ಇಳಕಲ್ ಸರ್ಕಾರಿ ನೌಕರರ ಸಂಘ ಕ್ರೀಯಾತ್ಮಕ ಮಾದರಿ ಶಾಖೆಯಾಗಿದೆ-ತಹಶೀಲದಾರ ಬಿರಾದಾರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ: ಇಲಕಲ್ಲ ತಾಲೂಕಿನ ತಹಶೀಲದಾರ ಕಾರ್ಯಾಲಯದ ಸಭಾಭವನದಲ್ಲಿ ನಡೆದ 2022-23 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ನಿವೃತ್ತಿಯಾದ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ತಾಲೂಕಿನ ದಂಡಾಧಿಕಾರಿಗಳಾದ ನಿಂಗಪ್ಪ ಬಿರಾದಾರ ರವರು ಇಳಕಲ್ ಸರ್ಕಾರಿ ನೌಕರರ ಸಂಘವು ಕ್ರೀಯಾತ್ಮಕ ಮಾದರಿ ಶಾಖೆಯಾಗಿದ್ದು, ಸರ್ಕಾರಿ ನೌಕರರ ಆಶೋತ್ತರಗಳಿಗೆ ಸ್ಪಂದಿಸುತ್ತ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

CHETAN KENDULI

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಅಧ್ಯಕ್ಷರಾದ ಪರಶುರಾಮ ಎಸ್ ಪಮ್ಮಾರ , ಸಂಘವು ನೂತನ ಶಾಖೆಯಾದರೂ ಸಹ ಭೌತಿಕ ಸಂಪನ್ಮೂಲದ ಕೊರತೆಯ ನಡುವೆಯೂ ರಚನಾತ್ಮಕವಾದ ಕಾರ್ಯವನ್ನು ಮಾಡುತ್ತ ಬಂದಿದ್ದು,ಇದಕ್ಕೆಲ್ಲ ತಾಲೂಕಿನ ಸಮಸ್ತ ಸರ್ಕಾರಿ ನೌಕರರ ಹಾಗೂ ಪದಾಧಿಕಾರಿಗಳ ಸಹಕಾರ ಕಾರಣವಾಗಿದ್ದು;ಈ ನಿಟ್ಟಿನಲ್ಲಿ ಸಂಘಶಕ್ತಿಗೆ ತಮ್ಮದೇ ಕೊಡುಗೆ ನೀಡಿ ನಿವೃತ್ತಿಯಾದ ಪದಾಧಿಕಾರಿಗಳ ಕಾರ್ಯ ಸ್ತುತಾರ್ಹ್ಯವಾಗಿದೆ ಎಂದರು.ಹಾಗೂ ಸಧ್ಯದಲ್ಲಿಯೇ ಏಳನೇ ವೇತನ ಆಯೋಗದ ಸಂಪೂರ್ಣ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಲಿದ್ದು.ಸರ್ಕಾರವು ಅನುಷ್ಠಾನ ಮಾಡುವ ಭರವಸೆ ಇದೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತಿ ಹಾಗೂ ವರ್ಗಾವಣೆಯಿಂದ ತೆರವಾಗಿದ್ದ ನಿರ್ದೇಶಕ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನಾಗಿ ಆರೋಗ್ಯ ಇಲಾಖೆಯ ಶ್ರೀ ಶರಣಬಸು ಕೊಣ್ಣೂರ ರವರು ಪ್ರಭಾರಿ ಖಜಾಂಚಿಯಾಗಿ,ನಿರ್ದೇಶಕರಾಗಿ ಗ್ರಾಮೀಣಾಭಿವೃಧ್ದಿ ಇಲಾಖೆಯ ಶ್ರೀ ಶಿವಪುತ್ರಪ್ಪ ಬಿ ಕತ್ತಿ,ಆರೋಗ್ಯ ಇಲಾಖೆಯಿಂದ ಶ್ರೀ ಅನಿತ್ ಕುಮಾರ ಟಿ ನಾಯಕ,ಶ್ರೀ ಲಿಂಗರಾಜ ಲೆಕ್ಕದ,ಉಪಖಜಾನೆ ಇಲಾಖೆಯಿಂದ ಸುನಿಲ್ ಪಡತಾರೆ ರವರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ 2022-23 ನೇ ಸಾಲಿನ ಸಂಘದ ಲೆಕ್ಕಪತ್ರಗಳ ಅಡಿಟ್ ಹಾಗೂ ವಾರ್ಷಿಕ ವರದಿಯನ್ನು ಪ್ರಭಾರಿ ಖಜಾಂಚಿಗಳಾದ ಶರಣಬಸು ಕೊಣ್ಣೂರ ರವರು ಸಭೆಯ ಮುಂದೆ ಮಂಡಿಸಿ,ನೌಕರರಿಂದ ಚಪ್ಪಾಳೆಯ ಮೂಲಕ ಅನುಮೋಧನೆಯನ್ನು ಪಡೆದರು.ಹಾಗೂ ನಿವೃತ್ತಿಯಾದ ಪದಾಧಿಕಾರಿಗಳಾದ ಖಜಾಂಚಿಗಳಾಗಿದ್ದ ಶ್ರೀ ಮಹಾಂತಗೌಡ ಗೌಡರ,ಹಿರಿಯ ಉಪಾಧ್ಯಕ್ಷರಾಗಿದ್ದ ಶ್ರೀ ಈಶ್ವರ ಹುದ್ದಾರ,ಉಪಾಧ್ಯಕ್ಷರಾಗಿದ್ದ ಶ್ರೀ ನೀಲಪ್ಪ ಗೌಡರ ರವರನ್ನು ಸಂಘಧ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಗ್ರೇಡ್ ‍2 ತಹಶೀಲದಾರರಾದ ಈಶ್ವರ ಎಸ್ ಗಡ್ಡಿ,ಕಾರ್ಯದರ್ಶಿ ಗುಂಡಪ್ಪ ಎ ಕುರಿ,ಗೌರವಾಧ್ಯಕ್ಷ ಶರಣಪ್ಪ ಗಡೇದ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಾಕೀರ ಗಡೇದ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿ ಎಸ್ ಅಡವಿ,ಕಂದಾಯ ಇಲಾಖೆ ನೌಕರ ಸಂಘದ ಅಧ್ಯಕ್ಷರಾದ ಸಿ ಎಸ್ ಕೊಣ್ಣೂರ ಹಾಗೂ ಸರ್ವ ಪದಾಧಿಕಾರಿಗಳು,ಸರ್ಕಾರಿ ನೌಕರರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*