ಶೇ 24.1% ಎಸ್ಸಿ-ಎಸ್ಟಿ ವಿದ್ಯಾರ್ಥಿ ಅನುದಾನ ಮೀಸಲಿಡುವಂತೆ ಎಸ್ ಎಫ್ ಐ ಆಗ್ರಹ

ಮಸ್ಕಿ,ರಾಜ್ಯದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೀಸಲಿರುವ ಶೇ 24.1% ಅನುದಾನವನ್ನು ಮೀಸಲಿಡುವಂತೆ ಎಸ್ ಎಫ್ ಐ ಸಂಘಟನೆ ಸಚಿವರಲ್ಲಿ ಮನವಿ ಸಲ್ಲಿಕೆ.

 

 

ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚೇತ್ ರಾಜ್ ಕಾಯ್ದೆ 1993ರ ಪ್ರಕಾರ ಗ್ರಾಮ ಪಂಚಾಯತಿ ಅನುದಾನದ ಅಡಿ ಶೇ 24.1% ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಎಂದು ಪಠ್ಯಪುಸ್ತಕ ಹಾಗೂ ಇತರ ಖರ್ಚಿಗಾಗಿ ಅನುದಾನವನ್ನು ಮೀಸಲಿಡಬೇಕು ಎಂಬ ನಿಯಮ ಇದೆ. ಆದರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಬೇಜವಾಬ್ದಾರಿತನ ನೆಪ ಹೇಳಿ ಬೇರೆ ಬೇರೆ ರೀತಿಯಾಗಿ ಸರ್ಕಾರದ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ.

 

ಹಾಗಾಗಿ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಉಚಿತ ಪಠ್ಯಪಸ್ತಕ ವಿತರಣೆ ಮಾಡುವಂತೆ ಕೂಡಲೇ ಆದೇಶವನ್ನು ಹೊರಡಿಸಬೇಕೆಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ರವರಲ್ಲಿ ಬೆಂಗಳೂರಿನ ಕಛೇರಿಯಲ್ಲಿ ಭಾರತೀಯ ವಿದ್ಯಾರ್ಥಿ ಸಂಘಟನೆಯ ರಾಯಚೂರು ಜಿಲ್ಲಾ ಸಮಿತಿ ಸದಸ್ಯರು ಹಾಗೂ ಮಸ್ಕಿ ತಾಲೂಕಿನ ಅಧ್ಯಕ್ಷರು ಆದ ಬಸವಂತ ಹಿರೇ ಕಡಬೂರು ಮನವಿ ಪತ್ರ ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*