ಬಾಗಲಕೋಟೆ:ಇಳಕಲ್ಲ ತಾಲ್ಲೂಕಿನ ಕೆಲೂರ ಗ್ರಾಮದ ಪಶು ಚಿಕಿತ್ಸಾ ಕೇಂದ್ರದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ನೀಡುವ ಅಭಿಯಾನಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಚಾಲನೆ ನೀಡಿದರು.
ನಂತರ ಮಾತನಾಡಿ ಜಾನುವಾರುಗಳಿಗೆ ಕಾಲುಬಾಯಿ ರೋಗ ತಡೆಗಟ್ಟಲು ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿ ಮತ್ತು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ನಿರ್ಲಕ್ಷ್ಯ ಮಾಡಿದರೆ ಒಂದು ಜಾನುವಾರಿಗೆ ಬಂದ ಕಾಯಿಲೆ ಮತ್ತೊಂದು ಜಾನುವಾರುಗಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.ಕಾಲುಬಾಯಿ ರೋಗ ನಿಯಂತ್ರಣಕ್ಕೆ ರೈತರು ತಮ್ಮ ಜಾನುವಾರುಗಳಿಗೆ ಪಶು ಸಂಗೋಪನಾ ಇಲಾಖೆ ವತಿಯಿಂದ ಉಚಿತವಾಗಿ ಲಸಿಕೆ ಹಾಕಿಸಿ ರೋಗ ಮುಕ್ತ ಜಾನುವಾರು ಮಾಡಲು ರೈತರು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷರಾದ ಶ್ರೀಮತಿ ರತ್ನಾ.ಬಿ.ಮಾದರ,ಸದಸ್ಯರಾದ ಹನಮಂತ ವಡ್ಡರ ಹಾಗೂ ಇತರೆ ಸದಸ್ಯರು,ಪಶು ವೈದ್ಯಾಧಿಕಾರಿಗಳಾದ ಡಾ|| ಶರಣಬಸು ಮರೋಳ, ಜಿ.ಜಿ.ಬಿಲ್ಲೂರ,ಹೆಚ್.ಆರ್.ದಾಸರ,ಸಂತೋಷ ಹನಮಸಾಗರ,ಪಶು ಸಖಿಯರಾದ ಶ್ರೀಮತಿ ಲಕ್ಷ್ಮಿ ಅಂಗಡಿ ಹಾಗೂ ರೈತರು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
Be the first to comment