ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ವಿಜಯಪುರ ಜಿಲ್ಲೆಯ ಆಲಮಟ್ಟಿ ಯೋಜನಾ ಶಾಖೆಯ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆಯಲ್ಲಿ ಇಳಕಲ್ ನಗರಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ ರವರಿಗೆ ಇಳಕಲ್ ತಾಲೂಕು ಸರ್ಕಾರಿ ನೌಕರರ ಸಂಘದ ಪರವಾಗಿ ಸ್ವಾಗತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಮಾದರಿ ವೇತನ,ಎನ್ ಪಿ ಎಸ್ ರದ್ದತಿ, ಪ್ರೌಢಶಾಲಾ/ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳು ಹಾಗೂ ಇಳಕಲ್ ತಾಲೂಕಿನ ನೌಕರರ ಭವನಕ್ಕೆ ಸಂಬಂಧಿಸಿದ ನಿವೇಶನದ ಫೈಲ್ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಂಘದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಉಪಾಧ್ಯಕ್ಷರಾದ ಮೋಹನಕುಮಾರ,ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಎಸ್ ಪಮ್ಮಾರ,ಖಜಾಂಚಿ ಎಂ ಎಚ್ ಗೌಡರ,ಕಾರ್ಯದರ್ಶಿ ಗುಂಡಪ್ಪ ಕುರಿ,ಗೌರವಾಧ್ಯಕ್ಷ ಎಸ್ ಎನ್ ಗಡೇದ,ವೃಂದ ಸಂಘದ ಜಿ ಎಸ್ ಅಡವಿ,ಎಂ ಎಸ್ ಬೀಳಗಿ,ಎಸ್ ಕೆ ಬಂಡರಗಲ್,ಎಸ್ ಎಸ್ ಹರಿಹರ,ಸದಾಶಿವ ಬಾಗಿ,ಜೆ ಜಿ ಗಡೇದ ಹಾಗೂ ನೌಕರ ಸಂಘದ ಪದಾಧಿಕಾರಿಗಳಾದ ಟಿ ವೈ ಗೊಲ್ಲರ,ಎಸ್ ಬಿ ಬಂಗಾರಿ,ಎಸ್ ಎಸ್ ರೇಶ್ಮಿ,ಬಿ ಎಸ್ ಕಾಟಾಪೂರಮಠ,ಕೆ ಬಿ ಕಟ್ಟಿಮನಿ,ಎಸ್ ಎಸ್ ಪತ್ತಾರ,ಬಿ ಎಚ್ ಮುಜಾವರ,ಎಸ್ ಬಿ ಬಿಜಾಪೂರ,ಎಲ್ ಎಸ್ ಲೆಕ್ಕದ,ಎಸ್ ಎಸ್ ದರಗಾದ,ಜಿ ಟಿ ರಾಠೋಡ,ಕೆ ಎಸ್ ಹೊಂಗಲ್,ವಿಜಯ ಗುಡಿಹಿಂದಿನ,ಶ್ರಿಶೈಲ ಕಡ್ಲಿಮಟ್ಟಿ,ಮಾಲಿಪಾಟೀಲ,ಪತ್ತಾರ ,ಪೋಲಿಸಪಾಟೀಲ,ಹರೀಶ್,ಮೆಹಬೂಬ ಆಗ್ರಾ ಹಾಗೂ ನೌಕರ ಬಾಂಧವರು ಉಪಸ್ಥಿತರಿದ್ದರು.
Be the first to comment