ಕೆಲೂರ:ಸಿರಿಗನ್ನಡ “ಸಂಜೀವಿನಿ” ನರ್ಸರಿ ಉದ್ಘಾಟನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕೇಂದ್ರ ಸರಕಾರ ಎನ್‌ಆರ್‌ಎಲ್‌ಎಂ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹೊಸ ಹೊಸ ಯೋಜನೆಗಳನ್ನು ತರುವ ಮೂಲಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ. ಅದರಂತೆ ಸಂಜೀವಿನಿ ಒಕ್ಕೂಟ ಹಾಗೂ ನರೇಗಾ ಯೋಜನೆಯಡಿ ನರ್ಸರಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.

CHETAN KENDULI

ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟೆ, ತಾಲೂಕ ಪಂಚಾಯತ ಇಳಕಲ್,ಸಿರಿಗನ್ನಡ “ಸಂಜೀವಿನಿ” ಮಹಿಳಾ ಗ್ರಾಮ ಪಂಚಾಯತ ಒಕ್ಕೂಟ ಕೆಲೂರ, ಹಾಗೂ ಗ್ರಾಮ ಪಂಚಾಯತ, ಕೆಲೂರ ಮತ್ತು ನರೇಗಾ ಯೋಜನೆಯಡಿ, ತೋಟಗಾರಿಕೆ ಇಲಾಖೆ,ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಸಿರಿಗನ್ನಡ “ಸಂಜೀವಿನಿ” ನರ್ಸರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

‘ಮಹಿಳೆಯರ ಆರ್ಥಿಕ ಬಲವರ್ಧನೆ ಮಾಡುವ ಉದ್ದೇಶದಿಂದ ಸರ್ಕಾರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಣೆಗಾಗಿ ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ,ಈ ಯೋಜನೆಯ ಸವಲತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಗಿಡ ಮರಗಳನ್ನು ನೆಟ್ಟು ಅತಿ ಹೆಚ್ಚು ನರ್ಸರಿಗಳನ್ನ ಬೆಳೆಸಬೇಕು.ಇದರಲ್ಲಿ ಒಕ್ಕೂಟದ ಪಾತ್ರ ಮಹತ್ವದ್ದು. ಎಂದು ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಹೇಳಿದರು.

‘ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅಪಾರ. ಮಹಿಳೆಯ ಆರ್ಥಿಕ ಮಟ್ಟ ಸುಧಾರಣೆಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ.ಅರಣ್ಯ ಇಲಾಖೆ,ತೋಟಗಾರಿಕಾ ಇಲಾಖೆ,ಕೃಷಿ ಇಲಾಖೆ, ರೆಷ್ಮೆ ಇಲಾಖೆ ಪ್ರದೇಶಗಳ ವಿಸ್ತರಣೆಯಾಗಬೇಕು.  ಈ ಗ್ರಾಮದ ನರ್ಸರಿ ತಾಲೂಕಿಗೆ ಮಾದರಿಯದಾಗ ಪ್ರತಿಯೊಂದು ಗ್ರಾಮ ಪಂಚಾಯತ ಮಟ್ಟದಲ್ಲಿ ಈ ಯೋಜನೆ ವಿಸ್ತರಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಎಮ್.ವಿ.ಚಳ್ಳಗೇರಿ ಪ್ರಾಸ್ಥಾವಿಕವಾಗಿ ಮಾತನಾಡಿದರು.

ನರ್ಸರಿಗಳಲ್ಲಿ ಮಾವು, ಬೇವು, ತೆಂಗು,ಕರಿಬೇವು, ಸೀತಾಫಲ,ನುಗ್ಗೆ, ಮಲ್ಲಿಗೆ, ಗುಲಾಭಿ,ನಿಂಬೆ ಸೇರಿ ಒಟ್ಟು ಒಂಬತ್ತು ಸಸಿಗಳನ್ನು ತಲಾ ಒಮದು ಸಾವಿರ ಸಸಿಯಂತ ಒಟ್ಟು ಒಂಬತ್ತು ಸಾವಿರ ಸಸಿ ಬೆಳೆಸಲಾಗುವುದು ಎಂದು ತೋಟಗಾರಿಕಾ ಇಲಾಖೆಯವರು ಮಾಹಿತಿ ಹಂಚಿಕೊಂಡರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಕೆಲಸ, ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಇನ್ನಷ್ಟು ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದಿಂದ ನರ್ಸರಿ ಫಾರ್ಮಗಳನ್ನು ನಿರ್ಮಿಸಲು ಮಹಿಳೆಯರಿಗೆ ಉತ್ತೇಜನ ನೀಡಲಾಗುತ್ತಿದೆ ಈ ಯೋಜನೆ ಸದ್ಬಳಕೆಯಾಗಲಿ, ಎಲ್ಲರಿಗೂ ಮಾದರಿಯಾಗಲಿ ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಲಿ ಎಂದು ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಮಾತನಾಡಿದರು.

ಈ ಸಂದರ್ಭದಲ್ಲಿ ತಾ.ಪಂ.ಸನಿ ಜಿ.ಎಸ್.ಶಿರಗುಪ್ಪಿ,ವಲಯಾರಣ್ಯಾಧಿಕಾರಿ ಬಬಲಾದಿ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ,ಗ್ರಾಮ ಪಂಚಾಯತಿ ಸದಸ್ಯರಾದ ರೇಣುಕಾ ಕಮತರ,ಹನಮಂತ ವಡ್ಡರ,ಭೀಮವ್ವ ತೋಟಗೇರ,ನಿಲಮ್ಮ ಕಬ್ಬರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ವಜಿರಪ್ಪ ಪೂಜಾರ,ಗ್ರಾಮದ ಹಿರಿಯರಾದ ಶಂಕ್ರಪ್ಪ ಮಾದನಶೆಟ್ಟಿ,ಸಂಗಪ್ಪ ಹೂಗಾರ,ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮುತ್ತಣ್ಣ ನಾಡಗೌಡರ,ಗೌಡಪ್ಪ ಕೊಪ್ಪದ, ಕಲ್ಲನಗೌಡ ನಾಡಗೌಡರ,ಸಂಜೀವಿನಿ ಒಕ್ಕೂಟದ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*