರು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ
ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಇದೆ ರೀತಿಯ ಜಾಗೃತಿ ರಾಜ್ಯದ ಪ್ರತಿಯೊಂದು ಕಡೆ ನೆಡೆಯಲಿ ಎಂದು ಸಮಸ್ತ ಬಂಧುಗಳುವತಿಯಿಂದ ಶುಭ ಹಾರೈಕೆಗಳು.

Be the first to comment

Leave a Reply

Your email address will not be published.


*