ಭಟ್ಕಳ:
ರಾಜಸ್ಥಾನದ ಉದಯಪುರದಲ್ಲಿ ಹಿಂದು ಯುವಕ ಬಡ ಟೈಲರ್ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಖಂಡಿಸಿ ಭಟ್ಕಳದ ಪ್ರವಾಸಿ ಮಂದಿರದಿಂದ ವಿಶ್ವ ಹಿಂದು ಪರಿಷತ್ ಭಟ್ಕಳ ಘಟಕ, ಹಿಂದೂ ಜಾಗರಣ ವೇದಿಕೆ ಭಟ್ಕಳ್ ಘಟಕ ಮತ್ತು ಭಟ್ಕಳ ಬಿ.ಜೆ.ಪಿ ತಾಲೂಕು ಘಟಕದ ಆಶ್ರಯದಲ್ಲಿ ಸೋಮವಾರ ಪ್ರತಿಭಟನೆ ಮೆರವಣಿಗೆ ನಡೆಸಿ ಭಟ್ಕಳದ ಆಡಳಿತ ಸೌದದಲ್ಲಿ ಎಲ್ಲರೂ ಸೇರಿ ಕನ್ನಯ ಲಾಲ್ ಹಂತಕರಿಗೆ ಗಲ್ಲು ಶಿಕ್ಷೆ ವಿದಿಸುವಂತೆ ಆಗ್ರಹಿಸಿ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿಯವರ ಮೂಲಕ ಮಾನ್ಯ ರಾಷ್ಟ್ರಪತಿಗಳು, ಮಾನ್ಯ ಪ್ರಧಾನಮಂತ್ರಿಗಳು, ಮಾನ್ಯ ಗ್ರಹ ಮಂತ್ರಿಗಳು ಮತ್ತು ರಾಜಸ್ತಾನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇಧಿಕೆ ಮುಖಂಡ ರಾಮಕೃಷ್ಣ ನಾಯ್ಕ, ಕನ್ಹಯ್ಯಾ ಲಾಲ್ ಅವರನ್ನು ಜಿಹಾದಿಗಳು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಭಾರತದಲ್ಲಿ ಮೊದಲೆಲ್ಲಾ ರಾತ್ರಿ ಹೊತ್ತಿನಲ್ಲಿ ಯಾರಿಗೂ ಗೊತ್ತಾಗದಂತೆ ಕೊಲೆ ಮಾಡುತ್ತಿದ್ದರು. ನಂತರ ಹಗಲು ಹೊತ್ತಿನಲ್ಲಿ ಮುಸುಕುಗಳನ್ನು ಹಾಕಿಕೊಂಡು ಕೊಲೆಯನ್ನು ಮಾಡಲು ಪ್ರಾರಂಭಿಸಿದರು. ಆದರೆ ಇತ್ತೀಚೆಗೆ ಯಾವುದೇ ಭಯವಿಲ್ಲದೆ ಹಗಲು ಹೊತ್ತಿನಲ್ಲಿಯೇ ಬರ್ಬರವಾಗಿ ಕೊಲೆ ಮಾಡಿ, ಮಾಡಿದ ಕೊಲೆ ಘಟನೆಯ ವಿಡಿಯೋವನ್ನು ಹರಿಬಿಡುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ದೇಶದ ಶಾಂತಿ ಸುವ್ಯವಸ್ಥೆಗೆ ಮಾರಕವಾಗಿದ್ದು, ಈಗಿನಿಂದಲೆ ಈ ಬಗ್ಗೆ ಎಚ್ಚರಿಕೆಯನ್ನು ವಹಿಸಿಕೊಂಡು, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿ.ಜೆ.ಪಿ ತಾಲೂಕ ಅಧ್ಯಕ್ಷ ಸುಬ್ರಾಯ ದೇವಡಿಗ ಮಾತನಾಡಿ ಕನ್ಹಯ್ಯಾ ಲಾಲ್ ಹತ್ಯೆ ಬೀಭತ್ಸ ಘಟನೆಯಾಗಿದೆ. ದೇಶದಾದ್ಯಂತ ಈ ಘಟನೆಯಿಂದ ಅಶಾಂತಿ ವಾತಾವರಣ ಸೃಷ್ಟಿಯಾದಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೊಲೆ ಆರೋಪಿಗಳ ಮೇಲೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿದರು.ನಮ್ಮ ಹಿಂದುಗಳ ಸಹನೆಯನ್ನು ಕೆಣಕಬಾರದು ಎಂದರು. ಹಿಂದುಗಳ ಈ ರೀತಿ ಘೋರ ಹತ್ಯೆಯಾದರು ಆರೋಪಿಗಳ ಬಗ್ಗೆ ಕಾಂಗ್ರೆಸಿಗರ ಮೃದು ಧೋರಣೆ ಬಗ್ಗೆ ಟೀಕಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತು ಮುಖಂಡ ಶಂಕರ ಶೆಟ್ಟಿ, ಹಿಂದೂ ಜಾಗರಣ ವೇಧಿಕೆ ಮುಖಂಡ ರಾಘು ನಾಯ್ಕ, ಶ್ರೀನಿವಾಸ ನಾಯ್ಕ ಹನುಮಾನ್ ನಗರ , ಬಿ.ಜಿ.ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತರಾಂ, ಬಿ.ಜೆ.ಪಿ ಯುವಮೊರ್ಚ್ ಭಟ್ಕಳ ಘಟಕ ಅಧ್ಯಕ್ಷ ಮಹೇಂದ್ರ ನಾಯ್ಕ, ಪುರಸಭಾ ಸದಸ್ಯ ಶ್ರೀಕಾಂತ್ ನಾಯ್ಕ, ದಿನೇಶ್ ಗಾವಳಿ, ರವಿ ನಾಯ್ಕ ಜಾಲಿ, ಬಿ.ಜೆ.ಪಿ ಮುಖಂಡ ಪ್ರಮೋದ್ ಜೋಶಿ, ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು , ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು, ಬಿ.ಜೆ.ಪಿ ಕಾರ್ಯಕರ್ತರು , ಮುಂತಾದವರು ಉಪಸ್ಥಿತರಿದ್ದರು.
Be the first to comment