ವಿದ್ಯಾರ್ಥಿಗಳಿಂದ ಸೊಳ್ಳೆ ನಿಯಂತ್ರಣ ಕುರಿತು ಮಾದರಿ ಪ್ರದರ್ಶನ

ವರದಿ: ಬಸವರಾಜ ಕುಂಬಾರ

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

ವಿಶ್ವ ಸೊಳ್ಳೆ ದಿನಾಚರಣೆಯ ಅಂಗವಾಗಿ ಪಟ್ಟಣದ ಹೊರಪೇಟೆಗಲ್ಲಿಯ ವಾಲ್ಮೀಕಿ ವೃತ್ತದ ಬಳಿ ಇರುವ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸೊಳ್ಳೆ ನಿಯಂತ್ರಣ ಕುರಿತು ವಿಧಾನಗಳ ಬಗ್ಗೆ ಮಾದರಿ ಪ್ರದರ್ಶನವನ್ನು ತಾಲ್ಲೂಕಿನ ನಾಲತವಾಡ, ತಾಳಿಕೋಟಿ, ತಂಗಡಗಿ ರೂಡಗಿ,ಡವಳಗಿ,ಪೀರಾಪುರ, ಮುಖಿಹಾಳ,ಎಚ್ ಪಿ ಎಸ್ ಮುದ್ದೇಬಿಹಾಳ ಸುಮಾರು 18 ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಸೊಳ್ಳೆ ನಿಯಂತ್ರಣ ಕುರಿತು ಮಾದರಿ ಪ್ರದರ್ಶನವನ್ನು ಪ್ರದರ್ಶಿಸಿದರು.

ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ್ ತಿವಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಮಲೇರಿಯಾ ರೋಗ ಇತಿಹಾಸದಲ್ಲೇ ಮಾರಕ ಕಾಯಿಲೆ ಎಂದು ಹೇಳಲಾಗುತ್ತದೆ ಈ ರೋಗದ ಬಗ್ಗೆ ಈ ಸಂಶೋಧನೆಯನ್ನು ಮಾಡಿದ

ಭಾರತೀಯ ಮೂಲದ ಬ್ರಿಟನ್ ವೈದ್ಯ ರೊನಾಲ್ಡ್ ರಾಸ್ ಅವರು ಮನುಷ್ಯನಿಂದ ಮನುಷ್ಯನಿಗೆ ಮಲೇರಿಯಾ ಹರಡಲು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯೇ ಕಾರಣ ಎಂಬ ವಿಷಯವನ್ನು 1897ರ ಆಗಸ್ಟ್ 20ರಂದು ಕಂಡು ಹಿಡಿದಿದರು. ಈ ಸಂಶೋಧನೆಯ ನೆನಪಾಗಿ ಸೊಳ್ಳೆ ದಿನ ಆಚರಿಸಲಾಗುತ್ತದೆ. ರೊನಾಲ್ಡ್ ರಾಸ್ 1902ರಲ್ಲೇ ವಿಶ್ವ ಸೊಳ್ಳೆ ದಿನ ಎಂದು ಮೊದಲ ಬಾರಿಗೆ ಘೋಷಿಸಿದರು. ಅಂದಿನಿಂದ ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಸೊಳ್ಳೆ ನಿಯಂತ್ರಣದ ಕುರಿತು ತಾವೇ ಮಾಡಿಕೊಂಡು ಬಂದಿದ್ದ ಮಾದರಿ ಪ್ರದರ್ಶನ ಆಕರ್ಷಿಸಿತು. ಸೊಳ್ಳೆಗಳ ನಿಯಂತ್ರಣ ಹಾಗೂ ಅಪಾಯಗಳ ಬಗ್ಗೆ ಭಾಗವಹಿಸಿದ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳು ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಕುರಿತು ತಯಾರಿಸಿದ ಪ್ರದರ್ಶನದ ಚಿತ್ರ ತೋರಿಸಿ ಮಾತನಾಡಿ,ಮಲೇರಿಯಾ, ಡೆಂಗ್ಯು, ಚಿಕುನ್‍ಗುನ್ಯ ಮಿದುಳು ಜ್ವರ ಆನೆಕಾಲು ರೋಗದಂತಹ ರೋಗಗಳು ಅನೇಕ ಜಾತಿಯ ರೋಗವಾಹಕ ಸೊಳ್ಳೆಗಳ ಕಡಿತದಿಂದ ಉಂಟಾಗುತ್ತದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಚವಾಗಿಟ್ಟುಕೊಳ್ಳುವುದು ಸೇರಿದಂತೆ ಮುಂಜಾಗರೂಕತಾ ಕ್ರಮಗಳಿಂದ ಇದರಿಂದ ಪಾರಾಗಬಹುದು ಎಂದು ಸವಿಸ್ತಾರವಾಗಿ ವಿವರಿಸಿದರು 

ಬಹುಮಾನ: ಪ್ರಾಥಮಿಕ ಶಾಲೆಗೆ ಮೂರು ಹಾಗೂ ಪ್ರೌಢಶಾಲೆಗೆ ಮೂರು ರಂತೆ ಬಹುಮಾನ ನೀಡಲಾಗುವುದು ಆಯ್ಕೆಯಾದ ಶಾಲೆಗೆ ಪ್ರಥಮ ಬಹುಮಾನ ರೂ.750 ದ್ವಿತೀಯ ಬಹುಮಾನ ರೂ.500 ತೃತೀಯ ಬಹುಮಾನ ರೂ.250 ನಗದು ರೂಪದ ಬಹುಮಾನವನ್ನು ಆರೋಗ್ಯ ಇಲಾಖೆಯಿಂದ ತಾಲೂಕು ಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹುಮಾನ ನೀಡಲಾಗುವುದು 

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಎಚ್ ಎ ಮೇಟಿ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೇರದಾಳ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಐ ಸಿ ಮಾನಕರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ, ಎಂಟಿಎಸ್ ಎಸ್ ಸಿ ರುದ್ರವಾಡಿ, ಬಸವರಾಜ್ ಶಿವುರಾಜ್ ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

Be the first to comment

Leave a Reply

Your email address will not be published.


*