ಮೀನುಗಾರಿಕೆ ಸುದ್ದಿಗಳು
ದೇಶದ ಬೆನ್ನೆಲಬು ರೈತ ನಂತರದ ಸ್ಥಾನ ಮೀನುಗಾರರು, ಆದರೆ ಈ ವರ್ಷ ಪ್ರಕೃತಿ ಮುನಿಸಿಕೊಂಡು
ಮೀನುಗಾರಿಕೆಯಿಂದ ಮೀನು ಸಿಗದೇ ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಈ ಸಂದರ್ಭದಲ್ಲಿ ದೇಶದಲ್ಲಿ ಕರೋನಾ ವೈರಸ್ ತಾಂಡವವಾಡುತ್ತಿದ್ದು ಮೀನುಗಾರರಿಗೆ ದಿಕ್ಕು ತೋಚದಾಗಿದೆ. ಬೋಟ್ ನಲ್ಲಿ ದುಡಿಯುವ ಕೂಲಿ ಕಾರ್ಮಿಕರು ಸಹ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮೀನುಗಾರಿಕೆಗೆ ಹೋದರೆ ಮಾತ್ರ ಮೀನುಗಾರರ
ಜೀವನ ಸಾಗುವುದು. ಇನ್ನೂ ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗುವುದರಿಂದ ಮೀನುಗಾರಿಕೆ ಇಲ್ಲಿಗೆ ಕೊನೆಯಾದಂತಾಗಿದೆ. ಆದರೇ ಯಾರೂ ಕೂಡ ಮೀನುಗಾರರ ಸ್ಥಿತಿಗತಿಗಳ ಬಗ್ಗೆ ಹೇಗೆ ಜೀವನ ಸಾಗಿಸಬೇಕು ಅನ್ನುವುದರ ಬಗ್ಗೆ
ಸ್ಥಳೀಯ ಜನಪ್ರತಿನಿಧಿಗಳು, ಮೀನುಗಾರಿಕಾ ಸಚಿವರು, ಅಧಿಕಾರಿಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಚಿಂತಿಸುತ್ತಿಲ್ಲ.
ಮೀನುಗಾರರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಸಹ ಆಗಿಲ್ಲ, ಈ ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ಮೀನುಗಾರರಿಗಾಗಿ ಪ್ರತ್ಯೇಕ ಪ್ಯಾಕೇಜ್ ಅಥವಾ ಅನುದಾನವನ್ನು ಘೋಷಣೆ ಮಾಡಿ ಮೀನುಗಾರರ ರಕ್ಷಣೆಗೆ ಸ್ಪಂದಿಸಬೇಕು.
Be the first to comment