ಜೇವರ್ಗಿ ತಾಲೂಕು ಮಹಾಲಕ್ಷ್ಮಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವದ ಪಾಠ: ಮತ್ತು ಇ.ವ್ಹಿ.ಎಮ್ ಮೊಬಾಯಿಲ್ ಆಪ್ ಮೂಲಕ ವಿದ್ಯಾರ್ಥಿ ಸಂಸತ್ತು ಚುನಾವಣೆ:

ಜಿಲ್ಲಾ:ವರದಿಗಾರರು:-ರಾಮು.ಬಿ. ಚನ್ನುರು (R.B.C)

ಜೇವರ್ಗಿ: ಪ್ರಜಾಪ್ರಭುತ್ವದ ಅಡಿಗಲ್ಲು ಆಗಿರುವ ಚುನಾವಣೆ ವ್ಯವಸ್ಥೆಯ ಬಗ್ಗೆ ಮಾದರಿಯ ಚುನಾವಣಾ ಪ್ರಕ್ರಿಯೆ ಮೂಲಕ ಇಲ್ಲಿನ ನರೇಂದ್ರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಹಾಲಕ್ಷ್ಮಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನೂತನ ಪ್ರಯೋಗ ನಡೆಯಿತು.  ಮೊಬೈಲ್ ಆಪ್ ಮೂಲಕ ಚುನಾವಣಾ ಮತ ಎಣಿಕೆ ಫಲಿತಾಂಶ :

2020 23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ಸಂಸತ್ತು ರಚನೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾದರಿಯಲ್ಲಿ ಮಕ್ಕಳಿಂದ ಚುನಾವಣೆ ನಡೆಸಿ ಫಲಿತಾಂಶ ನೀಡಲಾಯಿತು. ಶಾಲಾ ಪ್ರಧಾನ ಕಾರ್ಯದರ್ಶಿಯಾಗಿ ಹತ್ತನೇ ತರಗತಿಯ ವಿಠಲ. ಸೇರಿದಂತೆ ಮಹಿಳಾ ಪ್ರತಿನಿಧಿಯಾಗಿ ಭಾಗ್ಯಶ್ರೀ ಎಲ್. 10ನೇ ತರಗತಿ ಹಾಗೂ ಆರೋಗ್ಯ ಸಚಿವರಾಗಿ ಶ್ರೀಶೈಲ್ 9ನೇ ತರಗತಿಯ ವಿದ್ಯಾರ್ಥಿ, ಕ್ರೀಡಾ ಸಚಿವರಾಗಿ ಸಂಪತ್ 8ನೇ ತರಗತಿ ವಿದ್ಯಾರ್ಥಿ ಪ್ರವಾಸ ಸಚಿವರಾಗಿ ವೀರೇಶ್ 9ನೇ ತರಗತಿ, ಸಾಂಸ್ಕೃತಿಕ ಸಚಿವರಾಗಿ ಬಸನಗೌಡ 10ನೇ ತರಗತಿ ವಿದ್ಯಾರ್ಥಿಗಳು ಮತದಾನದ ಮೂಲಕ ಆಯ್ಕೆ ಆದರು.

ಮುಖ್ಯ ಗುರುಗಳಾದ ಮಡಿವಾಳಪ್ಪ ಮುಖ್ಯ ಚುನಾವಣಾ ಮೇಲ್ವಿಚಾರಕರಾಗಿದ್ದರು, ಶಿಕ್ಷಕರಾದ ಜೇ.ಬಿ ದೊಡ್ಡಮನಿ. ಬಂದೇನವಾಜ್ ಇನಾಮ್ದಾರ್, ಶ್ರೀಮಂತ ಹೊನ್ನ ಮಳೆ, ಸಿದ್ದಪ್ಪ ನಗನೂರ್, ಸಯಿದಾ ಶಮ, ಮಮತಾ ಸೇರಿದಂತೆ ದೈಹಿಕ ಶಿಕ್ಷಕರಾದ ಶಿವರಾಜ್ ಹಾಗೂ ಶಿವಕುಮಾರ್ ನರೋಣಿ, ಚುನಾವಣಾ ಕರ್ತವ್ಯ ನಿರ್ವಹಿಸಿದ್ದರು.

ವಿದ್ಯಾರ್ಥಿಗಳಿಗೆ ರಾಜಕೀಯ ಪಾಠದ ಅರಿವು ಸಂಸ್ಥೆಯ ಅಧ್ಯಕ್ಷರಾದ ನಿಂಗನಗೌಡ ಪೊಲೀಸ್ ಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಬಾಪುರಾವ ಪಾಗಾ ಹಾಗೂ ಸಂಸ್ಥೆಯ ಕಾರ್ಯಕಾರಿ ಸದಸ್ಯರು ಚುನಾವಣಾ ಪ್ರಕ್ರಿಯೆಗೆ ಹಾಗೂ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.ಪತ್ರಿಕಾ ಶಾಲಾ ಹಂತದಲ್ಲಿ ರಾಜಕೀಯ ನಾಯಕತ್ವ ಬೆಳೆಸಿಕೊಳ್ಳಲು ಇದೊಂದು ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*