ಕೆಎಚ್ ಪಿಟಿ ಆಶ್ರಯದಲ್ಲಿ ನರೇಗಾ ಕೂಲಿಕಾರರ ಉಚಿತ ಆರೋಗ್ಯ ತಪಾಸಣೆ

ಮಸ್ಕಿ : ತಾಲೂಕಿನ ವಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರದ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ಕೆಎಚ್ ಪಿಟಿ ಆಶ್ರಯದಲ್ಲಿ ಸೋಮವಾರ ನರೇಗಾ ಕೂಲಿಕಾರರ ಉಚಿತಆರೋಗ್ಯ ತಪಾಸಣೆ ಶಿಬಿರ ಜರುಗಿತು.

 

ವಟಗಲ್ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ್ ದೊಡ್ಡಮನೆ ಮಾತನಾಡಿ, ಮಳೆಗಾಲ ಆರಂಭವಾಗಿರುವುದರಿಂದ ನೆಗಡಿ, ಶೀತ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಕಾಳಜಿ ವಹಿಸಬೇಕು ಎಂದರು.

ಕೆಎಚ್ ಪಿಟಿ ತಾಲ್ಲೂಕು ಸಂಯೋಜಕರಾದ ಹನುಮಂತ ಮಾತನಾಡಿ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಪ್ರತಿಯೊಬ್ಬರು ಆರೋಗ್ಯ ತಪಾಸಣೆಗೆ ಒಳಗಾಗಿ ಶಿಬಿರ ವನ್ನು ಯಶಸ್ವಿಗೊಳಿಸಬೇಕು ಎಂದರು. ಎನ್ಆರ್ ಎಲ್ಎಂ ಮಸ್ಕಿ ವಲಯ ಮೇಲ್ವಿಚಾರಕ ಪ್ರಕಾಶ ಮಾತನಾಡಿ, ಮಹಿಳಾ ಕೂಲಿಕಾರರನ್ನು ಸ್ವ ಸಹಾಯ ಗುಂಪುಗಳಲ್ಲಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

 

 

ಈ ವೇಳೆ ತಾಂತ್ರಿಕ ಸಹಾಯಕ ಅಭಿಯಂತರರಾದ ಮಾನಪ್ಪ ರತ್ನಗಿರಿ, ಐಇಸಿ ಸಂಯೋಜಕ ಜಿ. ಸತೀಶ್ , ವಟಗಲ್ ಗ್ರಾ.ಪಂ ಉಪಾಧ್ಯಕ್ಷ ಬಸನಗೌಡ ಬಾಲರೆಡ್ಡಿ, ಗ್ರಾ.ಪಂ ಸದಸ್ಯೆ ಶಿಲ್ಪಾ ಅಳ್ಳಪ್ಪ, ಸಮುದಾಯ ಆರೋಗ್ಯ ಅಧಿಕಾರಿ ನಿವೇದಾ, ಅಂಗನವಾಡಿ ಕಾರ್ಯಕರ್ತೆ ‌ಮಂಜುಳಾ, ವಿಆರ್ ಡಬ್ಲ್ಯು ಭೀಮಪ್ಪ, ಗ್ರಾಮ ಕಾಯಕ ಮಿತ್ರ ಅಕ್ಕಮ್ಮ, ಬಿಆರ್ಫಿ ಭವಾನಿ, ಮೇಟಿಗಳು ಇತರರು ಇದ್ದರು.

Be the first to comment

Leave a Reply

Your email address will not be published.


*