ಕೋಲಿ ಸಮಾಜದ ಬಂಧು ಚಂದ್ರಕಾಂತ ಲಕ್ಷ್ಮಣ ಕೋಲಕಾರ ನಿಧನ

ನಿಧನ ವಾರ್ತೆ
ಬೆಳಗಾವಿ ದಿ 3 :-ಮೂಲತ: ತಾಲೂಕಿನ ಬಡಸ ಕೆ ಎಚ್ (ಖಾಲ್ಸಾ) ಗ್ರಾಮದ ನಿವಾಸಿ, ಧಾರವಾಡದ ಚಿತ್ರಕಲಾ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ಚಂದ್ರಕಾಂತ ಲಕ್ಷ್ಮಣ ಕೋಲಕಾರ (ವಯಸ್ಸು 75) ರವರು ದಿ 3 ರಂದು ಅಲ್ಪಕಾಲಿನ ಅನಾರೋಗ್ಯದಿಂದ ನಿಧನರಾದರು
ಮೃತರು ತಮ್ಮ ಹಿಂದೆ ಪತ್ನಿ, ಇಬ್ಬರು ಸುಪುತ್ರರು, ಓರ್ವ ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ, ಅವರ ಶಿವಗಣಾರಾಧನೆ ಬುಧವಾರ ಧಾರವಾಡದ ಮದಿಹಾಳದ ಸ್ವನಿವಾಸ ದಲ್ಲಿ ಜರುಗಲಿದೆ

ಸಂತಾಪ :- ಸರಳ ಸಜ್ಜನಿಕೆಯ ಸಮಾಜ ಬಂಧು ಚಂದ್ರಕಾಂತ ಕೋಲಕಾರ ನಿಧನಕ್ಕೆ ಬೆಳಗಾವಿ ಜಿಲ್ಲಾ ಗಂಗಾಮತ ಸಮಾಜ ಸಂಘದ ಪದಾಧಿಕಾರಿಗಳು ಶೋಕ ವ್ಯಕ್ತ ಪಡಿಸಿ ಅವರ ಆತ್ಮಕ್ಕೆ ಚಿರಶಾಂತಿ ಬಯಸಿದ್ದಾರೆ

Be the first to comment

Leave a Reply

Your email address will not be published.


*