Breaking News

 11 ಜನರಿಗೆ ಸೋಂಕು ತಗುಲಿಸಿದ 13 ದಿನ ಕ್ವಾರೆಂಟನ್ ನಲ್ಲಿ ಇದ್ದ   ಮಾಹಾನುಬಾವ

ವರದಿ : ಸುನಿಲ್ ಬಾವಿಕಟ್ಟಿ ಬೀದರ

ರಾಜ್ಯ ಸುದ್ದಿಗಳು

   ಬೀದರ ambiganews.tv  : 13 ದಿನಗಳ ಕ್ವಾರೆಂಟನ್ ಮುಗಿಸಿದ ಬಳಿಕವೂ 11 ಜನರಿಗೆ ಕರೋನಾ ಸೋಂಕು ತಗುಲುತ್ತದೆ ಎಂಬ ಆಘಾತಕಾರಿ ಹಾಗೂ ಆತಂಕಕಾರಿ ಸಂಗತಿ ಗಡಿ ಜಿಲ್ಲೆ ಬೀದರ್ ನಿಂದ ಹೊರಬಿದ್ದಿದೆ.

ಇದು ಬೀದರ ಜಿಲ್ಲೆಯಷ್ಟೇ ಅಲ್ಲ ರಾಜ್ಯ ಹಾಗೂ ದೇಶದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಹೋಮ್ ಕ್ವಾರೆಂಟನ ಮುಗಿದಿದೆ ಎಂದು ಯಾರಾದರೂ ಹೊರಗೆ ಬಂದರೆ ಖಂಡಿತ ಎಚ್ಚರವಹಿಸಬೇಕಾಗುತ್ತದೆ. ನಾನು ಬರುತ್ತೇನೆ ಹುಷಾರ್ ಎಂಬ ಎಚ್ಚರಿಕೆ ಗಂಟೆ ಕರೋನಾ ಬಾರಿಸಿದೆ.

13 ದಿನಗಳ ಕಾಲ ಯಾವುದೇ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿರಲಿಲ್ಲ.ಅವರೆಲ್ಲ ಹಾಯಾಗಿ ಇದ್ದರು. ಪ್ರತಿ ನಿತ್ಯ ವೈದ್ಯರು ಬೆಳಗ್ಗೆ ಹಾಗೂ ಸಂಜೆ ಆರೋಗ್ಯ ತಪಾಸಣೆ ಮಾಡಿದ್ದರು.

ಹೀಗಾಗಿ 11 ಜನರು ಕುಟುಂಬ ಸದಸ್ಯರೊಂದಿಗೆ ಬೆರೆತಿದ್ದರು. ನಮಗೆ ಯಾವುದೇ ಸೋಂಕಿನ ಲಕ್ಷಣವಿಲ್ಲ ಎಂದು ನಿಟ್ಟಿಸಿರು ಬಿಟ್ಟಿದ್ದರು.

ನಾವು ಚೆನ್ನಾಗಿ ಇದ್ದೀವಿ ಎಂದು 11 ಜನರು 98 ಜನರೊಂದಿಗೆ ಬೆರೆತಿದ್ದರು. ಈಗ ಹೊರಗೆ ಬಂದವರಿಗೆ ಶಾಕ್ ಆಗಿದೆ.

ಎಲ್ಲ 11 ಜನರ ರಿಪೋರ್ಟ್ ಪಾಸಿಟಿವ್ ಬಂದಿರುವುದು ಇವರ ಜೊತೆಗೆ ಸಂಪರ್ಕ ಹೊಂದಿದ 98 ಜನರನ್ನು ಬೆಚ್ಚಿ ಬೀಳಿಸಿದೆ.

ಸಂಪರ್ಕಹೊಂದಿದ್ದ  ಕುಟುಂಬ ಸದಸ್ಯರು ಹಾಗೂ ಗೆಳೆಯರು ಹಾಗೂ ಸಂಪರ್ಕ ಸಾಧಿಸಿದ ಎಲ್ಲರು ಗಲಿಬಿಲಿಗೊಂಡಿದ್ದಾರೆ.

 

Be the first to comment

Leave a Reply

Your email address will not be published.


*