ಜೇವರ್ಗಿ ತಾಲ್ಲೂಕಿನ ಶ್ರೀ ಶ್ರೀ ಶ್ರೀ ಹಜರತ್ ಕೊಂದಮೀರೋದ್ದಿನ್ ಜುನೆದಿ ಭಗದಾದ ಶರೀಫ್ ರವರ ಜಾತ್ರೆ ವಿಜೃಂಭಣೆಯಿಂದ ಜರುಗಿತ್ತು.

ವರದಿ :-ರಾಮು.ಬಿ. ಚನ್ನುರು. ಜಿಲ್ಲಾ ವರದಿಗಾರರು

ಜೇವರ್ಗಿ: ತಾಲೂಕಿನ ಶ್ರೀ ಹಜರತ್ ಕೊಂದಮೀರೋದ್ದಿನ್ ಜುನೆದಿ ಭಗದಾದ ಶರೀಫ್ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಪಟ್ಟಣದ ಟಿಪ್ಪು ಸುಲ್ತಾನ್ ಚೌಕಿನಿಂದ ಗಂಧ ಜರುಗುವುದು.

ಷಣ್ಮುಖಪ್ಪ ಹಿರೇಗೌಡರ್ ಮಾತನಾಡಿ ಪ್ರತಿ ವರ್ಷವೂ ಇದ್ದಂತೆ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಐದು ದಿನಕ್ಕೆ ಶರೀಫರ ಜಾತ್ರೆ ಮಹೋತ್ಸವ ಜರಗುವುದು. ಇದು ಯಾವುದೇ ಜಾತಿ ಧರ್ಮ ಮತಗಳ ಭೇದವಿಲ್ಲದೆ ಎಲ್ಲಾ ಸಮುದಾಯದ ಜನರು ಸೇರಿ ಮಾಡುವಂತಹ ಜಾತ್ರಾ ಮಹೋತ್ಸವ ಎಂದು ಹೇಳಿದರು. ಈ ಜಾತ್ರೆಯಲ್ಲಿ ಗೀಗಿ ಪದ ಮತ್ತು ಕವಾಲಿಗಳು ಜರುಗುತ್ತವೆ. ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ ಎಂದು ಹೇಳಿದರು.

ಪ್ರತಿ ವರ್ಷದಂತೆ ಈ ವರ್ಷವೂ ಗಂಧಧೀಪಾ ಮತ್ತು ಗೀಗಿ ಪದಗಳು ಕವಾಲಿಗಳು ಜರಗುವುದು ಎಂದು ಕಮಿಟಿ ತಿಳಿಸಿದೆ.

ಈ ಸಂದರ್ಭದಲ್ಲಿ ಷಣ್ಮುಖಪ್ಪ ಗೌಡ ಹೀರೇಗೌಡ, ಗೌಸುದ್ದೀನ್ ಇನಾಮ್ದಾರ್, ಭೀಮರಾಯ ತಳವಾರ್, ಬಾಬು ಪಟೇಲ್ ಇನಾಮ್ದಾರ್, ದರ್ಗಾದ ಟ್ರಸ್ಟ್ ಕಮಿಟಿಯ ಸರ್ವ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಹಿರಿಯರು ಮತ್ತು ಮುಸ್ಲಿಂ ಬಾಂಧವರು ಎಲ್ಲಾ ಜಾತಿಯ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*