ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರೀಯೆ ಕಾನೂನು ಬಾಹಿರ ; ಅತಿಕ್ರಮಣದಾರರಿಗೆ ವಿಚಾರಣೆಗೆ ನೀಡುವ ತಿಳುವಳಿಕೆ ಪತ್ರಕ್ಕೆ ತೀವ್ರ ಆಕ್ಷೇಪ- ರವೀಂದ್ರ ನಾಯ್ಕ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಶಿರಸಿ

ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರೀಯೆ ನಾಮನಿರ್ಧೇಶನ ಸದಸ್ಯರ ಅನುಪಸ್ಥಿತಿ ಮತ್ತು ವೈಯಕ್ತಿಕ ಮೂರು ತಲೆಮಾರಿನ ದಾಖಲೆಗಳ ಅಗ್ರಹಿಸುವಿಕೆಗೆ ಸಂಬAಧಿಸಿ ಅತಿಕ್ರಮಣದಾರರಿಗೆ ವಿಚಾರಣೆಗೆ ನೀಡುವ ತಿಳುವಳಿಕೆ ಪತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಕ್ಷಣ ಕಾನೂನು ಬಾಹಿರ ಮಂಜೂರಿ ಪ್ರಕ್ರೀಯೆ ಸ್ಥಗಿತಗೊಳಿಸಲು ಅಗ್ರಹಿಸಲಾಯಿತು.  ಇಂದು ಶಿರಸಿಯ ಉಪವಿಭಾಗಾಧಿಕಾರಿ ದೇವರಾಜ್ ಆರ್ ಅವರಿಗೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಮನವಿ ನೀಡಿ ಮೇಲಿನಂತೆ ಅಗ್ರಹಿಸಲಾಯಿತು.

CHETAN KENDULI

   ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿ, ನಾಮನಿರ್ಧೇಶನ ಸದಸ್ಯರ ಅನುಪಸ್ಥಿತಿ ಹಾಗೂ ಮೂರು ತಲೇಮಾರಿನ ಪೂರ್ವದಿಂದ ದೃಢೀಕೃತ ಮತ್ತು ವಾಸಮಾಡುವ ಭೂಮಿಯ ಕಬ್ಜಾ ಹೊಂದಿರುವ ವೈಯಕ್ತಿಕ ದಾಖಲೆ ಹಾಜರುಪಡಿಸಲು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನು ಮತ್ತು ಸರಕಾರದ ಆದೇಶದಲ್ಲಿ ಉಪವಿಭಾಗ ಸಮಿತಿ ಅರಣ್ಯ ಅತಿಕ್ರಮಣದಾರರಿಗೆ ವಿಚಾರಣೆ ನೋಟೀಸ್ ನೀಡುತ್ತಿರುವುದು ಆಕ್ಷೇಪನಾರ್ಹ ಕಾರ್ಯವಾಗಿದೆ. ತಕ್ಷಣ ಕಾನೂನು ವ್ಯತಿರಿಕ್ತವಾಗಿ ಅರಣ್ಯ ಅತೀಕ್ರಮಣದಾರರ ಪುನರ್ ಪರಿಶೀಲನೆ ಅರ್ಜಿ ವಿಚಾರಣೆಗೆ ಒಳಪಡುತ್ತಿರುವುದನ್ನು ಆಕ್ಷೇಪಿಸಲಾಯಿತು.

  ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಮಂಜೂರಿಗೆ ಸಂಬAಧಿಸಿ ನಿರ್ದಿಷ್ಟವಾದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ದಾಖಲೆಗಳಿಗೆ ಒತ್ತಾಯಿಸುವದು ಸರಿಯಿಲ್ಲ. ಅಲ್ಲದೇ, ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು ೩ ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಿದರೆ ಸಾಕು ಎಂಬ ಕೇಂದ್ರ ಬುಡಕಟ್ಟು ಮಂತ್ರಾಲಯ ನೀಡಿದ ಆದೇಶವನ್ನು ಜಿಲ್ಲಾಡಳಿತ ನಿರ್ಲಕ್ಷಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸದ್ರಿ ಆದೇಶವನ್ನು ಪರಿಗಣಿಸತಕ್ಕದೆಂದು ಚರ್ಚೆಯಲ್ಲಿ ಉಪವಿಭಾಗಾಧಿಕಾರಿಗಳಿಗೆ ಉಲ್ಲೇಖಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಎಸ್ ಆರ್ ಭಟ್ಟ, ಎಸಿಎಫ ರಘು, ಉಪಸ್ಥಿತರಿದ್ದರು.

  ನಿಯೋಗದಲ್ಲಿ ತಾಲೂಕ ಅಧ್ಯಕ್ಷ ಲಕ್ಷö್ಮಣ ಮಾಳ್ಳಕ್ಕನವರ, ಚಂದ್ರು ನಾಯ್ಕ ಕಂಡ್ರಾಜಿ, ನರಸಿಹ ನಾಯ್ಕ ಮಂಚಿಕೇರಿ, ಶಿವಾನಂದ ನಾಯ್ಕ ಕಂಡ್ರಾಜಿ, ಗಜಾನನ ಮರಾಠಿ, ಬಾಬು ಮರಾಠಿ, ಸಾವಿತ್ರಿ ಹೆಗಡೆ, ರಾಮು ಚುಡಿಯಾ ಮರಾಠಿ, ಸುರೇಶ ನಾಯ್ಕ ಕಂಡ್ರಾಜಿ ಮುಂತಾದವರು ಉಪಸ್ಥಿತರಿದ್ದರು

ಸದಸ್ಯರಿಲ್ಲದೇ, ಮಂಜೂರಿ ಪ್ರಕ್ರೀಯೆ :ಅರಣ್ಯ ಹಕ್ಕು ಸಮಿತಿಯಲ್ಲಿ ಮೂರು ನಾಮನಿರ್ಧೇಶನ ಸದಸ್ಯರನ್ನ ಒಳಗೊಂಡ ಒಟ್ಟು ಆರು ಸದಸ್ಯರು ಇರಬೇಕೆಂಬ ಅಂಶವನ್ನ ಪರಿಗಣನೆಗೆ ತೆಗೆದುಕೊಳ್ಳದೇ, ಕೇವಲ ಅಧಿಕಾರ ವರ್ಗದವರ ಸದಸ್ಯರ ಉಪಸ್ಥಿತಿಯಲ್ಲಿ ಅರಣ್ಯ ಅತಿಕ್ರಮಣದಾರರಿಗೆ ತಿಳುವಳಿಕೆ ಪತ್ರ ನೀಡಿ ದೃಡೀಕರಣ ದಾಖಲೆಗಳನ್ನ ಹಾಜರುಪಡಿಸಲು ಒತ್ತಾಯಿಸುವುದು ಹಾಗೂ ನಿಗದಿಪಡಿಸಿದ ದಿನಾಂಕದAದು ಅತಿಕ್ರಮಣದಾರರು ಹಾಜರಾಗದೆ ಇದ್ದಲ್ಲಿ ನಿಯಮಾನುಸಾರ ಪ್ರಕರಣ ಮುಂದುವರೆಸಲಾಗುವುದೆAದು ತಿಳುವಳಿಕೆ ಪತ್ರದಲ್ಲಿ ಪ್ರಸ್ತಾಪಿಸಿರುವುದಕ್ಕೆ ಅಧ್ಯಕ್ಷ ರವೀಂದ್ರ ನಾಯ್ಕ ಚರ್ಚೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Be the first to comment

Leave a Reply

Your email address will not be published.


*